Wednesday, April 2, 2025

ಪ್ರಾದೇಶಿಕ

ಕ್ರೈಮ್ಸುಳ್ಯ

ಸುಳ್ಯದ ನೆರೆಮನೆಯ ಐದು ವರ್ಷದ ಬಾಲಕಿಗೆ ಚಾಕಲೇಟ್ ಅಮಿಷವೊಡ್ದಿ ಸುಮಾರು ನಾಲ್ಕು ತಿಂಗಳಿಂದ ನಿರಂತರ ಅತ್ಯಾಚಾರ ; ಆರೋಪಿಯನ್ನು ಬಂಧಿಸಿದ ಬೆಳ್ಳಾರೆ ಪೊಲೀಸರು – ಕಹಳೆ ನ್ಯೂಸ್

ಸುಳ್ಯ, ಜು 29 :  ನೆರೆಮನೆಯ ಐದು ವರ್ಷದ ಬಾಲಕಿಗೆ ಚಾಕಲೇಟ್ ಅಮಿಷವೊಡ್ದಿ ಸುಮಾರು ನಾಲ್ಕು ತಿಂಗಳಿಂದ ನಿರಂತರ ಅತ್ಯಾಚಾರ ಎಸಗುತ್ತಿದ್ದ ಆರೋಪಿಯನ್ನು ಬೆಳ್ಳಾರೆ ಠಾಣೆಯ ಪೊಲೀಸರು ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ.   ಬಂಧಿತನನ್ನು ಬೆಳ್ಳಾರೆ ದರ್ಖಾಸುವಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಸೆಲ್ವ ಕುಮಾರ್ (50) ಎಂದು ಗುರುತಿಸಲಾಗಿದೆ. ಮನೆ ಸಮೀಪದಲ್ಲಿ ಆಟವಾಡುತ್ತಿದ್ದ ನೆರೆಮನೆಯ ಐದರ ಹರೆಯದ ಅಪ್ರಾಪ್ತೆಗೆ ಚಾಕಲೇಟು ನೀಡಿ ಆರೋಪಿ ಪುಸಲಾಯಿಸಿ ತನ್ನ ಮನೆಯೊಳಕ್ಕೆ...
ದಕ್ಷಿಣ ಕನ್ನಡಪುತ್ತೂರುಶಿಕ್ಷಣ

ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ನೂತನ ಪ್ರಾಂಶುಪಾಲರಾಗಿ ಡಾ| ಮಹೇಶ್ ಪ್ರಸನ್ನ – ಕಹಳೆ ನ್ಯೂಸ್

ಪುತ್ತೂರು: ವಿವೇಕಾನಂದ ವಿದ್ಯಾವರ್ಧಕ ಸಂಘದ ಅಂಗಸಂಸ್ಥೆಯಾದ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ನೂತನ ಪ್ರಾಂಶುಪಾಲರಾಗಿ ಅದೇ ಕಾಲೇಜಿನಲ್ಲಿ ೬ ವರ್ಷಗಳಿಂದ ಕಂಪ್ಯೂಟರ್ ಸೈನ್ಸ್ ವಿಭಾಗ ಮುಖ್ಯಸ್ಥರಾಗಿದ್ದ ಮೂಲತಃ ಪಾಣಾಜೆಯ ಡಾ. ಮಹೇಶ್ ಪ್ರಸನ್ನರವರನ್ನು ನಾಮ ನಿರ್ದೇಶನ ಮಾಡಲಾಗಿದೆ. ಈ ಹಿಂದೆ ಪ್ರಾಂಶುಪಾಲರಾಗಿದ್ದ ಡಾ. ಎಂ.ಎಸ್. ಗೋವಿಂದೇ ಗೌಡರ ತೆರವಾದ ಸ್ಥಾನಕ್ಕೆ ಕಾಲೇಜಿನ ಆಡಳಿತ ಮಂಡಳಿ ಡಾ. ಪ್ರಸನ್ನರವರನ್ನು ನಾಮ ನಿರ್ದೇಶಿಸಿದ್ದು, ಅಧಿಕಾರ ಸ್ವೀಕರಿಸಿದ್ದಾರೆ. ಪಾಣಾಜೆ ಗ್ರಾಮದ ಕುರಿಯತ್ತಡ್ಕ ಗೋಪಾಲಕೃಷ್ಣ ಶಾಸ್ತ್ರಿ ಮತ್ತು...
ಪುತ್ತೂರುಸುದ್ದಿ

