Saturday, April 12, 2025

ಪ್ರಾದೇಶಿಕ

ಪುತ್ತೂರು

ಆಕಾಶ್ ಜೊತೆ ಸಹಯೋಗದೊಂದಿಗೆ ಅಂಬಿಕಾದಲ್ಲಿ ನೀಟ್ ರಿಪೀಟರ್ಸ್ ತರಗತಿ-ಕಹಳೆ ನ್ಯೂಸ್

ಈ ವರ್ಷದ ನೀಟ್ ಪರೀಕ್ಷೆಯಲ್ಲಿ ಅಂಬಿಕಾ ಪದವಿಪೂರ್ವ ವಿದ್ಯಾಲಯದ ವಿದ್ಯಾರ್ಥಿಗಳು ಅತ್ಯುನ್ನತ ಸಾಧನೆಯನ್ನು ಮಾಡಿರುತ್ತಾರೆ. ಪ್ರತಿ ವರ್ಷವೂ ಅಂಬಿಕಾ ವಿದ್ಯಾಲಯದ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಅತ್ಯುನ್ನತ ಸಾಧನೆಯನ್ನು ಮಾಡಿರುವಂತಹದು ಹೆಮ್ಮೆಯ ಸಂಗತಿ. ಈ ವಿಶೇಷ ಸಾಧನೆಯನ್ನು ಪರಿಗಣಿಸಿ ಅಂಬಿಕಾ ವಿದ್ಯಾಲಯದಲ್ಲಿ ಈ ವರ್ಷದಿಂದ ನೀಟ್ ರಿಪೀಟರ್ಸ್ ತರಗತಿಗಳನ್ನು ನಡೆಸುವುದೆಂದು ತೀರ್ಮಾನಿಸಲಾಗಿದೆ. ಹಲವು ವಿದ್ಯಾರ್ಥಿಗಳಿಗೆ ನೀಟ್ ಪರೀಕ್ಷೆಯಲ್ಲಿ ಪ್ರಥಮ ಪ್ರಯತ್ನದಲ್ಲಿಯೇ ಉತ್ತಮ ಅಂಕಗಳನ್ನು ಪಡೆಯುವುದು ಕಷ್ಟಸಾಧ್ಯವಾಗಿದೆ. ಅಂತಹ ವಿದ್ಯಾರ್ಥಿಗಳಿಗೆ ಈ ರಿಪೀಟರ್ಸ್ ತರಗತಿಗಳಿಂದಾಗಿ...
ಪುತ್ತೂರು

ಪುತ್ತೂರಿನ ಪ್ರತಿಷ್ಠಿತ ಕ್ಲಬ್‍ಗೆ ಖಾಕಿ ದಾಳಿ, ಜೂಜಾಟದಲ್ಲಿ ನಿರತರಾಗಿದ್ದ 15 ಜನರ ಅಂದರ್-ಕಹಳೆ ನ್ಯೂಸ್

ಪುತ್ತೂರಿನ ಪ್ರತಿಷ್ಠಿತ ಕ್ಲಬ್ ಒಂದರಲ್ಲಿ ಹಣವನ್ನು ಪಣವಾಗಿಟ್ಟುಕೊಂಡು ಜೂಜಾಟ ನಡೆಸುತ್ತಿರುವ ಕುರಿತು ಖಚಿತ ಮಾಹಿತಿ ಪಡೆದ ಪುತ್ತೂರು ನಗರ ಠಾಣೆ ಪೊಲೀಸರು ದಾಳಿ ನಡೆಸಿ, 15 ಜನರನ್ನು ಬಂಧಿಸಿದ್ದಾರೆ. ಪುತ್ತೂರಿನ ಮಾರ್ಕೆಟ್ ರಸ್ತೆಯ ಮೀನು ಮಾರುಕಟ್ಟೆ ಸಮೀಪದ ಯೂನಿಯನ್ ಕ್ಲಬ್, ನೊಂದಾಯಿತ ಕ್ಲಬ್ ಆಗಿದ್ದರೂ, ಹಣವನ್ನು ಪಣವಾಗಿಟ್ಟುಕೊಂಡು ಕಾನೂನು ಬಾಹಿರವಾಗಿ 15 ಮಂದಿ ಇಸ್ಪಿಟ್ ಆಡುತ್ತಿದ್ದರು. ಈ ವೇಳೆ ಪುತ್ತೂರು ಎ.ಎಸ್.ಐಯವರ ನಿರ್ದೇಶನದಂತೆ, ಪುತ್ತೂರು ನಗರ ಠಾಣೆ ಇನ್ಸ್‍ಪೆಕ್ಟರ್ ಗೋಪಾಲ...
ಸುಳ್ಯ

ಸುಳ್ಯ: ಯುವತಿ ನೇಣು ಬಿಗಿದು ಆತ್ಮಹತ್ಯೆ-ಕಹಳೆ ನ್ಯೂಸ್

ಯುವತಿಯೊಬ್ಬಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನೆಲ್ಲೂರು ಕೆಮ್ರಾಜೆ ಗ್ರಾಮದ ಬೊಳ್ಳಾಜೆ ಎಂಬಲ್ಲಿ ಗುರುವಾರ ರಾತ್ರಿ ನಡೆದಿರುವುದು ವರದಿಯಾಗಿದೆ. ಬೊಳ್ಳಾಜೆ ಗಂಗಾಧರ ನಾಯ್ಕ ಎಂಬವರ ಪುತ್ರಿ ಪ್ರಸನ್ನಾ (23) ಆತ್ಮಹತ್ಯೆ ಮಾಡಿರುವ ಯುವತಿ. ಈಕೆ ನಿನ್ನೆ ರಾತ್ರಿ ಮನೆಯೊಳಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ....
ಪುತ್ತೂರು

ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕದಲ್ಲಿ ಉಚಿತ ಕನ್ನಡಕ ವಿತರಣಾ ಕಾರ್ಯಕ್ರಮ-ಕಹಳೆ ನ್ಯೂಸ್

ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕ ಮತ್ತು ಪ್ರಸಾದ್ ನೇತ್ರಾಲಯ, ಮಂಗಳೂರು ಇದರ ಜಂಟಿ ಆಶ್ರಯದಲ್ಲಿ 10ದಿನಗಳ ಕಾಲ ಉಚಿತ ನೇತ್ರ ತಪಾಸಣಾ ಶಿಬಿರವು ಕಳೆದ ಜನವರಿ ತಿಂಗಳಿನಲ್ಲಿ ಜರಗಿತ್ತು. ನೇತ್ರ ತಪಾಸಣಾ ಸಂದರ್ಭದಲ್ಲಿ ಕನ್ನಡಕದ ಅವಶ್ಯಕತೆಯನ್ನು ತಿಳಿಸಿರುವವರಿಗೆ ದಿನಾಂಕ 22.10.2020ರಂದು ಶ್ರೀರಾಮ ಪ್ರಾಥಮಿಕ ಶಾಲಾ ವಿಭಾಗದ ವೇದವ್ಯಾಸ ಧ್ಯಾನ ಮಂದಿರದಲ್ಲಿ ಉಚಿತವಾಗಿ ಕನ್ನಡಕವನ್ನು ವಿತರಿಸಲಾಯಿತು. ಪ್ರಸಾದ್ ನೇತ್ರಾಲಯ ಮಂಗಳೂರು ಇದರ ಸಂಸ್ಥಾಪಕರಾದ ಡಾ| ಕೃಷ್ಣಪ್ರಸಾದ್ ಇವರು ಮಾತನಾಡಿ “ನಾವು ಈಗ ಉತ್ತಮ...
ಬಂಟ್ವಾಳ

ಮಂಗಳೂರು: ‘ನಟ ಸುರೇಂದ್ರ ಬಂಟ್ವಾಳ್​ನನ್ನು ನಾನೇ ಕೊಂದೆ. ಇದು ಕಿಶನ್ ಹೆಗ್ಡೆ ಸಾವಿನ ಪ್ರತೀಕಾರ’-ಕಹಳೆ ನ್ಯೂಸ್

