ಅಂಬಿಕಾ ವಿದ್ಯಾ ಸಮೂಹ ಸಂಸ್ಥೆಯಲ್ಲಿ ಗುರುವಂದನಾ ಕಾರ್ಯಕ್ರಮ – ಕಹಳೆ ನ್ಯೂಸ್
“ಶಿಕ್ಷಕರ ದಿನಾಚರಣೆಯಂದು ನಮ್ಮ ವೃತ್ತಿಧರ್ಮದ ಬಗ್ಗೆ ಖುಷಿ ಕೊಡುವ ಕ್ಷಣಗಳನ್ನು ನೆನಪಿಸಿಕೊಳ್ಳೋಣ. ಭಾರತದಲ್ಲಿ ಗುರುಪರಂಪರೆಗೆ ವಿಶೇಷ ಸ್ಥಾನ ಹಾಗೂ ಸರ್ವಪಳ್ಳಿ ರಾಧಾಕೃಷ್ಣರ ಕೊಡುಗೆ ಅಪಾರ. ಭಾರತ ದೇಶ ಪ್ರಕಾಶಿಸುವ ನಾಡು. ನಾವೆಲ್ಲ ನಿತ್ಯ ಜ್ಞಾನಿಗಳಾಗೋಣ” ಎಂದು ಅಂಬಿಕಾದಲ್ಲಿ ನಡೆದ ಶಿಕ್ಷಕ ದಿನಾಚರಣೆಯಲ್ಲಿ ಮುಖ್ಯ ಅತಿಥಿಗಳಾದ ಬೆಟ್ಟಂಪಾಡಿ ಪದವಿ ಕಾಲೇಜಿನ ಪ್ರಾಚಾರ್ಯರಾದ ವರದರಾಜ ಚಂದ್ರಗಿರಿಯವರು ಶಿಕ್ಷಕರಿಗೆ ಶುಭ ಹಾರೈಸಿದರು ಹಾಗೂ ಹೊಸ ಶಿಕ್ಷಣ ನೀತಿಯ ಬಗ್ಗೆ ಮಾಹಿತಿಯನ್ನು ತಿಳಿಸಿದರು. ಭಾವ ಜಗತ್ತನ್ನು...