ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ನಿತ್ಯ ಕರಸೇವಕ ; ಪೈ ಟ್ರೇಡರ್ಸ್ ನ ಮಾಲಕ ಹರೀಶ್ ಪೈ ನಿಧನ – ಕಹಳೆ ನ್ಯೂಸ್
ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಿತ್ಯ ಕರಸೇವಕರ ಪ್ರಮುಖ್ ಆಗಿ ಚಿರಪರಿಚಿತಗೊಂಡಿರುವ ಇಲ್ಲಿನ ಸಿಪಿಸಿ ಪ್ಲಾಝಾದಲ್ಲಿರುವ ಪೈ ಟ್ರೇಡರ್‍ಸ್‌ನ ಮಾಲಕ ಹರೀಶ್ ಪೈ(52ವ)ರವರು ಜು.14ರ ನಸುಕಿನ ಜಾವ ಮೃತಪಟ್ಟಿದ್ದಾರೆ. ಜು.೧೨ರಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಿತ್ಯ ಕರಸೇವಕರೊಂದಿಗೆ ಆದಿತ್ಯವಾರದ ಸ್ವಚ್ಛತಾ ಕಾರ್ಯವನ್ನು ಮುಗಿಸಿ ಮಧ್ಯಾಹ್ನ ದೇವಳದ ಹೊರಾಂಗಣದ ಗೋಪುರದಲ್ಲಿ ಕುಳಿತಿದ್ದ ವೇಳೆ ಆಕಸ್ಮಿಕವಾಗಿ ಅವರ ಆರೋಗ್ಯದಲ್ಲಿ ಏರುಪೇರು ಕಂಡಿದ್ದು ತಕ್ಷಣ ಅವರನ್ನು ಪುತ್ತೂರು ಆದರ್ಶ ಆಸ್ಪತ್ರೆಗೆ...