ಜ.14 ರಿಂದ 19ರವರೆಗೆ ಆದಿಪರ್ಮಲೆಯಲ್ಲಿ ಶ್ರೀ ದೈವಗಳ ವರ್ಷಾವಧಿ ನೇಮೋತ್ಸವ-ಕಹಳೆ ನ್ಯೂಸ್
ಪುತ್ತೂರು : ಆದಿಪರ್ಮಲೆ ಅಂತ್ಯಪುತ್ಯೆ ನುಡಿಗಟ್ಟಿನಂತೆ ಪುತ್ತೂರು ತಾಲೂಕಿನ ಪಡುವನ್ನೂರು ಗ್ರಾಮದ ಪಡುಮಲೆ ಶ್ರೀ ಪೂಮಾಣಿ-ಕಿನ್ನಿಮಾಣಿ ದೈವಸ್ಥಾನ ಹಾಗೂ ವ್ಯಾಘ್ರ ಚಾಮುಂಡಿ ದೈವಸ್ಥಾನದಲ್ಲಿ ವರ್ಷಾವಧಿ ಶ್ರೀ ದೈವಗಳ ನೇಮೋತ್ಸವವು ಜ.14 ರಿಂದ 19ರವರೆಗೆ ಕ್ಷೇತ್ರದ ತಂತ್ರಿವರ್ಯರಾದ ಬ್ರಹ್ಮಶ್ರೀ ಕುಂಟಾರು ಶ್ರೀ ವಾಸುದೇವ ತಂತ್ರಿಯವರ ಮಾರ್ಗದರ್ಶನದಲ್ಲಿ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಯವರ ನೇತೃತ್ವದಲ್ಲಿ ವಿವಿಧ ವೈದಿಕ,ಧಾರ್ವಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಜ.14 ರಂದು ರಾತ್ರಿ ಭಂಡಾರ ತೆಗೆಯುವುದು, ಬಳಿಕ ಧ್ವಜಾರೋಹಣ,ಬೀರತಂಬಿಲ ನಡೆಯಲಿದೆ. ಜ.15...