Sunday, January 19, 2025

ಪುತ್ತೂರು

ದಕ್ಷಿಣ ಕನ್ನಡಪುತ್ತೂರು

Breaking News : ಕೆಮ್ಮಿಂಜೆಯ ಒಂದೂವರೆ ವರ್ಷದ ಮಗು ಸೇರಿದಂತೆ ಪುತ್ತೂರಿನಲ್ಲಿ 3 ಮಂದಿಗೆ ಕೊರೋನಾ ಪಾಸಿಟಿವ್ – ಕಹಳೆ ನ್ಯೂಸ್

ಪುತ್ತೂರು: ನಗರಸಭಾ ವ್ಯಾಪ್ತಿಯಲ್ಲಿ 2 ಮತ್ತು ಗ್ರಾಮಾಂತರ ಪ್ರದೇಶದಲ್ಲಿ 1 ಪ್ರಕರಣ ಸೇರಿದಂತೆ ಒಟ್ಟು 3 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಕೆಮ್ಮಿಂಜೆಯ ಒಂದೂವರೆ ವರ್ಷದ ಮಗು ಹಾಗೂ ದರ್ಬೆಯ ಯುವಕನೋರ್ವನಲ್ಲಿ ಕೊರೋನಾ ದೃಢ ಪಟ್ಟಿದೆ. ಒಳಮೊಗ್ರು ಗ್ರಾಮದ ಪರ್ಪುಂಜದ ವ್ಯಕ್ತಿಯೊಬ್ಬರಲ್ಲಿ ಕೊರೋನಾ ದೃಢಪಟ್ಟಿದೆ. ಈ ಮೂಲಕ ಪುತ್ತೂರು ಮತ್ತು ಕಡಬ ತಾಲೂಕುಗಳಲ್ಲಿ ಒಟ್ಟು 27 ಪ್ರಕರಣಗಳು ವರದಿಯಾಗಿವೆ....
ದಕ್ಷಿಣ ಕನ್ನಡಪುತ್ತೂರು

ಪುತ್ತೂರು ನಗರಸಭೆ ಹೊರಗುತ್ತಿಗೆ ನೌಕರ ಚಾಲಕನಿಗೆ ಕೊರೋನಾ ಪಾಸಿಟಿವ್ ‌; ಸೋಂಕಿತನ ಸೋಂಕಿನ ಮೂಲ‌ ನಿಗೂಢ – ಕಹಳೆ ನ್ಯೂಸ್

ಪುತ್ತೂರು : ನಗರಸಭೆ ಹೊರಗುತ್ತಿಗೆ ನೌಕರನಿಗೆ ಜೂ.29ರಂದು ಕೊರೋನಾ ಸೋಂಕು ದೃಢಪಟ್ಟಿದೆ. ಇವರು ನಗರಸಭೆಯ ಕಸ ಸಂಗ್ರಹದ ವಾಹನ ಚಾಲಕರಾಗಿದ್ದಾರೆ. ಚಾಲಕನ ಸೋಂಕಿನ ಮೂಲ ನಿಗೂಢ, ಈತ ಬೆಟ್ಟಂಪಾಡಿ ಮೂಲದ ವ್ಯಕ್ತಿ ಎಂದು ತಿಳಿದು ಬಂದಿದೆ....
ದಕ್ಷಿಣ ಕನ್ನಡಪುತ್ತೂರುಬಂಟ್ವಾಳ

ಪುತ್ತೂರಿನ ಕೊರೊನಾ ಸೋಂಕಿತನ ಸಂಪರ್ಕದಲ್ಲಿದ್ದ ಕಂಬಳಬೆಟ್ಟಿನ ಅಂಗಡಿ ಮಾಲೀಕನಿಗೆ ಕೊರೊನಾ ಪಾಸಿಟಿವ್ – ಕಹಳೆ ನ್ಯೂಸ್