ಇಂದು ಜು.29 ರೋಟರಿ ಕ್ಲಬ್ ಪುತ್ತೂರು ಯುವ ಪದಗ್ರಹಣ ; ಅಧ್ಯಕ್ಷರಾಗಿ ಡಾ|ಹರ್ಷಕುಮಾರ್ ರೈ, ಕಾರ್ಯದರ್ಶಿಗಳಾಗಿ ಉಮೇಶ್ ನಾಯಕ್ ಕೋಶಾಧಿಕಾರಿಯಾಗಿ ಕುಸುಮ್‌ರಾಜ್ ಅಧಿಕಾರ ಸ್ವೀಕಾರ – ಕಹಳೆ ನ್ಯೂಸ್

ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಯುವ ಇದರ 2020-21ನೇ ಸಾಲಿನ ನೂತನ ಅಧ್ಯಕ್ಷರಾಗಿ ಡಾ|ಹರ್ಷ ಕುಮಾರ್ ರೈ ಮಾಡಾವು, ಕಾರ್ಯದರ್ಶಿಯಾಗಿ ಉಮೇಶ್ ನಾಯಕ್ ಮತ್ತು ಕೋಶಾಧಿಕಾರಿಯಾಗಿ ಕುಸುಮ್‌ರಾಜ್ ಆಯ್ಕೆಯಾಗಿದ್ದಾರೆ. ಪದಗ್ರಹಣ ಸಮಾರಂಭ ಇಂದು ( ಜು.29 ) ಸಂಜೆ ಪುತ್ತೂರು ರೋಟರಿ ಮನೀಷಾ ಹಾಲ್‌ನಲ್ಲಿ ನಡೆಯಲಿದೆ. ರೋಟರಿ ಅಂತರರಾಷ್ಟ್ರೀಯ ಸಂಸ್ಥೆಯ ಗೌರವ ಪುರಸ್ಕೃತ ವಿಶ್ವಾಸ್ ಶೆಣೈಯವರು ಪದಗ್ರಹಣ ನಡೆಸಿಕೊಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ರೋಟರಿ ಅಸಿಸ್ಟೆಂಟ್ ಗವರ್ನರ್ ರತ್ನಾಕರ ರೈ, ಝೋನಲ್...
ಕ್ರೈಮ್ದಕ್ಷಿಣ ಕನ್ನಡಬೆಳ್ತಂಗಡಿ

ಬೆಳ್ತಂಗಡಿಯಲ್ಲಿ ಅಕ್ರಮ ಗೋಸಾಗಾಟಕ್ಕೆ ಬ್ರೇಕ್..! ; ವಾಹನ ತಡೆದು ಗೋವುಗಳನ್ನು ರಕ್ಷಿಸಿದ ಬಜರಂಗದಳದ ಕಾರ್ಯಕರ್ತರು – ಕಹಳೆ ನ್ಯೂಸ್

ಬೆಳ್ತಂಗಡಿ : ತಾಲೂಕಿನಲ್ಲಿ ಅಕ್ರಮ ಗೋಸಾಗಾಟ ಅಂಕೆ ಮೀರಿ ನಡೆಯುತ್ತಿದ್ದು, ಇದೀಗ ಮತ್ತೊಂದು ಅಕ್ರಮ ಗೋಸಾಗಾಟ ಗಾಡಿಯನ್ನು ಭಜರಂಗದಳದ ಕಾರ್ಯಕರ್ತರು ಹಿಡಿದು ಪೋಲಿಸರಿಗೆ ಒಪ್ಪಿಸಿದ್ದಾರೆ‌. ಹಿಂದೂ ಮುಖಂಡರ ಸಭೆ ಶಾಸಕ‌ ಹರೀಶ್ ಪೂಂಜಾರ ಜೊತೆ ಮುಗಿಯುತ್ತಿರುವಂತೆ ಈ ಘಟನೆ ನಡೆದಿರುವುದು ಹಿಂದೂ ಬಾಂಧವರಿಗೆ ಮತ್ತಷ್ಟು ಆಕ್ರೋಶ ಕೆರಳಿಸಿದೆ. ಈಚರ್ ಗಾಡಿಯಲ್ಲಿ ಅಕ್ರಮ ಗೋಸಾಗಾಟದ ಮಾಹಿತಿ‌ ಪಡೆದ ಬಜರಂಗಿಗಳು ಆ ವಾಹನವನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ‌. ಧರ್ಮಸ್ಥಳ ಗ್ರಾಮದ ನೇತ್ರಾವತಿ ಬಳಿಯಲ್ಲಿ ಬಜರಂಗದಳದ...
ದಕ್ಷಿಣ ಕನ್ನಡಪುತ್ತೂರು

