ರಕ್ತದಾನವು ನಾವು ಇತರರಿಗೆ ನೀಡಬಹುದಾದ ಅಮೂಲ್ಯ ಹಾಗೂ ಜೀವೌಳಿಸುವ ಕೊಡುಗೆಯಾಗಿದೆ ; ಡಾ.ಸೀತಾರಮ ಭಟ್.ಕೆ-ಕಹಳೆ ನ್ಯೂಸ್
ಪುತ್ತೂರು: ರಕ್ತಕ್ಕೆ ಪರ್ಯಾಯವಿಲ್ಲ, ಯಾವ ಸಂದರ್ಭದಲ್ಲಿಯೂ ಮನುಷ್ಯನಿಗೆ ರಕ್ತದ ಆವಶ್ಯಕತೆ ಉಂಟಾಗಬಹುದು ಹಾಗಾಗಿ ರಕ್ತದಾನವು ನಾವು ಇತರರಿಗೆ ನೀಡಬಹುದಾದ ಅಮೂಲ್ಯ ಹಾಗೂ ಜೀವೌಳಿಸುವ ಕೊಡುಗೆಯಾಗಿದೆ ಎಂದು ಪುತ್ತೂರಿನ ರೋಟರಿ ಕ್ಯಾಂಪ್ಕೋ ರಕ್ತ ಕೇಂದ್ರದÀ ವೈದ್ಯಾಧಿಕಾರಿ ಡಾ.ಸೀತಾರಮ ಭಟ್.ಕೆ ಹೇಳಿದರು. ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿAಗ್ ಎಂಡ್ ಟೆಕ್ನಾಲಜಿಯ ಯೂತ್ ರೆಡ್‌ಕ್ರಾಸ್ ಮತ್ತು ಎನ್‌ಎಸ್‌ಎಸ್ ಘಟಕ ಹಾಗೂ ರೋಟರಿ ಕ್ಯಾಂಪ್ಕೋ ರಕ್ತ ಕೇಂದ್ರ ಪುತ್ತೂರು ಇದರ ಸಂಯುಕ್ತ ಆಶ್ರಯದಲ್ಲಿ...