Sunday, January 19, 2025

ಸುಬ್ರಹ್ಮಣ್ಯ

ದಕ್ಷಿಣ ಕನ್ನಡಸುದ್ದಿಸುಬ್ರಹ್ಮಣ್ಯ

ಸುಬ್ರಹ್ಮಣ್ಯ ಶ್ರೀಗಳ 26 ನೇಯ ಚಾತುರ್ಮಾಸ್ಯ ವೃತ ಮೃತ್ತಿಕಾ ವಿಸರ್ಜನೆ ಮೂಲಕ ಸಮಾಪ್ತಿ – ಕಹಳೆ ನ್ಯೂಸ್

ಸುಬ್ರಹ್ಮಣ್ಯ : ಶ್ರೀ ಜಗದ್ಗುರು ಮಧ್ವಾಚಾರ್ಯ ಮೂಲ ಮಹಾ ಸಂಸ್ಥಾನಮ್ ಶ್ರೀ ವಿಷ್ಣುತೀರ್ಥ ಪೀಠಮ್ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು ತಮ್ಮ 26 ನೆಯ ಚಾತುರ್ಮಾಸ್ಯ ವೃತವನ್ನು ಮೃತ್ತಿಕಾ ವಿಸರ್ಜನೆ ಮೂಲಕ ಸಮಾಪ್ತಿಗೊಳಿಸಿದರು. ಸುಬ್ರಹ್ಮಣ್ಯ ಮಠದಲ್ಲಿ ಚಾತುರ್ಮಾಸ್ಯ ವೃತ್ತಸ್ಥರಾಗಿದ್ದ ಶ್ರೀಗಳು 26 ಚಾತುರ್ಮಾಸ್ಯಗಳನ್ನು ಪೂರೈಸಿದ್ದಾರೆ....
ಉಡುಪಿಕಡಬದಕ್ಷಿಣ ಕನ್ನಡಸುದ್ದಿಸುಬ್ರಹ್ಮಣ್ಯಸುಳ್ಯ

ಆ. 5,6 ರಂದು ಕರಾವಳಿಯಲ್ಲಿ ‘ಆರೆಂಜ್‌ ಅಲರ್ಟ್‌’ ; ಭಾರೀ ಗಾಳಿಮಳೆ | ಕಡಬ ಹಾಗೂ ಸುಳ್ಯ ತತ್ತರ – ಕಹಳೆ ನ್ಯೂಸ್

ಮಂಗಳೂರು/ಉಡುಪಿ: ಮುಂಗಾರು ಬಿರುಸು ಪಡೆದು ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಆ. 4ರಿಂದ 6ರ ವರೆಗೆ ಕರಾವಳಿ ಭಾಗದಲ್ಲಿ “ಆರೆಂಜ್‌ ಅಲರ್ಟ್‌’ ಘೋಷಿಸಲಾಗಿದೆ. ಈ ವೇಳೆ ಭಾರೀ ಮಳೆ, ಗಾಳಿ ಮತ್ತು ಸಮುದ್ರದ ಅಬ್ಬರ ಹೆಚ್ಚಿರುವ ನಿರೀಕ್ಷೆ ಇದೆ. ದ.ಕ. ಜಿಲ್ಲೆಯಾದ್ಯಂತ ಗುರುವಾರ ದಿನವಿಡೀ ಉತ್ತಮ ಮಳೆಯಾಗಿದೆ. ಮಂಗಳೂರು ನಗರ ದಲ್ಲಿ ಬಿಸಿಲು ಮತ್ತು ಮೋಡದಿಂದ ಕೂಡಿದ ವಾತಾವರಣ ಇತ್ತು. ರಾತ್ರಿ ವೇಳೆ ಮಳೆಯ ಬಿರುಸು ಹೆಚ್ಚಿತ್ತು. ಉಡುಪಿಯಲ್ಲಿ ಹಗಲು...
ಕಡಬಕ್ರೈಮ್ದಕ್ಷಿಣ ಕನ್ನಡಸುದ್ದಿಸುಬ್ರಹ್ಮಣ್ಯ

ಕುಕ್ಕೆ ಸುಬ್ರಹ್ಮಣ್ಯದಲ್ಲಿ ವರುಣನ ರುದ್ರ ನರ್ತನ – ಫಲಿಸದ ಪ್ರಾರ್ಥನೆ ; ಕೈ ಕೈ ಹಿಡಿದ ಸ್ಥಿತಿಯಲ್ಲಿ ಮಣ್ಣಿನಡಿ ಮಕ್ಕಳ ಶವ ಪತ್ತೆ – ಕಹಳೆ ನ್ಯೂಸ್

ಸುಬ್ರಹ್ಮಣ್ಯ, ಆ 02 : ಭಾರೀ ಮಳೆ ಸುರಿದ ಪರಿಣಾಮ ಸುಬ್ರಹ್ಮಣ್ಯ ಪರಿಸರದಲ್ಲಿ ಗುಡ್ಡ ಕುಸಿದು ಸೋಮವಾರ ರಾತ್ರಿ ಇಬ್ಬರು ಮಕ್ಕಳು ಮೃತಪಟ್ಟಿದ್ದು, ಮಣ್ಣಿನಡಿ ಸಿಲುಕಿದ ಸೋದರಿಯರನ್ನು ದೀರ್ಘ‌ ಕಾರ್ಯಾಚರಣೆಯ ಬಳಿಕ ಮೇಲಕ್ಕೆತ್ತುವ ಸಂದರ್ಭ ಇಬ್ಬರೂ ಒಬ್ಬರಿಗೊಬ್ಬರು ಕೈ ಕೈ ಹಿಡಿದುಕೊಂಡ ಸ್ಥಿತಿಯಲ್ಲಿದ್ದರು ಎಂದು ತಿಳಿದು ಬಂದಿದೆ. ಪರ್ವತಮುಖಿಯ ಕುಸುಮಾಧರ ಅವರ ಮನೆಯ ಮೇಲೆ ಗುಡ್ಡ ಕುಸಿದ ಪರಿಣಾಮ ಅವರ ಮಕ್ಕಳಾದ ಶ್ರುತಿ (11) ಮತ್ತು ಜ್ಞಾನಶ್ರೀ (6) ಮಣ್ಣಿನಡಿ...
ಕಡಬದಕ್ಷಿಣ ಕನ್ನಡಸುದ್ದಿಸುಬ್ರಹ್ಮಣ್ಯ

