Saturday, April 5, 2025

ಪ್ರಾದೇಶಿಕ

ದಕ್ಷಿಣ ಕನ್ನಡಬೆಳ್ತಂಗಡಿಸುದ್ದಿ

ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಹೆರಿಗೆಯಾದ ಮಹಿಳೆಗೆ ಕೊರೊನಾ ದೃಢ ; ಆಸ್ಪತ್ರೆ ಗೇಟ್ ಮುರಿದು ಬಾಣಂತಿ – ಮಗು ಕರೆದೊಯ್ದು ಪತಿ – ಕಹಳೆ ನ್ಯೂಸ್

ಬೆಳ್ತಂಗಡಿ, ಜು 17 ;ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಹೆರಿಗೆಯಾದ ಮಹಿಳೆಗೆ ಕೊರೊನಾ ದೃಢಪಟ್ಟಿದೆ. ಈ ವಿಷಯ ತಿಳಿಯುತ್ತಿದ್ದಂತೆ ಪತಿ ಗೇಟ್ ಬೀಗ ಮುರಿದು ಆಸ್ಪತ್ರೆ ಪ್ರವೇಶಿಸಿದ್ದು ಮಗು ಮತ್ತು ಬಾಣಂತಿಯನ್ನು ತನ್ನ ಕಾರಿನಲ್ಲಿ ಕರೆದೊಯ್ದ ಘಟನೆ ಗುರುವಾರ ರಾತ್ರಿ ಸಂಭವಿಸಿದೆ. ಇಲ್ಲಿನ  ನಾವೂರು ಗ್ರಾಮದ ಮಹಿಳೆ ಬುಧವಾರ ಇಲ್ಲಿ ಹೆರಿಗೆಗಾಗಿ ದಾಖಲಾಗಿದ್ದರು.ಈ ಸಂದರ್ಭ ಅವರ ಗಂಟಲದ್ರವ ಪರೀಕ್ಷೆಗೆ ತೆಗೆದುಕೊಳ್ಳಲಾಗಿತ್ತು.ಈ ನಡುವೆ ಬುಧವಾರ ರಾತ್ರಿಯೇ ಅವರಿಗೆ ಹೆರಿಗೆ ಆಗಿತ್ತು.ಗುರುವಾರ ಸಂಜೆ ಕೊರೊನಾ...
ದಕ್ಷಿಣ ಕನ್ನಡಬಂಟ್ವಾಳಶಿಕ್ಷಣಸುದ್ದಿ

ಬಡತನ, ಅಂಗ ವೈಕಲ್ಯ ಮೀರಿ ದ್ವಿತೀಯ ಪಿಯುಸಿಯಲ್ಲಿ ಸಾಧನೆಗೈದ ಬಂಟ್ವಾಳದ ಭಾಗ್ಯಶ್ರೀ – ಕಹಳೆ ನ್ಯೂಸ್

ಬಂಟ್ವಾಳ‌‌‌, ಜು 16 : ವಿದ್ಯಾರ್ಥಿನಿಯೋರ್ವಳು ಬಡತನ, ಅಂಗವೈಕಲ್ಯವನ್ನು ಮೆಟ್ಟಿನಿಂತು ದ್ವಿತೀಯ ಪಿಯುಸಿಯಲ್ಲಿ 470 ಅಂಕ ಗಳಿಸಿ ಉತ್ತಮ ಸಾಧನೆಗೈದಿದ್ದಾಳೆ.   ಬಂಟ್ವಾಳ ತಾಲೂಕಿನ ಕುರಿಯಾಳ ಗ್ರಾಮದ ಕೇಶವ ಕುಲಾಲ್‌ ಹಾಗೂ ರಾಜೀವಿ ದಂಪತಿಯ ಪುತ್ರಿ ಭಾಗ್ಯಶ್ರೀ ಬಂಟ್ವಾಳದ ಎಸ್‌‌.ವಿ.ಎಸ್‌‌ ಕಾಲೇಜಿನಲ್ಲಿ ಕಲಿತು ದ್ವಿತೀಯ ಪಿಯುಸಿಯ ವಾಣಿಜ್ಯ ವಿಭಾಗದಲ್ಲಿ 476 ಅಂಕಗಳನ್ನು ಪಡೆದು ಸಾಧನೆ ಮಾಡಿದ್ದಾರೆ. ಕಲಿಕೆಯಲ್ಲಿ ಆಸಕ್ತಿ ಹೊಂದಿರುವ ಭಾಗ್ಯಶ್ರೀ, ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಲೊರೆಟ್ಟೋ ಚರ್ಚ್‌ ಶಾಲೆಯಲ್ಲಿ...
ದಕ್ಷಿಣ ಕನ್ನಡಪುತ್ತೂರು

ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ನಿತ್ಯ ಕರಸೇವಕ ; ಪೈ ಟ್ರೇಡರ್ಸ್ ನ ಮಾಲಕ ಹರೀಶ್ ಪೈ ನಿಧನ – ಕಹಳೆ ನ್ಯೂಸ್

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಿತ್ಯ ಕರಸೇವಕರ ಪ್ರಮುಖ್ ಆಗಿ ಚಿರಪರಿಚಿತಗೊಂಡಿರುವ ಇಲ್ಲಿನ ಸಿಪಿಸಿ ಪ್ಲಾಝಾದಲ್ಲಿರುವ ಪೈ ಟ್ರೇಡರ್‍ಸ್‌ನ ಮಾಲಕ ಹರೀಶ್ ಪೈ(52ವ)ರವರು ಜು.14ರ ನಸುಕಿನ ಜಾವ ಮೃತಪಟ್ಟಿದ್ದಾರೆ. ಜು.೧೨ರಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಿತ್ಯ ಕರಸೇವಕರೊಂದಿಗೆ ಆದಿತ್ಯವಾರದ ಸ್ವಚ್ಛತಾ ಕಾರ್ಯವನ್ನು ಮುಗಿಸಿ ಮಧ್ಯಾಹ್ನ ದೇವಳದ ಹೊರಾಂಗಣದ ಗೋಪುರದಲ್ಲಿ ಕುಳಿತಿದ್ದ ವೇಳೆ ಆಕಸ್ಮಿಕವಾಗಿ ಅವರ ಆರೋಗ್ಯದಲ್ಲಿ ಏರುಪೇರು ಕಂಡಿದ್ದು ತಕ್ಷಣ ಅವರನ್ನು ಪುತ್ತೂರು ಆದರ್ಶ ಆಸ್ಪತ್ರೆಗೆ...
ದಕ್ಷಿಣ ಕನ್ನಡಪುತ್ತೂರು

Breaking News : ಶಾಂತಿಗೋಡಿನ 15 ವರ್ಷದ ಬಾಲಕಿ, ಬಲ್ಯದ ನರ್ಸ್‌ ಸಹಿತ ಪುತ್ತೂರು ತಾಲೂಕಿನಲ್ಲಿ 4 ಕೊರೊನಾ ಪಾಸಿಟಿವ್ – ಕಹಳೆ ನ್ಯೂಸ್

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲೆ ಕೊರೊನಾ ಆರ್ಭಟ ಹೆಚ್ಚಾಗಿದ್ದು, ಇಂದು ಪುತ್ತೂರು ತಾಲೂಕಿನಲ್ಲಿ 4 ಕೊರೋನಾ ದೃಢಪಟ್ಟ ಕುರಿತು ವರದಿಯಾಗಿದೆ. ವಿದೇಶದಿಂದ ಬಂದು ಮಂಗಳೂರು ಖಾಸಗಿ ಹೊಟೇಲ್‌ವೊಂದರಲ್ಲಿ ಕ್ವಾರಂಟೈನ್ ಆಗಿರುವ ಇಚಿಲಂಪಾಡಿಯ ಸುಮಾರು 27 ವರ್ಷದ ಯುವಕ, ಮರೀಲ್ ಕ್ಯಾಂಪ್ಕೋ ವಸತಿ ಗೃಹದ ನಿವಾಸಿ 35 ವರ್ಷದ ಗೃಹಿಣಿ, ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿರುವ ಬಲ್ಯ ಹೊಸ್ಮಠದ 22 ವರ್ಷದ ಯುವತಿ ಮತ್ತು ಶಾಂತಿಗೋಡು ನಿವಾಸಿ 15...
ದಕ್ಷಿಣ ಕನ್ನಡಬೆಳ್ತಂಗಡಿ

