ಫೆ.09ರಿಂದ ಫೆ.11ರವರೆಗೆ ಕುಂಜೂರುಪಂಜದಲ್ಲಿ ನೂತನವಾಗಿ ನಿರ್ಮಿಸಿರುವ ಗ್ರಾಮದೈವಗಳ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ವಾರ್ಷಿಕ ನೇಮೋತ್ಸವ – ಕಹಳೆ ನ್ಯೂಸ್
ಶ್ರೀ ದುರ್ಗಾ ಭಜನಾ ಮಂದಿರ (ರಿ.) ಕುಂಜೂರುಪಂಜ ಇದರ 22ನೇ ವರ್ಷದ ವಾರ್ಷಿಕೋತ್ಸವ ಮತ್ತು ನೂತನವಾಗಿ ನಿರ್ಮಿಸಿರುವ ಗ್ರಾಮದೈವಗಳಾದ ಇರುವೆರ್ ಉಳ್ಳಾಕುಲು ಇದರ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ನೇಮೋತ್ಸವವು ಫೆ.09ರಿಂದ ಫೆ.11ರವರೆಗೆ ನಡೆಯಲಿದೆ. ಫೆ.09ರಂದು ಹೊರಕಾಣಿಕೆ ನಡೆದು, ಫೆ.10ರಂದು ಬೆಳಿಗ್ಗೆ ಗಂಟೆ 8-48ರ ಮೀನ ಲಗ್ನದ ಶುಭ ಮುಹೂರ್ತದಲ್ಲಿ ಬ್ರಹ್ಮಶ್ರೀ ಕೆಮ್ಮಿಂಜೆ ಶ್ರೀ ಲಕ್ಷ್ಮೀಶ ತಂತ್ರಿಗಳ ನೇತೃತ್ವದಲ್ಲಿ ವೇದಮೂರ್ತಿ ಶ್ರೀ ಉದಯ ನಾರಾಯಣ ಕಲ್ಲೂರಾಯರ ಉಪಸ್ಥಿತಿಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ...