ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಪುತ್ತೂರು ತಾಲೂಕು ಸಮಿತಿ ಗೌರವಾಧ್ಯಕ್ಷರಾಗಿ ವಿ.ಬಿ.ಅರ್ತಿಕಜೆ, ಕಾನೂನು ಸಲಹೆಗಾರರಾಗಿ ಮಹೇಶ್ ಕಜೆ, ಗೌರವ ಸಲಹೆಗಾರರಾಗಿ ರಾಕೇಶ್ ಕಮ್ಮಾಜೆ – ಕಹಳೆ ನ್ಯೂಸ್
ಪುತ್ತೂರು: ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಪುತ್ತೂರು ತಾಲೂಕು ಸಮಿತಿಯ ಗೌರವಾಧ್ಯಕ್ಷರಾಗಿ ಹಿರಿಯ ಪತ್ರಕರ್ತ ಪ್ರೊ. ವಿ.ಬಿ.ಅರ್ತಿಕಜೆ ಮತ್ತು ಕಾನೂನು ಸಲಹೆಗಾರರಾಗಿ ಖ್ಯಾತ ನ್ಯಾಯವಾದಿ ಮಹೇಶ್ ಕಜೆರವರನ್ನು ನೇಮಕ ಮಾಡಲಾಗಿದೆ. ಹಿರಿಯ ಪತ್ರಕರ್ತರಾಗಿ, ಹಿರಿಯ ಸಾಹಿತಿಗಳಾಗಿ, ವಿಶ್ರಾಂತ ಪ್ರಾಧ್ಯಾಪಕರಾಗಿ, ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಸೇರಿದಂತೆ ಸಾರಸ್ವತ ಲೋಕದಲ್ಲಿ ಗುರುತಿಸಿಕೊಂಡಿರುವ ಪ್ರೊ.ವಿ.ಬಿ.ಅರ್ತಿಕಜೆಯವರನ್ನು ಗೌರವಾಧ್ಯಕ್ಷರಾಗಿ ಮತ್ತು ಪುತ್ತೂರು ವಕೀಲರ ಸಂಘದ ಮಾಜಿ ಅಧ್ಯಕ್ಷರಾಗಿ, ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ...