ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯಲ್ಲಿ ಪೋಕ್ಸೋ ಜಾಗೃತಿ ಕಾರ್ಯಕ್ರಮ ; ಗುಡ್ ಟಚ್, ಬ್ಯಾಡ್ ಟಚ್ ಯಾವುದು ಎಂದು ತಿಳಿದಿರಬೇಕು : ಹರಿಣಾಕ್ಷಿ ಶೆಟ್ಟಿ-ಕಹಳೆ ನ್ಯೂಸ್
ಪುತ್ತೂರು: ಮಕ್ಕಳಿಗೆ ಗುಡ್ ಟಚ್, ಬ್ಯಾಡ್ ಟಚ್ ಯಾವುದು ಎಂಬುದರ ತಿಳುವಳಿಕೆ ಇರಬೇಕು. ಇದರಿಂದ ಅವರು ತಮ್ಮ ಮೇಲೆ ಏನೂ ಅನಾಹುತ ನಡೆಯದಂತೆ ಎಚ್ಚರ ವಹಿಸಬಹುದು. ಇದರ ಜತೆಗೆ ಕಾನೂನು ಕೂಡ ಮಕ್ಕಳೊಂದಿಗಿದೆ. ಏನೇ ಸಮಸ್ಯೆ ಆದರೂ ಪೊಲೀಸರು ಮನೆಗೆ ಬಂದು ಎಫ್.ಐ.ಆರ್. ತೆಗೆದುಕೊಳ್ಳುತ್ತಾರೆ ಹಾಗೂ ತೊಂದರೆ ನೀಡಿದವರಿಗೆ ಕಠಿಣ ಶಿಕ್ಷೆ ಕೊಡಿಸುತ್ತಾರೆ ಎಂದು ಲಯನ್ ಕ್ಲಬ್ ಸದಸ್ಯೆ ಹರಿಣಾಕ್ಷಿ ಜೆ. ಶೆಟ್ಟಿ ಹೇಳಿದರು. ಅವರು ನಗರದ ನಟ್ಟೋಜ ಫೌಂಡೇಶನ್...