ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯಲ್ಲಿ ಗೀತಾ ಜಯಂತಿ ಆಚರಣೆ; ಬದುಕಿನ ಎಲ್ಲ ಜಂಜಾಟಗಳಿಗೆ ಪರಿಹಾರ ಭಗವದ್ಗೀತೆ : ಆದರ್ಶ ಗೋಖಲೆ-ಕಹಳೆ ನ್ಯೂಸ್
ಪುತ್ತೂರು: ಭಗವದ್ಗೀತೆ ನಮ್ಮ ದೇಶದ ಆತ್ಮ ಹಾಗೂ ಹಲವಾರು ಮಹಾ ವ್ಯಕ್ತಿಗಳಿಗೆ, ಸಂತರಿಗೆ ಭಗವದ್ಗೀತೆ ತಮ್ಮ ಜೀವನವನ್ನು ಅತ್ಯಂತ ಎತ್ತರಕ್ಕೆ ಏರಿಸಲು ಸ್ಪೂರ್ತಿಯಾಗಿದೆ. ಬದುಕಿನ ಎಲ್ಲಾ ಸಮಸ್ಯೆ, ಜಂಜಾಟಗಳಿಗೂ ಪರಿಹಾರ ರೂಪಿಯಾಗಿ ಈ ಪುಣ್ಯಗ್ರಂಥ ನಮ್ಮ ಮುಂದಿದೆ ಎಂದು ನೆಲ್ಲಿಕಟ್ಟೆ ಅಂಬಿಕಾ ಪದವಿ ಪೂರ್ವ ವಿದ್ಯಾಲಯದ ಉಪನ್ಯಾಸಕ ಆದರ್ಶ ಗೋಖಲೆ ಹೇಳಿದರು. ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯಲ್ಲಿ ಭಗವಾನ್ ಶ್ರೀಕೃಷ್ಣನು...