Sunday, January 19, 2025

ಸುಬ್ರಹ್ಮಣ್ಯ

ದಕ್ಷಿಣ ಕನ್ನಡಸುದ್ದಿಸುಬ್ರಹ್ಮಣ್ಯ

ಕುಕ್ಕೆ ಸುಬ್ರಹ್ಮಣ್ಯ ಪೇಟೆಯಲ್ಲಿ ಇಂದಿನಿ0ದ ಪಾರ್ಕಿಂಗ್ ನಿಯಮಾವಳಿಗಳನ್ನು ಉಲ್ಲಂಘಿಸಿದ ವಾಹನಗಳಿಗೆ ದಂಡ ಕಡ್ಡಾಯ – ಕಹಳೆ ನ್ಯೂಸ್

ಕುಕ್ಕೆ ಸುಬ್ರಹ್ಮಣ್ಯ ಪೇಟೆಯಲ್ಲಿ ಜಾರಿಗೊಳಿಸಲಾಗಿರುವ ಹೊಸ ಸಂಚಾರ ಹಾಗೂ ಪಾರ್ಕಿಂಗ್ ನಿಯಮಾವಳಿಗಳನ್ನು ಉಲ್ಲಂಘಿಸಿದ ವಾಹನ ಇಂದಿನಿAದ ದಂಡ ವಿಧಿಸಲಾಗುತ್ತದೆ. ಸಂಚಾರ ನಿಯಮ ಉಲ್ಲಂಘಿಸಿರುವುದು ಕಂಡು ಬಂದಲ್ಲಿ ಸಾರ್ವಜನಿಕರು ಕೂಡ ಪೊಲೀಸರಿಗೆ / ಗೃಹರಕ್ಷಕರಿಗೆ ಮಾಹಿತಿ ನೀಡಬಹುದು. ಕಡ್ಡಾಯವಾಗಿ ಸಂಚಾರ, ಪಾರ್ಕಿಂಗ್ ನಿಯಮ ಪಾಲಿಸಿ, ಸುಗಮ ಸಂಚಾರಕ್ಕೆ ಸಹಕರಿಸುವಂತೆ ಸುಬ್ರಹ್ಮಣ್ಯ ಪೊಲೀಸ್ ಠಾಣಾ ಉಪನಿರೀಕ್ಷಕರು ಮನವಿ ಮಾಡಿಕೊಂಡಿದ್ದಾರೆ....
ದಕ್ಷಿಣ ಕನ್ನಡಬೆಂಗಳೂರುಸುದ್ದಿಸುಬ್ರಹ್ಮಣ್ಯ

ಮಂಗಳೂರು-ಬೆಂಗಳೂರು ರೈಲ್ವೇ ಮಾರ್ಗದಲ್ಲಿ ಮಣ್ಣು ಕುಸಿತ ; ರೈಲು ಸಂಪರ್ಕ ಸ್ಥಗಿತ..!! – ಕಹಳೆ ನ್ಯೂಸ್

ಮಂಗಳೂರು-ಬೆಂಗಳೂರು ರೈಲ್ವೇ ಮಾರ್ಗದಲ್ಲಿ ಮಣ್ಣು ಜರಿದ ಹಿನ್ನಲೆ ಮಂಗಳೂರು-ಬೆಂಗಳೂರು ರೈಲು ಸಂಪರ್ಕ ಸ್ಥಗಿತಗೊಂಡಿದೆ. ಸುಬ್ರಹ್ಮಣ್ಯ-ಎಡಕುಮೇರಿ ಮಾರ್ಗ ಮಧ್ಯದ ದೋಣಿಗಲ್ ಎಂಬಲ್ಲಿ ರೈಲು ಮಾರ್ಗದ ಕೆಳಗಿನಿಂದ ಮಣ್ಣು ಕುಸಿದಿದ್ದು, ಸಂಜೆ 5.30ಕ್ಕೆ ಸುಬ್ರಹ್ಮಣ್ಯ ರೈಲು ನಿಲ್ದಾಣದಿಂದ ಹೊರಟ ಬಿಜಾಪುರ ಎಕ್ಸ್‌ಪ್ರೆಸ್‌ ರೈಲು ವಾಪಾಸ್ಸು ಸುಬ್ರಹ್ಮಣ್ಯ ನಿಲ್ದಾಣಕ್ಕೆ ಬಂದಿದೆನ್ನಲಾಗಿದೆ. ಮಂಗಳೂರು-ಬೆಂಗಳೂರು ರೈಲು ಸೇರಿದಂತೆ ಮಾರ್ಗದ ಮಧ್ಯೆ ಸಂಚರಿಸುವ ಎಲ್ಲಾ ರೈಲುಗಳ ಸಂಚಾರ ಸ್ಥಗಿತಗೊಂಡಿದೆ....
ದಕ್ಷಿಣ ಕನ್ನಡಸುದ್ದಿಸುಬ್ರಹ್ಮಣ್ಯ

