ಫಿಲೋಮಿನಾ ಪ. ಪೂ ಕಾಲೇಜಿನಲ್ಲಿ ‘ವಾಲ್ಮೀಕಿ ದಿನಾಚರಣೆ’ ಹಾಗೂ ‘ಫಿಲೋ ಬ್ಲೋಸ್ಸಮ್-2024’ ಪ್ರತಿಭಾ ದಿನ ಕಾರ್ಯಕ್ರಮ-ಕಹಳೆ ನ್ಯೂಸ್
ಪುತ್ತೂರು: ಸಂತ ಫಿಲೋಮಿನಾ ಪ. ಪೂ ಕಾಲೇಜು ಹಾಗೂ ಲಲಿತ ಕಲಾ ಸಂಘದ ಆಶ್ರಯದಲ್ಲಿ ಅ17 ರಂದು ವಾಲ್ಮೀಕಿ ದಿನಾಚರಣೆ ಹಾಗೂ 'ಫಿಲೋ ಬ್ಲೋಸ್ಸಮ್ 2024' ಪ್ರತಿಭಾ ದಿನ ಕಾರ್ಯಕ್ರಮವು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಸುಳ್ಯದ ಖ್ಯಾತ ಮಿಮಿಕ್ರಿ ಕಲಾವಿದರಾದ ಶ್ರೀ ಪಟ್ಟಾಭಿರಾಮ ಅವರಿಂದ ಮಿಮಿಕ್ರಿ ಹಾಗೂ ಹಾಸ್ಯ ಚಟಾಕಿಗಳೊಂದಿಗೆ ಸೇರಿದ ಕಾಲೇಜಿನ ವಿದ್ಯಾರ್ಥಿಗಳ ಮನರಂಜಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ರೆ. ಫಾ....