Breaking News : ಬೆಳ್ತಂಗಡಿಯಲ್ಲಿ ಕೊರೊನಾಗೆ ಇಂದು ವೃದ್ಧ ಬಲಿ ; ಕುವೆಟ್ಟು ಗ್ರಾಮದ ಪಿಲಿಚಾಮುಂಡಿಕಲ್ಲು ನಿವಾಸಿ ಕೊರೊನ ಸೋಂಕಿತ ವೃದ್ಧ ಮನೆಯಲ್ಲೇ ಸಾವು – ಕಹಳೆ ನ್ಯೂಸ್

ಬೆಳ್ತಂಗಡಿ : ಸದ್ಯಕ್ಕಂತೂ ಹೆಮ್ಮಾರಿ ಕೊರೊನ ತನ್ನ ರುದ್ರನರ್ತನವನ್ನು ನಿಲ್ಲಿಸುವಂತೆ ಕಾಣುತ್ತಿಲ್ಲ. ಕೊರೊನ ಸೋಂಕಿನ ಕಾರಣದಿಂದ ತಾಲೂಕಿನ ಕುವೆಟ್ಟು ಗ್ರಾಮದ ಪಿಲಿಚಾಮುಂಡಿಕಲ್ಲು ನಿವಾಸಿ ಸುಮಾರು 60 ವರ್ಷ ಪ್ರಾಯದ ವೃಧ್ದ ಇಂದು ಬೆಳಿಗ್ಗೆ ತಮ್ಮ ಸ್ವಗ್ರಹದಲ್ಲಿ ಸಾವನ್ನಪ್ಪಿದ್ದಾರೆ. ಅನಾರೋಗ್ಯದ ಕಾರಣದಿಂದ ಎರಡು ದಿನದ ಹಿಂದೆ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಗಂಟಲು ದ್ರವ ಪರೀಕ್ಷೆ ಮಾಡಲಾಗಿತ್ತು ,ಅದರ ವರದಿ ಇದೀಗ ಕೈ ಸೇರಿದ್ದು ಸೋಂಕು ದೃಢ ಪಟ್ಟಿದೆ. ಮೃತ ದೇಹ ಮನೆಯಲಿದ್ದು...
ದಕ್ಷಿಣ ಕನ್ನಡಪುತ್ತೂರು

Breaking News : ಪುತ್ತೂರಿನಲ್ಲಿ ಕೊರೊನಾಗೆ ಮತ್ತೊಂದು ಬಲಿ ; ಮಾಡ್ನೂರು ಗ್ರಾಮದ 50 ವರ್ಷದ ಸೋಂಕಿತ ವ್ಯಕ್ತಿ ಸಾವು – ಕಹಳೆ ನ್ಯೂಸ್

ಪುತ್ತೂರು : ನ್ಯುಮೋನಿಯಾದಿಂದ ಬಳಲುತ್ತಿದ್ದು, ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮಾಡ್ನೂರು ಗ್ರಾಮದ ಮೂಲಡ್ಕ 50 ವರ್ಷ ಪ್ರಾಯದ ನಿವಾಸಿಯೊಬ್ಬರಿಗೆ ಜು.10ರಂದು ಕೊರೋನಾ ದೃಢಪಟ್ಟಿದ್ದು, ತೀರಾ ಅನಾರೋಗ್ಯದಿಂದಾಗಿ ಜು.12ರಂದು ಅವರು ಮೃತಪಟ್ಟಿದ್ದಾರೆ. ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಅವರು ತೀರಾ ಗಂಭೀರ ಸ್ಥಿತಿಗೆ ಸಂಬಂಧಿಸಿ ಅವರನ್ನು ಮಂಗಳೂರಿನ ದೇರಳಕಟ್ಟೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರ ಗಂಟಲು ದ್ರವ ಪರೀಕ್ಷೆಯಲ್ಲಿ ವ್ಯಕ್ತಿಗೆ ಕೊರೋನಾ ದೃಢಪಟ್ಟಿದ್ದು, ಜು.12ರಂದು ಅವರು ಮೃತಪಟ್ಟಿದ್ದಾರೆ. ಮೃತ ದೇಹವನ್ನು ಪುತ್ತೂರು...
ದಕ್ಷಿಣ ಕನ್ನಡಪುತ್ತೂರುವಾಣಿಜ್ಯ