ಈ ಹಿಂದೆ ಪುತ್ತೂರಿನಲ್ಲಿ ಸಹಾಯಕ ಕಮೀಷನರ್ ಆಗಿ ಕರ್ತವ್ಯ ನಿರ್ವಹಿಸಿದ್ದ ಖಡಕ್ ಅಧಿಕಾರಿ ; IAS ಪರೀಕ್ಷೆ ಬರೆದು ದೇಶದಲ್ಲಿ 32 ನೇ ರ್‍ಯಾಂಕ್‌ ಮತ್ತು ರಾಜ್ಯದಲ್ಲಿ ಮೊದಲ ಸ್ಥಾನ ಪಡೆದಿದ್ದ ಡಾ. ರಾಜೇಂದ್ರ ಕೆ.ವಿ ಇದೀಗ ದಕ್ಷಿಣ ಕನ್ನಡದ ಜಿಲ್ಲಾಧಿಕಾರಿ.! – ಕಹಳೆ ನ್ಯೂಸ್

ದಕ್ಷಿಣ ಕನ್ನಡ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಬೆಳಗಾವಿಯ ಜಿಲ್ಲಾ ಪಂಚಾಯತ್ ಸಿ.ಇ.ಓ ಆಗಿದ್ದ ಡಾ.ರಾಜೇಂದ್ರ ಕೆ.ವಿ ಅವರನ್ನು ನೇಮಕಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.   ಮೂಲತಃ ಶಿವಮೊಗ್ಗದ ತೀರ್ಥಹಳ್ಳಿಯವರಾಗಿರುವ ಇವರು ಸಿ.ಇ.ಎಸ್ ಹೈ ಸ್ಕೂಲ್ ಚಳಗೇರಿ ಹಾವೇರಿ ಯಲ್ಲಿ ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಪೂರೈಸಿದ್ದರು. ಜಗದ್ಗುರು ಜಯದೇವ ಮುರುಘರಾಜೇಂದ್ರ ವೈದ್ಯಕೀಯ ಮಹಾವಿದ್ಯಾಲಯ ದಾವಣಗೆರೆಯಲ್ಲಿ ತಮ್ಮ ವೈದ್ಯಕೀಯ ಶಿಕ್ಷಣ ಪೂರೈಸಿದ್ದರು. ವೈದ್ಯ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದ ಇವರು ನಂತರ ನಾಗರಿಕ ಸೇವೆ...
ದಕ್ಷಿಣ ಕನ್ನಡಪುತ್ತೂರು

Breaking News : ಪುತ್ತೂರಿನಲ್ಲಿ ಇಂದು ಕೊರೊನಾ ಅಟ್ಟಹಾಸ ; ಮಂಗಳವಾರ ಒಂದೇ ದಿನ  23 ಮಂದಿಗೆ ಕೊರೊನಾ ಪಾಸಿಟಿವ್ – ಕಹಳೆ ನ್ಯೂಸ್

ಪುತ್ತೂರು, ಜು.28: ರಾಜ್ಯದಲ್ಲೇ ಕೊರೊನಾ ರುದ್ರ ನರ್ತನ ಮಾಡುತ್ತಿದ್ದು, ಮರಣ ಮೃದಂಗ ಭಾರಿಸುತ್ತಿದೆ. ಇಂದು ತಾಲೂಕಿನಲ್ಲಿ ಕೊರೊನಾ ಸೋಂಕು ತನ್ನ ಆಟ್ಟಹಾಸ ಮುಂದುವರಿಸಿದ್ದು, ಒಂದೇ ದಿನ ತಾಲೂಕಿನಲ್ಲಿ 23 ಹೊಸ ಪ್ರಕರಣಗಳು ಪತ್ತೆಯಾಗುವುದರ ಮೂಲಕ ಆತಂಕ ಸೃಷ್ಟಿಸಿದೆ. ಇಂದು ಒಂದೇ ದಿನ ತಾಲೂಕಿನಲ್ಲಿ ಪತ್ತೆಯಾದ ಗರಿಷ್ಟ ಪ್ರಕರಣ ಕಡಬ ಮತ್ತು ಪುತ್ತೂರು ತಾಲೂಕುಗಳಲ್ಲಿ ಮಂಗಳವಾರ ಒಟ್ಟು 26 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದೆ. ಕಡಬ ತಾಲೂಕಿನ ಮೂರು ಮುಂದಿಗೆ ಸೋಂಕು ದೃಢಪಟ್ಟರೆ,...
ಬಂಟ್ವಾಳಸುದ್ದಿ