ಗುತ್ತಿಗಾರು: ಕಾಜಿಮಡ್ಕ ಬಳಿ ಕಾರು – ಜೀಪು ಡಿಕ್ಕಿ, ಅಲ್ಪಗಾಯ- ಕಹಳೆ ನ್ಯೂಸ್

ಗುತ್ತಿಗಾರು ಬಳಿಯ ಕಾಜಿಮಡ್ಕ ಎಂಬಲ್ಲಿ ಕಾರು ಮತ್ತು ಜೀಪು ಪರಸ್ಪರ ಡಿಕ್ಕಿಯಾಗಿ ಕಾರಿನಲ್ಲಿದ್ದವರಿಗೆ ಅಲ್ಪ ಗಾಯವಾದ ಘಟನೆ ಜು.18 ರ ಸಂಜೆ ನಡೆದಿದೆ. ಗುತ್ತಿಗಾರಿನಿಂದ ಪ್ರಸಾದ್ ಎಂಬವರು ತನ್ನ ಕಾರಿನಲ್ಲಿ ಸುಳ್ಯದಿಂದ ಗುತ್ತಿಗಾರು ಕಡೆ ಬರುತಿದ್ದು, ಅರಂತೋಡಿನವರ ವರೊಬ್ಬರ ಜೀಪು ಗುತ್ತಿಗಾರಿನಿಂದ ಸುಳ್ಯ ಕಡೆ ಹೋಗುತಿತ್ತೆನ್ನಲಾಗಿದೆ. ಕಾಜಿಮಡ್ಕ ಎಂಬಲ್ಲಿ ಪರಸ್ಪರ ಡಿಕ್ಕಿ ಹೊಡೆದು ಕಾರಿನಲ್ಲಿದ್ದವರಿಗೆ ಸ್ವಲ್ಪ ಗಾಯವಾಗಿರುವುದಾಗಿದ್ದು, ಕಾರು, ಜೀಪ್ ಗೆ ಹಾನಿಯಾಗಿರುವುದಾಗಿ ತಿಳಿದು ಬಂದಿದೆ....
ದಕ್ಷಿಣ ಕನ್ನಡಸುದ್ದಿಸುಬ್ರಹ್ಮಣ್ಯ

ಘಟ್ಟ ಪ್ರದೇಶಗಳಲ್ಲಿ ಭಾರೀ ಮಳೆ ಉಕ್ಕಿ ಹರಿಯುತ್ತಿರುವ ಕುಮಾರಧಾರಾ ನದಿ – ಕಹಳೆ ನ್ಯೂಸ್

ಕುಕ್ಕೆ ಸುಬ್ರಹ್ಮಣ್ಯ ಸ್ನಾನಘಟ್ಟ ಸಂಪೂರ್ಣ ಮುಳುಗಡೆ ಶೌಚಗೃಹ, ಭಕ್ತರ ಲಗೇಜ್ ಕೊಠಡಿಯೂ ಭಾಗಶ ಮುಳುಗಡೆ ಸುಬ್ರಹ್ಮಣ್ಯ-ಪುತ್ತೂರು-ಮಂಜೇಶ್ವರ ರಾಜ್ಯ ಹೆದ್ದಾರಿಯಲ್ಲಿ ಹರಿಯುತ್ತಿರುವ ನದಿ ನೀರು ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತ ಏರುತ್ತಿರುವ ಕುಮಾರಧಾರಾ ನದಿ ನೀರಿನ ಮಟ್ಟ....
ದಕ್ಷಿಣ ಕನ್ನಡಸುದ್ದಿಸುಬ್ರಹ್ಮಣ್ಯ

