ತಂದೆಗೆ ವಿಷ ಬೆರೆಸಿ ಹತ್ಯೆ ಯತ್ನ ಪ್ರಕರಣ ; ಆರೋಪಿಗೆ ಜಾಮೀನು ಮಂಜೂರು – ಕಹಳೆ ನ್ಯೂಸ್
ಪುತ್ತೂರು: ತಂದೆಗೆ ಆಹಾರದಲ್ಲಿ ವಿಷ ಬೆರೆಸಿ ಹತ್ಯೆಗೆ ಯತ್ನಿಸಿದ ಆರೋಪದಲ್ಲಿ ಬಂಧಿತರಾಗಿದ್ದ ಲೋಕೇಶ್ ಎಂಬವರಿಗೆ ಪುತ್ತೂರು ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರುಡಾಲ್ಫ್ ಫಿರೇರಾ ಜಾಮೀನು ಮಂಜೂರು ಮಾಡಿದ್ದಾರೆ. ಸುಬ್ರಹ್ಮಣ್ಯ ಪೋಲೀಸ್ ಠಾಣಾ ವ್ಯಾಪ್ತಿಯ ಅಂಜೇರಿ ಹೊನ್ನಪ್ಪ ನಾಯ್ಕರವರ ಪುತ್ರರಾದ ದೇವಿಪ್ರಸಾದ್ ಮತ್ತು ಲೋಕೇಶ್ ಎಂಬವರು ಹೊನ್ನಪ್ಪ ನಾಯ್ಕರವರಿಗೆ ಜುಲೈ.23 ರಂದು ರಾತ್ರಿ ಆಹಾರದಲ್ಲಿ ವಿಷ ಬೆರೆಸಿ ಹತ್ಯೆಗೆ ಯತ್ನಿಸಿದ್ದರು ಎಂದು ಆರೋಪಿಸಿ, ಹೊನ್ನಪ್ಪ ನಾಯ್ಕರವರ ಪತ್ನಿ...