ವಿ.ಹಿಂ.ಪ ಭಜರಂಗದಳ ವೀರಾಂಜನೆಯ ಶಾಖೆ ಮಾವಿನಕಟ್ಟೆ ಬಂಟ್ವಾಳ ಪ್ರಖಂಡ ಇದರ ವತಿಯಿಂದ ಸ್ವಚ್ಚತಾ ಕಾರ್ಯ-ಕಹಳೆ ನ್ಯೂಸ್

ವಿಶ್ವ ಹಿಂದೂ ಪರಿಷತ್ ಭಜರಂಗದಳ ವೀರಾಂಜನೆಯ ಶಾಖೆ ಮಾವಿನಕಟ್ಟೆ ಬಂಟ್ವಾಳ ಪ್ರಖಂಡ ಇದರ ವತಿಯಿಂದ ಸ್ವಚ್ಚತಾ ಆಂದೋಲನ ಮಾವಿನಕಟ್ಟೆ ಪರಿಸರದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಪ್ರಖಂಡ ಸಂಚಾಲಕರಾದ ಶಿವಪ್ರಸಾದ್ ತುಂಬೆ ಪ್ರಖಂಡ ಸ.ಸಂಚಾಲಕರಾದ ಸಂತೋಷ್ ಕುಲಾಲ್ ವೀರಾಂಜನೆಯ ಶಾಖೆಯ ಗೌರವಧ್ಯಕ್ಷರಾದ ಸಾಯಿಶಾಂತಿ ಕೋಕಲ, ಘಟಕ ಸಂಚಾಲಕರಾದ ತಿಲಕ್ ಆಳ್ವ ಹಾಗೂ ಸಂಘದ ಎಲ್ಲಾ ಕಾರ್ಯಕರ್ತರು ಮತ್ತು ಭಾರತೀಯ ಜನತಾ ಪಕ್ಷದ ಬೂತ್ ಸಮಿತಿಯ ಅಧ್ಯಕ್ಷರಾದ ದೇವದಾಸ್ ಮಾವಿನಕಟ್ಟೆ ಉಪಸ್ಥಿತರಿದ್ದರು...
ಕಡಬ

ಕಡಬ: ಅಕ್ರಮ ಗೋ ಸಾಗಾಟ ಗೋ ಹತ್ಯೆ ವಿರುದ್ಧ ವಿಶ್ವ ಹಿಂದು ಪರಿಷತ್ ಬಜರಂಗದಳ ಕಡಬ ಪ್ರಖಂಡ ವತಿಯಿಂದ ಕಡಬ ಠಾಣೆಗೆ ಮನವಿ- ಕಹಳೆ ನ್ಯೂಸ್

ಕಡಬ: ಅಕ್ರಮ ಗೋ ಸಾಗಾಟ ಗೋ ಹತ್ಯೆ ವಿರುದ್ಧ ವಿಶ್ವ ಹಿಂದು ಪರಿಷತ್ ಬಜರಂಗದಳ ಕಡಬ ಪ್ರಖಂಡ ವತಿಯಿಂದ ಕಡಬ ಠಾಣೆಗೆ ಮನವಿ ಸಲ್ಲಿಸಲಾಯಿತು. ರಾಜ್ಯದಲ್ಲಿ ಕರ್ನಾಟಕ ಪ್ರಾಣಿ ಬಲಿ ನಿಷೇಧ ಕಾಯ್ದೆ 1959 ( ತಿದ್ದು ಪಡಿ1975) ಜಾರಿಯಲ್ಲಿದ್ದು ಅದರ ಪ್ರಕಾರ ಯಾವುದೇ ಧರ್ಮದವರು ಬಲಿ ಕೊಡುವುದಕ್ಕೆ ನಿಷೇದವಿದೆ. ಕರ್ನಾಟಕ ಗೋ ಹತ್ಯೆ ನಿಷೇದ ಹಾಗೂ ಜಾನುವಾರು ಸಂರಕ್ಷಣಾ ಕಾಯ್ದೆ 1964 ಜಾರಿಯಲ್ಲಿದ್ದು ಅದರ ಪ್ರಕಾರ ದನ ,...
1 687 688 689 690 691 700
Page 689 of 700
ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