ಪುತ್ತೂರು: ಬನ್ನೂರಿನಲ್ಲಿ ಕೊಳೆತ ಸ್ಥಿತಿಯಲ್ಲಿ ಆಟೋ ರಿಕ್ಷಾ ಚಾಲಕನ ಮೃತದೇಹ ಪತ್ತೆ- ಕಹಳೆ ನ್ಯೂಸ್
ಪುತ್ತೂರು: ಬನ್ನೂರು ನಿರ್ಪಾಜೆಯಲ್ಲಿ ನಿರ್ಮಾಣ ಹಂತದಲ್ಲಿರುವ ಮನೆಯ ಹಿಂಬದಿಯ ಹಳೆ ಮನೆಯೊಂದರ ಪಕ್ಕದ ಕೊಟ್ಟಿಗೆಯಲ್ಲಿ ಕೊಳೆತ ಸ್ಥಿತಿಯಲ್ಲಿರುವ ಅಟೋ ಚಾಲಕರೊಬ್ಬರ ಮೃತ ದೇಹ ಆ.30ರಂದು ಪತ್ತೆಯಾಗಿದೆ. ಆಟೋ ಚಾಲಕನಾಗಿದ್ದ ಸುದರ್ಶನ್ (37ವ) ಮೃತಪಟ್ಟವರು. ದಿ. ರಘುನಾಥ ರೈ ಮತ್ತು ವಿಮಲ ದಂಪತಿಯ ಪುತ್ರ ಸುದರ್ಶನ್ ಆಟೋ ಚಾಲಕನಾಗಿದ್ದು ಕಳೆದ ಕೊರೋನಾ ಲಾಕ್ ಡೌನ್ ಬಳಿಕ ಮನೆಯಲ್ಲೇ ಇದ್ದು ಸ್ಥಳೀಯವಾಗಿ ಕೂಲಿ ಕೆಲಸ ಮಾಡುತ್ತಿದ್ದರೆನ್ನಲಾಗಿದೆ. ಆ.30 ರಂದು ಸ್ಥಳೀಯರಿಗೆ ಸುದರ್ಶನ ರೈ...