ತುಳು ಚಿತ್ರರಂಗದ ನಟ ಸುರೇಂದ್ರ ಬಂಟ್ವಾಳ್ ಬುಧವಾರ ಬರ್ಬರವಾಗಿ ಹತ್ಯೆಯಾಗಿದ್ದರು. ಈ ಕೊಲೆಯನ್ನು ನಾನೇ ಮಾಡಿದ್ದು ಎಂದು ಆತನ ಸ್ನೇಹಿತನೊಬ್ಬ ಪೊಲೀಸರಿಗೆ ಕಳುಹಿಸಿದ್ದಾನೆ ಎನ್ನಲಾದ ಆಡಿಯೋ ಲಭ್ಯವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್​ನಲ್ಲಿರುವ ತನ್ನ ಫ್ಲಾಟ್​ನಲ್ಲೇ ಸುರೇಂದ್ರ ಬಂಟ್ವಾಳ್ ಕೊಲೆಯಾಗಿದ್ದರು. ಸುರೇಂದ್ರನನ್ನು ಕೊಂದದ್ದು ತಾನೇ ಎಂದಿರುವ ಆರೋಪಿ ಸತೀಶ್ ಕುಲಾಲ್, ಕಳಿಸಿರುವ ಆಡಿಯೊ ಸಂದೇಶದಲ್ಲಿ ಏನಿದೆ ಗೊತ್ತಾ? 'ನಮಸ್ತೆ ನಾನು ಸತೀಶ್ ಮಾತನಾಡೋದು. ನಿನ್ನೆ ರಾತ್ರಿ ವಸ್ತಿ...
ಬಂಟ್ವಾಳ

ಬಂಟ್ವಾಳದ ಮಿನಿವಿಧಾನಸೌಧಕ್ಕೆ ನಾಗದೋಷ; ಜನಪ್ರತಿನಿಧಿಗಳಿಂದ ನಡೆಯಿತು ವಿಶೇಷ ಪೂಜೆ ಪುನಸ್ಕಾರ-ಕಹಳೆ ನ್ಯೂಸ್

ಬಂಟ್ವಾಳ : ವ್ಯಕ್ತಿಯ ಜಾತಕದಲ್ಲಿ ನಾಗದೋಷ ಇದೆ ಎಂದು ಪೂಜೆ ಪುನಸ್ಕಾರ ಮಾಡಿಸುವುದು ಸಾಮಾನ್ಯ. ಆದರೆ, ಇಲ್ಲಿನ ಸರ್ಕಾರಿ ಕಟ್ಟಡಕ್ಕೆ ನಾಗದೋಷ ಇದೆ ಎಂದು ಜನಪ್ರತಿನಿಧಿಗಳು ಸೇರಿ ವಿಶೇಷ ಹೋಮ ಮಾಡಿಸಿರುವ ಘಟನೆ ನಡೆದಿದೆ. ನಗರದ ಬಿಸಿ ರೋಡ್​ನಲ್ಲಿರುವ ಈ ಆಡಳಿತ ಕಚೇರಿ ಕಟ್ಟಿ ಇನ್ನು ಮೂರು ವರ್ಷವಾಗಿದೆ. ಆದರೆ, ಈ ಕಚೇರಿಗೆ ಬರುವ ಅಧಿಕಾರಿಗಳು, ಜನಪ್ರತಿನಿಧಿಗಳು ಒಂದಿಲ್ಲೊಂದು ಆರೋಗ್ಯ ಸಮಸ್ಯೆಗೆ ಒಳಗಾಗುತ್ತಿದ್ದರಂತೆ. ಅಲ್ಲದೇ ಕೆಲ ಅಧಿಕಾರಿಗಳು ಅಕಾಲಿಕ ಮರಣಕ್ಕೂ...
ಪುತ್ತೂರು

ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ 13ನೇ ವರ್ಷದ ಶಾರದೋತ್ಸವ-ಕಹಳೆ ನ್ಯೂಸ್