ಲಾಕ್ ಡೌನ್ ನಲ್ಲಿ ಮನೆಯಲ್ಲಿರೋ ಗ್ರಾಹಕರೇ ಗಮನಿಸಿ : ಅತೀ ಕಡಿಮೆ ದರದಲ್ಲಿ ದಿನಬಳಕೆ ವಸ್ತುಗಳ ಮಾಹಾ ಮಾರಾಟ – ಪುತ್ತೂರಿನ ರಿಲಯನ್ಸ್ ಸ್ಮಾರ್ಟ್ ‘ Jio Mart ‘ ಲಾಕ್ ಡೌನ್ ಸಂಡೇ ಸ್ಪೆಷಲ್ ಆಫರ್..! – ಕಹಳೆ ನ್ಯೂಸ್

ಲಾಕ್ ಡೌನ್ ನಲ್ಲಿ ಮನೆಯಲ್ಲಿರೋ ಗ್ರಾಹಕರೇ ಗಮನಿಸಿ : ಅತೀ ಕಡಿಮೆ ದರದಲ್ಲಿ ದಿನಬಳಕೆ ವಸ್ತುಗಳ ಮಾಹಾ ಮಾರಾಟ ಪುತ್ತೂರಿನ ರಿಲಯನ್ಸ್ ಸ್ಮಾರ್ಟ್ ' Jio Mart ' ಲಾಕ್ ಡೌನ್ ಸಂಡೇ ಸ್ಪೆಷಲ್ ಆಫರ್..! ನಲ್ಲಿ ನಡೆಯುತ್ತಿದೆ. ಕೇವಲ 9 ರೂಪಾಯಿಗೆ ಈರುಳ್ಳಿ, ಇನ್ನೂ ಅನೇಕ ವಸ್ತುಗಳು ಅತೀ ಕಡಿಮೆ ಬೆಲೆಯಲ್ಲಿ...! ⚡July 12, ಭಾನುವಾರ ಮಾತ್ರ ಸ್ಪೆಷಲ್ ಆಫರ್ ಅವಕಾಶ https://youtu.be/JxHNZuDmrk8   ನಿಮ್ಮ?ಮೊಬೈಲ್‌ ನಲ್ಲಿ ಬುಕ್...
ದಕ್ಷಿಣ ಕನ್ನಡಬಂಟ್ವಾಳಸುದ್ದಿ

Breaking News : ಬಂಟ್ವಾಳದಲ್ಲಿ ಕರ್ತವ್ಯನಿರತ ಪೋಲೀಸರ ಮೇಲೆ ಮಾರಣಾಂತಿಕ ಹಲ್ಲೆ ನಡಸಿದ ಅಬ್ದುಲ್ ಸಲಾಂ – ಕಹಳೆ ನ್ಯೂಸ್

ಬಂಟ್ವಾಳ : ಮೆಲ್ಕಾರ್ ಎಂಬಲ್ಲಿ ಲಾರಿ ಚಾಲಕರಿಗೆ ಹಾಗೂ ಸಾರ್ವಜನಿಕರಿಗೆ ಗಲಾಟೆಯಾಗುತ್ತಿದ್ದ ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ ಪೋಲೀಸರ ಮೇಲೆಯೇ ಹಲ್ಲೆ ನಡೆದ ಪ್ರಕರಣ ವರದಿಯಾಗಿದೆ. ಸಲಾಂ ಎಂಬ ವ್ಯಕ್ತಿ ಮಾರಕಾಯುಧದಿಂದ ಪೋಲೀಸರ ಮೇಲೆ ಹಲ್ಲೆ ನಡೆಸಿದ್ದಾನೆ. ಏನಿದು ಘಟನೆ : ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮೆಲ್ಕಾರ್ ಎಂಬಲ್ಲಿ ಲಾರಿ ಚಾಲಕರಿಗೆ ಹಾಗೂ ಸಾರ್ವಜನಿಕರಿಗೆ ಗಲಾಟೆಯಾಗುತ್ತಿದೆ ಎಂಬುದಾಗಿ ಬಂದ ಮಾಹಿತಿಯ ಮೇರೆಗೆ ಬಂಟ್ವಾಳ ನಗರ ಪೊಲೀಸ್ ಠಾಣಾ...
1 694 695 696 697 698 703
Page 696 of 703
ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