ಸುಬ್ರಮಣ್ಯ: ನಾಗರ ಹಾವಿನ ಮರಿಯನ್ನು ರಕ್ಷಿಸಿದ ಸ್ಪೇಕ್ ಮಾಧವ – ಕಹಳೆ ನ್ಯೂಸ್

ಸುಬ್ರಮಣ್ಯ : ಕುಕ್ಕೆ ಸುಬ್ರಹ್ಮಣ್ಯ ಪೇಟೆಯ ಬೈಪಾಸ್ ರಸ್ತೆಯಲ್ಲಿ ನಾಗರಹಾವಿನ ಮರಿಯೊಂದು ನಿಧಾನಕ್ಕೆ ಬರುತ್ತಿದ್ದು ಕಂಡ ಟೂರಿಸ್ಟ್ ವಾಹನ ಚಾಲಕ ಮಾಲಕ ಸಂಘದವರು ಹಾಗೂ ಆಟೋ ರಿಕ್ಷದವರು ಗಮನಿಸಿ ಕೂಡಲೇ ಹಾವು ಹಿಡಿಯಲು ತಜ್ಞರಾದ ಆಟೋ ಚಾಲಕ ಸ್ನೇಕ್ ಮಾಧವರನ್ನು ಕರೆಸಿದರು. ಕೂಡಲೇ ಬಂದ ಸ್ನೇಕ್ ಮಾಧವರು ಹಾವಿನ ಮರಿಯನ್ನು ಪಕ್ಕಕ್ಕೆ ತಂದು, ಅದರ ಹೊರ ಭಾಗದಲ್ಲಿ ಆದ ಸಣ್ಣಪುಟ್ಟ ಗಾಯಕ್ಕೆ ಮುಲಾಂ ಹಚ್ಚಿ ಸಚಿವಳಿಸಿ ಅದನ್ನು ಸಂರಕ್ಷಿಸಿರುವರು. ಮಾದವರ...
ಸುದ್ದಿಸುಬ್ರಹ್ಮಣ್ಯ

ಕಲ್ಮಡ್ಕ ಗ್ರಾಮ ಪಂಚಾಯತ್ ವತಿಯಿಂದ ಚಿಗುರು ಗೆಳೆಯರ ಬಳಗ (ರಿ.) ಪಂಬೆತ್ತಾಡಿ ಇವರ ಸಹಕಾರದಲ್ಲಿ ಮುರಿದು ಬೀಳುವ ಸ್ಥಿತಿಯಲ್ಲಿದ್ದ ಮನೆಯ ಛಾವಣಿ ನಿರ್ಮಾಣ – ಕಹಳೆ ನ್ಯೂಸ್

ಗ್ರಾಮ ಪಂಚಾಯತ್ ಕಲ್ಮಡ್ಕ ಅಧ್ಯಕ್ಷರಾದ ಶ್ರೀ ಮಹೇಶ್ ಕುಮಾರ್ ಕರಿಕ್ಕಳ ಇವರ ನೇತೃತ್ವದಲ್ಲಿ ಕಲ್ಮಡ್ಕ ಗ್ರಾಮ ಪಂಚಾಯತ್ ವತಿಯಿಂದ ಚಿಗುರು ಗೆಳೆಯರ ಬಳಗ (ರಿ.) ಪಂಬೆತ್ತಾಡಿ ಇವರ ಸಹಕಾರದೊಂದಿಗೆ ಒಬ್ಬಂಟಿ ಜೀವನವನ್ನು ನಡೆಸುತ್ತಿರುವ ಪಾರ್ವತಿ ಮಂಚಿಕಟ್ಟೆ ಇವರ ಮನೆಯ ಛಾವಣಿಯು ಹಲವು ಸಮಯಗಳಿಂದ ಮುರಿದು ಬೀಳುವ ಸ್ಥಿತಿಯಲ್ಲಿ ಇದ್ದದನ್ನು ಹೊಸ ಶೀಟು ಹಾಕಿ ಸರಿಪಡಿಸಿಲಾಯಿತು. ಚಿಗುರು ಗೆಳೆಯರ ಬಳಗ ಇದರ ಅಧ್ಯಕ್ಷರಾದ ಶ್ರೀನಿವಾಸ ಭೀಮಗುಳಿ ಹಾಗೂ ಸದಸ್ಯರುಗಳಾದ ವಿನಯ್ ಕರಿಕ್ಕಳ,...
ದಕ್ಷಿಣ ಕನ್ನಡಸುದ್ದಿಸುಬ್ರಹ್ಮಣ್ಯ

ಬಾಯಲ್ಲಿ ನೊರೆ ಕಾರುತ್ತಾ ಒದ್ದಾಡುತ್ತಿದ್ದ ಅಪರಿಚಿತ ವ್ಯಕ್ತಿಯ ರಕ್ಷಿಸಿದ ಪೊಲೀಸರು-ಕಹಳೆ ನ್ಯೂಸ್