ವಿಟ್ಲ: ಕಂಬಳಬೆಟ್ಟು ಅಂಗಡಿ ಮಾಲಿಕನಿಗೆ ಕೊರೊನಾ ಸೋಂಕು ಪತ್ತೆಯಾಗಿದೆ. ಮೊನ್ನೆ ಪುತ್ತೂರಿನಲ್ಲಿ ವ್ಯಕ್ತಿಯೊಬ್ಬರಿಗೆ ಕೊರೊನಾ ಪಾಸಿಟಿವ್ ಪತ್ತೆಯಾಗಿತ್ತು, ಅವರ ಸಂಪರ್ಕದಿಂದ ಅವರ ಸಂಬಂಧಿ ಕಂಬಳಬೆಟ್ಟು ಕೊರೊನಾ ಸೊಂಕು ಪತ್ತೆ ಆಗಿದೆ. ಪುತ್ತೂರಿನಲ್ಲಿ ಪಾಸಿಟಿವ್ ಪ್ರಕರಣ ಪತ್ತೆಯಾಗುತ್ತಿದ್ದಂತೆ ಅವರ ಸಂಬಂಧಿಗೆ ಸೇರಿದ ಅಂಗಡಿಯನ್ನು ಸೀಲ್ ಡೌನ್ ಮಾಡಲಾಗಿತ್ತು. ಬಳಿಕ ಅವರ ಗಂಟಲು ದ್ರವ ಪರೀಕ್ಷೆ ನಡೆಸಲಾಗಿದ್ದು, ಇಂದು ಸೋಂಕು ದೃಢಪಟ್ಟಿದೆ. ಇವರ ಅಂಗಡಿಗೆ ಹಲವಾರು ಭೇಟಿ ನೀಡಿದ್ದು, ಸೋಂಕು ಹರಡಿರುವ ಸಾಧ್ಯಗಳಿದ್ದು,...
ದಕ್ಷಿಣ ಕನ್ನಡಪುತ್ತೂರು

ಸುರತ್ಕಲ್ ಕಡಲ ಕಿನಾರೆಯಲ್ಲಿ ಸೂಚನೆ ಪಾಲಿಸದೆ‌, ಈಜಲು ತೆರಳಿ ನೀರಿನಲ್ಲಿ ಕೊಚ್ಚಿಹೊಗುತ್ತಿದ್ದ ಪುತ್ತೂರಿನ ಯುವಕರನ್ನು ರಕ್ಷಿಸಿದ ಸ್ಥಳೀಯರು..! – ಕಹಳೆ ನ್ಯೂಸ್

ಮಂಗಳೂರು: ಸುರತ್ಕಲ್ ನ ಗುಡ್ಡೆ ಕೊಪ್ಲ ಕಡಲ ಕಿನಾರೆಗೆ ಪುತ್ತೂರು ಕಡೆಯಿಂದ ವಿಹಾರಕ್ಕೆ ಬಂದ ಯುವಕರು ಸ್ಥಳೀಯ ಮೊಗವೀರರ ಎಚ್ಚರಿಕೆಗೂ ಗಮನ ಕೊಡದೆ ಕಡಲಲ್ಲಿ ಈಜುತ್ತಿರುವಾಗ ಕಡಲ ಅಬ್ಬರಕ್ಕೆ ಸಿಲುಕಿ ಮುಳುಗುತ್ತಿರುವಾಗ ಸ್ಥಳೀಯರು ರಕ್ಷಿಸಿದ ಘಟನೆ ಇಂದು ಸಂಜೆ ನಡೆದಿದೆ. ಯುವಕರನ್ನು ಕಡಲ ಮದ್ಯದಲ್ಲಿ ಮುಳುಗಿದ್ದ ಡ್ರಜ್ಜರ್ ಕಡೆಗೆ ಸಮುದ್ರದ ಅಲೆ ಎಳೆದುಕೊಂಡು ಹೋಗಿದ್ದು ಈ ವೇಳೆ ಸಹಾಯಕ್ಕೆ ಅಂಗಲಾಚುತ್ತಿದ್ದಾಗ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳ ಆಗಲಿ ಕರಾವಳಿ ರಕ್ಷಣಾ...
ದಕ್ಷಿಣ ಕನ್ನಡಪುತ್ತೂರು

Breaking News : ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ ಮಹಿಳೆಗೆ ಕೊರೊನಾ ಪಾಸಿಟಿವ್ ; ತರಕಾರಿ, ಹಣ್ಣು ಹಂಪಲುಗಳ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದ ಕೃಷ್ಣ ನಗರದ ಮಹಿಳೆಗೆ ಕೊರೋನಾ ಸೊಂಕು ದೃಢ – ಕಹಳೆ ನ್ಯೂಸ್

