ಎಸ್.ಎಸ್.ಎಲ್.ಸಿ ಮರುಪರೀಕ್ಷೆಯಲ್ಲಿ 95% ಫಲಿತಾಂಶ ಸೋತವರಿಗೆ ದಾರಿದೀಪವಾದ ಪ್ರಗತಿ ಸ್ಟಡಿ ಸೆಂಟರ್-ಕಹಳೆ ನ್ಯೂಸ್
ಪುತ್ತೂರು: ಪುತ್ತೂರಿನ ಹೃದಯ ಭಾಗದಲ್ಲಿರುವ ಧರ್ಮಸ್ಥಳ ಬಿಲ್ಟಿಂಗ್ನಲ್ಲಿ ಕಾರ್ಯಾಚರಿಸುತ್ತಿರುವ ಪ್ರಗತಿ ಎಜುಕೇಶನಲ್ ಫೌಂಡೇಶನ್(ರಿ.)ಪುತ್ತೂರು ಇದರ ಅಧೀನಕ್ಕೆ ಒಳಪಟ್ಟಿರುವ ಪ್ರಗತಿ ಸ್ಟಡಿ ಸೆಂಟರ್ ಅನುತ್ತೀರ್ಣಗೊಂಡ ವಿದ್ಯಾರ್ಥಿಗಳಿಗಾಗಿಯೇ ಕಳೆದ 13 ವರುಷಗಳಿಂದ ತನ್ನ ಸೇವೆಯನ್ನು ನೀಡುತ್ತಾ ಬಂದಿದ್ದು, 2019-20ನೇ ಮರುಪರೀಕ್ಷೆಯಲ್ಲಿ ದಾಖಲೆಯ 95% ಫಲಿತಾಂಶ ಬಂದಿರುತ್ತದೆ. ದ.ಕ, ಕೊಡಗು, ಚಿಕ್ಕಮಂಗಳೂರು, ಬೆಂಗಳೂರು ಹಾಸನದಿಂದ ಬಂದ ಒಟ್ಟಾರೆ 65 ವಿದ್ಯಾರ್ಥಿಗಳು ಪಾಲ್ಗೊಂಡಿದ್ದು, 62 ವಿದ್ಯಾರ್ಥಿಗಳು ತೇರ್ಗಡೆ ಹೊಂದಿರುತ್ತಾರೆ. ಕೊರೋನಾ ಮಧ್ಯೆಯು ಎಸ್.ಎಸ್.ಎಲ್.ಸಿ ಪರೀಕ್ಷೆ ನಡೆದುದರ...