ಪುತ್ತೂರಿನ ಹೃದಯ ಭಾಗದಲ್ಲಿರುವ ಕಳೆದ 13 ವರ್ಷಗಳಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಿರುವ ಪ್ರಗತಿ ಎಜ್ಯುಕೇಶನಲ್ ಫೌಂಡೇಶನ್(ರಿ.) ಪುತ್ತೂರು ಇದರಡಿಯಲ್ಲಿ ಕಾರ್ಯಾಚರಿಸುತ್ತಿರುವ ಧರ್ಮಸ್ಥಳ ಬಿಲ್ಡಿಂಗ್‍ನ ಪ್ರಗತಿ ಸೆಂಟರ್‌ನ ಮುಖ್ಯ ಶಾಖೆ ಹಾಗೂ ಪೋಳ್ಯದಲ್ಲಿ ನೂತನವಾಗಿ ನಿರ್ಮಿತಗೊಂಡಿರುವ ಪ್ರಗತಿ ರೆಸಿಡೆನ್ಶಿಯಲ್ ಸ್ಟಡಿ ಸೆಂಟರ್‌ನಲ್ಲಿ ಅ. 21 ರಂದು ನವರಾತ್ರಿಯ ಮೂರು ದಿನಗಳ ಶಾರದೋತ್ಸವದ ಅಂಗವಾಗಿ ವೇದಮೂರ್ತಿ ಸುಬ್ರಹ್ಮಣ್ಯ ಹೊಳ್ಳರವರ ಸಹಕಾರದೊಂದಿಗೆ ಶಾರದಾಮಾತೆಯನ್ನು ಪೀಠಲಂಕೃತಳನ್ನಾಗಿಸಿ, 13ನೇ ವರ್ಷದ ಶಾರದ...
ಪುತ್ತೂರುಸುದ್ದಿ

ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಪುತ್ತೂರು ತಾಲೂಕು ಸಮಿತಿ ಗೌರವಾಧ್ಯಕ್ಷರಾಗಿ ವಿ.ಬಿ.ಅರ್ತಿಕಜೆ, ಕಾನೂನು ಸಲಹೆಗಾರರಾಗಿ ಮಹೇಶ್ ಕಜೆ, ಗೌರವ ಸಲಹೆಗಾರರಾಗಿ ರಾಕೇಶ್ ಕಮ್ಮಾಜೆ – ಕಹಳೆ ನ್ಯೂಸ್

ಪುತ್ತೂರು: ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಪುತ್ತೂರು ತಾಲೂಕು ಸಮಿತಿಯ ಗೌರವಾಧ್ಯಕ್ಷರಾಗಿ ಹಿರಿಯ ಪತ್ರಕರ್ತ ಪ್ರೊ. ವಿ.ಬಿ.ಅರ್ತಿಕಜೆ ಮತ್ತು ಕಾನೂನು ಸಲಹೆಗಾರರಾಗಿ ಖ್ಯಾತ ನ್ಯಾಯವಾದಿ ಮಹೇಶ್‌ ಕಜೆರವರನ್ನು ನೇಮಕ‌ ಮಾಡಲಾಗಿದೆ. ಹಿರಿಯ ಪತ್ರಕರ್ತರಾಗಿ, ಹಿರಿಯ ಸಾಹಿತಿಗಳಾಗಿ, ವಿಶ್ರಾಂತ ಪ್ರಾಧ್ಯಾಪಕರಾಗಿ, ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಸೇರಿದಂತೆ ಸಾರಸ್ವತ ಲೋಕದಲ್ಲಿ ಗುರುತಿಸಿಕೊಂಡಿರುವ ಪ್ರೊ.ವಿ.ಬಿ.ಅರ್ತಿಕಜೆಯವರನ್ನು ಗೌರವಾಧ್ಯಕ್ಷರಾಗಿ ಮತ್ತು ಪುತ್ತೂರು ವಕೀಲರ ಸಂಘದ ಮಾಜಿ ಅಧ್ಯಕ್ಷರಾಗಿ, ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ...
1 682 683 684 685 686 708
Page 684 of 708
ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