ವಿವೇಕಾನಂದ ಕಾಲೇಜಿನಲ್ಲಿ ಅಂತರ್ ವಿಶ್ವವಿದ್ಯಾನಿಲಯ ಮಟ್ಟದ ಸ್ಫರ್ಧೆ ವಿವೇಕೋತ್ಸವ 2025 -ಕಹಳೆ ನ್ಯೂಸ್
ಪುತ್ತೂರು: ಮನುಷ್ಯನ ಮನಸ್ಸಿಗೆ ಶಾಂತಿ ಹಾಗೂ ಸಂತೋಷ ಎಂಬುದು ಬಹಳ ಮುಖ್ಯ, ಇದು ಕಲೆಯನ್ನು ಆರಾಧಿಸುವುದರಿಂದ ಸಾಧ್ಯವಾಗುತ್ತದೆ. ಅದರೊಂದಿಗೆ ವೃತ್ತಿ ಜೀವನಕ್ಕೆ ಕಾಲಿಟ್ಟಾಗ ಒತ್ತಡದ ಜೀವನ ನಿರ್ವಹಣೆಗೂ ಕಲೆ ಸಹಕಾರಿಯಾಗುತ್ತದೆ. ಮುಂದಿನ ಸಾಂಸ್ಕೃತಿಕ ರಾಯಭಾರಿಗಳಾದ ವಿದ್ಯಾರ್ಥಿಗಳು ಕಲೆಯ ಮೌಲ್ಯವನ್ನು ಅರಿತುಕೊಂಡು ವಿವೇಕ ಉಳ್ಳವರಾಗಿ ಬದುಕಬೇಕು ಎಂದು ಶ್ರೀ ಮೂಕಾಂಬಿಕಾ ಕಲ್ಚುರಲ್ ಅಕಾಡೆಮಿ ಪುತ್ತೂರು ಇದರ ನೃತ್ಯ ನಿರ್ದೇಶಕ ವಿದ್ವಾನ್ ದೀಪಕ್ ಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಹೇಳಿದರು. ಇವರು ಪುತ್ತೂರಿನ ವಿವೇಕಾನಂದ...