ಪುತ್ತೂರು: ತರಕಾರಿ, ಹಣ್ಣು ಹಂಪಲುಗಳ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರಿಗೆ ಕೊರೋನಾ ದೃಢಗೊಳ್ಳುವ ಮೂಲಕ ಪುತ್ತೂರು ನಗರಸಭೆ ವ್ಯಾಪ್ತಿಯಲ್ಲಿ ಜೂ.28ರಂದು ಕೊರೋನಾ ತನ್ನ ಅಟ್ಟಹಾಸ ಮುಂದುವರಿಸಿದೆ.  ಮನೆ ಮನೆ ತೆರಳಿ ಆರೋಗ್ಯ ವಿಚಾರಣೆ ನಡೆಸುತ್ತಿದ್ದ ಆರೋಗ್ಯ ಸಹಾಯಕಿಯರು ಮತ್ತು ಆಶಾ ಕಾರ್ಯಕರ್ತೆಯರ ಮೂಲಕ ಕೃಷ್ಣನಗರ ನಿವಾಸಿ ಮಹಿಳೆಯೊಬ್ಬರ ಗಂಟಲು ದ್ರವ ಮಾದರಿಯನ್ನು ಸಂಗ್ರಹಿಸಿ ಮಂಗಳೂರು ಕೋವಿಡ್ ಆಸ್ಪತ್ರೆಗೆ ಕಳುಹಿಸಲಾಗಿತ್ತು. ಇದೀಗ ವರದಿಯಲ್ಲಿ ಕೊರೋನಾ ದೃಢಗೊಂಡಿದೆ ಎಂಬ ಮಾಹಿತಿ ತಿಳಿದು ಬಂದೆ....
ಪುತ್ತೂರುಸುದ್ದಿ

ಪುತ್ತೂರು: ಬನ್ನೂರಿನ ನಿವಾಸಿಗೆ ಕೊರೊನ ದೃಢಪಟ್ಟ ಹಿನ್ನಲೆ; ವ್ಯಕ್ತಿ ವಾಸವಾಗಿದ್ದ ಮನೆ ಸೀಲ್ ಡೌನ್- ಕಹಳೆ ನ್ಯೂಸ್

ಪುತ್ತೂರು: ಬನ್ನೂರು ಚೆಲುವಮ್ಮನ ಕಟ್ಟೆ ಎಂಬಲ್ಲಿರುವ ತನ್ನ ತಾಯಿ ಮನೆಗೆ ಬಂದಿದ್ದ ಕಂಬಳಬೆಟ್ಟು ನಿವಾಸಿಗೆ ಕೊರೋನಾ ದೃಢ ಪಟ್ಟ ಹಿನ್ನೆಲೆಯಲ್ಲಿ ಇದೀಗ ಬನ್ನೂರಿನ ಮನೆಯನ್ನು ಸೀಲ್ ಡೌನ್ ಮಾಡಲಾಗಿದೆ. ಜೂ.25ರಂದು ಬೆಳಿಗ್ಗೆ ನಗರ ಸಭೆ ಪೌರಾಯುಕ್ತೆ ರೂಪಾ ಶೆಟ್ಟಿ ಮತ್ತು ಅರೋಗ್ಯ ಇಲಾಖೆ ಹಾಗೂ ಪೊಲೀಸರು ಸ್ಥಳಕ್ಕೆ ತೆರಳಿ ಮನೆಯ ಗೇಟ್ ಗೆ ಬ್ಯಾರಿಕೇಟ್ ಇಟ್ಟು ಸೀಲ್ ಡೌನ್ ಮಾಡಿದ್ದಾರೆ. ಆ ಮನೆಯಿಂದ ಯಾರೂ ಹೊರಗೆ ಬಾರದಂತೆ ಹಾಗೂ ಒಳಗೂ...
ಪುತ್ತೂರುವಾಣಿಜ್ಯ