ಕುಕ್ಕೆ ಸುಬ್ರಹ್ಮಣ್ಯ: ಅಪರಿಚಿತ ವ್ಯಕ್ತಿಯೊಬ್ಬರು ಅನಾರೋಗ್ಯಕ್ಕೆ ಒಳಗಾಗಿ ಒದ್ದಾಡುತ್ತಿರುವುದನ್ನು ಕಂಡು ಚಿಕಿತ್ಸೆಗಾಗಿ ಪೊಲೀಸರ ನೆರವಿನೊಂದಿಗೆ ಖಾಸಗಿ ಆಂಬ್ಯುಲೆನ್ಸ್ ನಲ್ಲಿ ಕಡಬಕ್ಕೆ ಕರೆದೊಯ್ದ ಘಟನೆ ನಡೆದಿದೆ. ಸುಬ್ರಹ್ಮಣ್ಯದ ವನದುರ್ಗ ದೇವಿ ದೇವಸ್ಥಾನದ ಬಳಿ ಬಾಯಲ್ಲಿ ನೊರೆ ಬಂದು ಅನಾಮಧೇಯ ವ್ಯಕ್ತಿಯೊಬ್ಬರು ಒದ್ದಾಡುತ್ತಿದ್ದರು. ಪೊಲೀಸರ ಸಹಾಯವಾಣಿಗೆ ಕರೆ ಮಾಡಿದ ಹಿನ್ನಲೆಯಲ್ಲಿ ಸುಬ್ರಹ್ಮಣ್ಯ ಎಸ್.ಐ ಕಾರ್ತಿಕ್ ನೇತೃತ್ವದ ಪೋಲಿಸರು ಆಗಮಿಸಿ ಸುಬ್ರಹ್ಮಣ್ಯ ದಲ್ಲಿ ಸಕಾಲಕ್ಕೆ ವೈದ್ಯಕೀಯ ಸೌಲಭ್ಯ ಇಲ್ಲದ ಕಾರಣ ಯುವ ತೇಜಸ್ ಆಂಬ್ಯುಲೆನ್ಸ್...
ದಕ್ಷಿಣ ಕನ್ನಡಸುದ್ದಿಸುಬ್ರಹ್ಮಣ್ಯ

ಸುಬ್ರಹ್ಮಣ್ಯ: ಕೆ.ಎಸ್.ಆರ್.ಟಿ. ಸಿ ಬಸ್ ತಂಗುದಾಣದಲ್ಲಿ ರಾಶಿ ರಾಶಿ ಕಸ –ಕಹಳೆ ನ್ಯೂಸ್

ಸುಬ್ರಹ್ಮಣ್ಯದ ಕೆ.ಎಸ್.ಆರ್.ಟಿ .ಸಿ ಬಸ್ ತಂಗುದಾಣದಲ್ಲಿ ಕಸದ ರಾಶಿ ಕಂಡು ಬಂದಿದೆ. ಬಸ್ ತಂಗುದಾಣದ ಸುತ್ತಮುತ್ತ ಕಸದ ರಾಶಿ ಬಿದ್ದಿದ್ದು, ಕಸವನ್ನು ಕಟ್ಟಿ ಇಟ್ಟ ಚೀಲಗಳು ರಾಶಿ ಬೀಳಲಾರಂಬಿಸಿವೆ.   ಕಳೆದ 4-5 ದಿನಗಳಿಂದ ಕಸ ಹಾಗೇ ಇದ್ದು ವಿಲೇವಾರಿ ಮಾಡದೆ ವಾಸನೆ ಏಳಲಾರಂಭಿಸಿದೆ. ಇನ್ನು ರೋಗ ಹರಡಲೊಂದೇ ಬಾಕಿ ಎಂಬAತಾಗಿದೆ. ದಿನಂಪ್ರತಿ ಸಾವಿರಾರು ಯಾತ್ರಾರ್ಥಿಗಳು ಬರವ ತಾಣದಲ್ಲಿ ಗಲೀಜು ತುಂಬಿ ತುಳುಕಲು ಆರಂಭಿಸಿದ್ದು ಯಾತ್ರಾರ್ಥಿಗಳು ಹಿಡಿಶಾಪ ಹಾಕಲು ಆರಂಭಿಸಿದ್ದಾರೆ....
1 2 3 4 14
Page 2 of 14