ಪುತ್ತೂರು ಆಸ್ಪತ್ರೆಯಲ್ಲಿ ಕೊರೋನಾ ಸೋಂಕಿತ ವ್ಯಕ್ತಿಯ ಚಿಕ್ಕಮ್ಮ ನಿಧನ ; ಕೋವಿಡ್ ಸರಕಾರಿ ನಿಯಮದಂತೆ ಅಂತ್ಯಕ್ರಿಯೆ ನಡೆಸಿದ ಹಿಂಜಾವೇ – ಬಿಜೆಪಿ ಮುಖಂಡರು – ಕಹಳೆ ನ್ಯೂಸ್
ಪುತ್ತೂರು: ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೊರೋನಾ ಸೋಂಕಿತ ವ್ಯಕ್ತಿಯ ೮೫ ವರ್ಷ ಪ್ರಾಯದ ಚಿಕ್ಕಮ್ಮ ಜು.18 ರಂದು ನಿಧನರಾಗಿದ್ದಾರೆ. ಇತ್ತಿಚೆಗೆ ಕೆಮ್ಮಿಂಜೆ ಗ್ರಾಮದ ಮರೀಲ್ ಮದಗ ನಿವಾಸಿಯೊಬ್ಬರು ಕೊರೋನಾ ಸೋಂಕು ದೃಢ ಪಟ್ಟ ಹಿನ್ನಲೆಯಲ್ಲಿ ಅವರನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜು.18ರಂದು ಅವರ ಚಿಕ್ಕಮ್ಮ ಲಕ್ಷ್ಮೀ (85ವ) ರವರು ವಯೋಸಹಜ ಮೃತಪಟ್ಟಿದ್ದಾರೆ. ಅವರ ಪುತ್ರನಿಗೆ ಕೊರೋನಾ ಸೋಂಕು ಹಿನ್ನಲೆಯಲ್ಲಿ ತಾಯಿಯ ಕೋವಿಡ್ ಪರೀಕ್ಷೆ ನಡೆಸಲಾಗಿತ್ತು. ಆದರೆ...