” ಇಂಗು ತಿಂದ ಮಂಗನಂತಾದ ಮೊಹಮದ್..!? ” – ಸಾಮಾಜಿಕ ಜಾಲತಾಣದಲ್ಲಿ ಕೋಮು ಪ್ರಚೋದನಾ ಸಂದೇಶ ರವಾನಿಸಿದ್ದಾರೆಂದು ಆರೋಪಿಸಿದ್ದ ಖ್ಯಾತ ವೈದ್ಯ ಡಾ. ಸುರೇಶ್ ಪುತ್ತೂರಾಯರ ವಿರುದ್ಧ ಎಸ್.ಡಿ.ಪಿ.ಐ.ಯ ಮುಖಂಡನ ಖಾಸಗಿ ದೂರು ಅರ್ಜಿಯನ್ನು ಸ್ವಯಂ ಪ್ರೇರಿತರಾಗಿ ವಜಾಗೊಳಿಸಿದ ನ್ಯಾಯಾಧೀಶರು – ಕಹಳೆ ನ್ಯೂಸ್
ಪುತ್ತೂರು: ಸಾಮಾಜಿಕ ಜಾಲತಾಣದಲ್ಲಿ ಕೋಮು ಪ್ರಚೋದಕ ಸಂದೇಶ ರವಾನಿಸಿದ ಡಾ.ಸುರೇಶ್ ಪುತ್ತೂರಾಯರವರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲು ಪೊಲೀಸರಿಗೆ ನಿರ್ದೇಶನ ನೀಡಬೇಕು ಎಂದು ಕೋರಿ ಪುರುಷರಕಟ್ಟೆಯ ಪಿ.ಬಿ.ಕೆ. ಮೊಹಮ್ಮದ್ ಎಂಬವರು ವಕೀಲ ಅಬ್ದುಲ್ ಮಜೀದ್ ಖಾನ್‌ರವರ ಮೂಲಕ ಸಲ್ಲಿಸಿದ್ದ ಖಾಸಗಿ ದೂರನ್ನು ಪುತ್ತೂರು ಸೀನಿಯರ್ ಸಿವಿಲ್ ಜಡ್ಜ್ ಮತ್ತು ಎ.ಸಿ.ಜೆ.ಎಂ. ನ್ಯಾಯಾಲಯದ ನ್ಯಾಯಾಧೀಶ ಮಂಜುನಾಥ್‌ರವರು ವಜಾಗೊಳಿಸಿ ಜುಲೈ 3ರಂದು ಆದೇಶ ನೀಡಿದ್ದಾರೆ. ಸ್ವಯಂಪ್ರೇರಿತರಾಗಿ ಅರ್ಜಿ ವಜಾಗೊಳಿಸಿದ ನ್ಯಾಯಾಧೀಶರು : ಸಾಮಾಜಿಕ ಜಾಲತಾಣವಾದ...