ಸರಕಾರದಿಂದಲೇ ನಮಗೆ ನೇರವಾಗಿ ಸಂಬಳ ಸಿಗುವಂತಾಗಲಿ; ಘನತ್ಯಾಜ್ಯ ಘಟಕ ಸಿಬಂದಿಗಳಿAದ ಶಾಸಕ ಅಶೋಕ್ ರೈ ಗೆ ಮನವಿ-ಕಹಳೆ ನ್ಯೂಸ್
ಪುತ್ತೂರು: ಗ್ರಾಮ ಪಂಚಾಯತ್‌ನ ಘನ ತ್ಯಾಜ್ಯ ಘಟಕದಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿರುವ ಸಿಬಂದಿಗಳಿಗೆ ಸರಕಾರದಿಂದಲೇ ನೇರವಾಗಿ ಸಂಬಳ ಸಿಗುವಂತೆ ಮಾಡಬೇಕು, ಈ ಬಗ್ಗೆ ಸಚಿವರು, ಸರಕಾರದ ಜೊತೆ ಮಾತುಕತೆ ನಡೆಸಬೇಕು ಎಂದು ಘನ ತ್ಯಾಜ್ಯ ಘಟಕದ ಸಿಬಂದಿಗಳು ಪುತ್ತೂರು ಶಾಸಕ ಅಶೋಕ್ ರೈಗಳಿಗೆ ಮನವಿ ಸಲ್ಲಿಸಿದ್ದಾರೆ. ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಯೋಜನೆ ಸಂಜೀವಿನಿಯಡಿಯಲ್ಲಿ ಮಹಿಳೆಯರ ಜೀವನ ಮಟ್ಟ ಸುಧಾರಿಸುವ ದಿಶೆಯಲ್ಲಿ ಆರಂಭಗೊAಡ ಘನತ್ಯಾಜ್ಯ ಘಟಕದ ಮಹಿಳಾ ಸಿಬ್ಬಂದಿ ಮಹಿಳಾ...