ಉಪ್ಪಿನಂಗಡಿಯ ಅತೀ ದೊಡ್ಡ ವಸ್ತ್ರದ ಶೋರೂಂ ಶ್ರೀದುರ್ಗಾ ಟೆಕ್ಸ್‌ಟೈಲ್ಸ್ & ರೇಡಿಮೇಡ್ಸ್ ಶುಭಾರಂಭ ; ದೀಪ ಬೆಳಗಿಸಿ ಶುಭಹಾರೈಸಿದ ಶಾಸಕ ಸಂಜೀವ ಮಠಂದೂರು – ಕಹಳೆ ನ್ಯೂಸ್

ಪುತ್ತೂರು: ಕಳೆದ 5 ವರ್ಷಗಳಿಂದ ನಗುಮೊಗದ ಸೇವೆ ಹಾಗೂ ಗುಣಮಟ್ಟದ ವಸ್ತ್ರಗಳಿಗೆ ಮನೆ ಮಾತಾಗಿರುವ ಗ್ರಾಹಕರ ಪ್ರೀತಿ ವಿಶ್ವಾಸವನ್ನು ಗಳಿಸಿ, ಬೆಳ್ತಂಗಡಿ, ಉಜಿರೆ, ಮಡಂತ್ಯಾರು, ಬಂಟ್ವಾಳದಲ್ಲಿ ತನ್ನ ವಸ್ತ್ರಮಳಿಗೆಯನ್ನು ವಿಸ್ತರಿಸಿ ಇದೀಗ ನೂತನವಾಗಿ ಉಪ್ಪಿನಂಗಡಿ ಹಸನ್ ಟವರ್‍ಸ್‌ನಲ್ಲಿ ಪ್ರಾರಂಭಿಸಿದ ಶ್ರೀ ದುರ್ಗಾ ಟೆಕ್ಸ್‌ಟೈಲ್ಸ್ & ರೆಡಿಮೇಡ್ಸ್‌ನ ನೂತನ ಸಂಸ್ಥೆಯನ್ನು ಪುತ್ತೂರು ಶಾಸಕ ಸಂಜೀವ ಮಠಂದೂರು ದೀಪ ಬೆಳಗಿಸುದರ ಮೂಲಕ ಉದ್ಘಾಟಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಉಪ್ಪಿನಂಗಡಿ...
ಪುತ್ತೂರುಸುದ್ದಿ

ವಿನಾಯಕ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್(ರಿ) ಬಲ್ನಾಡು ಮತ್ತು ವಿ.ಹಿಂ.ಪ ಬಜರಂಗದಳ ಹಿಂದವಿ ಶಾಖೆ ಬಲ್ನಾಡು ಇದರ ವತಿಯಿಂದ ವೀರ ಮರಣ ಹೊಂದಿದ ಭಾರತಾಂಭೆಯ ವೀರ ಯೋಧರಿಗೆ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮ -ಕಹಳೆ ನ್ಯೂಸ್

ಭಾರತ ಮತ್ತು ಚೀನಾ ಗಡಿಯಲ್ಲಿರುವಂತಹ ಗ್ಯಾಲ್ವನ್ ಕಣಿವೆ ಯಲ್ಲಿ ಪಾಪಿ ಚೀನಾ ಕುತಂತ್ರಿ ನರಿಗಳಿಂದ ವೀರ ಮರಣ ಹೊಂದಿದ ಭಾರತಾಂಭೆಯ ವೀರ ಯೋಧರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಭೆಯು ವಿನಾಯಕ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್(ರಿ) ಬಲ್ನಾಡು ಮತ್ತು ವಿಶ್ವ ಹಿಂದೂ ಪರಿಷತ್ ಬಜರಂಗದಳ ಹಿಂದವಿ ಶಾಖೆ ಬಲ್ನಾಡು ಇದರ ವತಿಯಿಂದ ನಡೆಯಿತು. ಈ ಸಂದರ್ಭ ಬಜರಂಗದಳ ಪುತ್ತೂರು ಪ್ರಖಂಡ ಸಾಪ್ತಾಹಿಕ ಮಿಲನ್ ಪ್ರಮುಖ್ ವಿಶಾಖ್ ಸಸಿಹಿತ್ಲು ನುಡಿನಮನ ಸಲ್ಲಿಸಿದರು, ಚೇತನ್ ಬಲ್ನಾಡು...
1 280 281 282 283 284
Page 282 of 284