ಸುಬ್ರಹ್ಮಣ್ಯದಲ್ಲಿ ವರುಣನ ರುದ್ರ ನರ್ತನ ; ಗುಡ್ಡ ಜರಿದು ಮಣ್ಣಿನಡಿ ಸಿಲುಕಿದ ಇಬ್ಬರು ಮಕ್ಕಳು – ಮೃತಪಟ್ಟಿರುವ ಶಂಕೆ..! – ಕಹಳೆ ನ್ಯೂಸ್

ಸುಬ್ರಹ್ಮಣ್ಯ, ಆ 01 : ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನಲ್ಲಿ ಭಾರೀ ಮಳೆಯಾಗ್ತಾ ಇದೆ. ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ಈ ನಡುವೆ ಕುಕ್ಕೆ ಸುಬ್ರಹ್ಮಣ್ಯದ ದೇವಸ್ಥಾನದ ಸಮೀಪದ ಪರ್ವತ ಮುಖಿ ಸಮೀಪ ಹೊಸೊಳಿಕೆ ಕುಸುಮಾಧರ ಅಂಗಡಿ ಅವರ ಮನೆಯ ಬರೆ ಕುಸಿದು ಎರಡು ಮಕ್ಕಳು ಮಣ್ಣಿನಡಿಗೆ ಸಿಲುಕಿದ್ದಾರೆ ಎಂದು ತಿಳಿದು ಬಂದಿದೆ.ಭಾರಿ ಮಳೆಯಿಂದ ಸುಬ್ರಹ್ಮಣ್ಯದ ಕುಮಾರಧಾರ ನದಿ ಜಲಾವೃತವಾಗಿದ್ದು ಇದೀಗ ಸ್ಥಳೀಯರಲ್ಲಿ ಭಾರಿ ಆತಂಕಕ್ಕೆ ಕಾರಣವಾಗಿದೆ. ಸದ್ಯ ಮಣ್ಣಿನಡಿಗೆ ಸಿಲುಕಿಕೊಂಡಿರುವ ಎರಡು...
ದಕ್ಷಿಣ ಕನ್ನಡಸುದ್ದಿಸುಬ್ರಹ್ಮಣ್ಯ

ಕುಕ್ಕೆ ಸುಬ್ರಹ್ಮಣ್ಯದಲ್ಲಿ ವರುಣನ ಆರ್ಭಟ ; ಕುಕ್ಕೆ ಕ್ಷೇತ್ರಕ್ಕೆ ತೆರಳದಂತೆ ಜಿಲ್ಲಾಧಿಕಾರಿ ಮನವಿ – ಕಹಳೆ ನ್ಯೂಸ್

ಕಡಬ, ಆ 01 : ಕುಕ್ಕೆ ಸುಬ್ರಹ್ಮಣ್ಯ ಭಾಗದಲ್ಲಿ ಭಾರೀ ಮಳೆ ಹಿನ್ನೆಲೆಯಲ್ಲಿ ಮಳೆಯಿಂದಾಗಿ ಸುಬ್ರಹ್ಮಣ್ಯದ ದರ್ಪಣ ತೀರ್ಥ ಉಕ್ಕಿ ಹರಿಯುತ್ತಿದೆ. ಈ ಕಾರಣದಿಂದಾಗಿ ಮುಂದಿನ ಎರಡು ದಿನಗಳ ಕಾಲ ಭಕ್ತರು ಸುಬ್ರಹ್ಮಣ್ಯ ಕ್ಷೇತ್ರದತ್ತ ತೆರಳದಂತೆ ಸಹಕರಿಸುವಂತೆ ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಮನವಿ ಮಾಡಿಕೊಂಡಿದ್ದಾರೆ.ಸುಬ್ರಹ್ಮಣ್ಯ ವ್ಯಾಪ್ತಿಯಲ್ಲಿ ಸಣ್ಣಪುಟ್ಟ ಸೇತುವೆಗಳು ಮುಳುಗಡೆಯಾಗಿದೆ. ಕ್ಷೇತ್ರ ಪರಿಸರದಾದ್ಯಂತ ಮನೆ, ಅಂಗಡಿಗಳು ಜಲಾವೃತವಾಗಿವೆ. ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಆಗಮಿಸುವ ಭಕ್ತರು ಪರದಾಡುತ್ತಿದ್ದಾರೆ. ಮುಂದಿನ ಎರಡು ದಿನಗಳ...
ದಕ್ಷಿಣ ಕನ್ನಡಸುದ್ದಿಸುಬ್ರಹ್ಮಣ್ಯ

ಬಿಸಿಲೆಯಲ್ಲಿ ಹೊಂಡಕ್ಕಿಳಿದು ವಾಹನ ಚಾಲಕರ ಬೆವರಿಳಿಸಿದ ಕಲ್ಲಿದ್ದಲು ಸಾಗಾಟ ಲಾರಿ! – ಕಹಳೆ ನ್ಯೂಸ್

ದಕ್ಷಿಣ ಕನ್ನಡ : ಜಿಲ್ಲೆಯ ಸುಬ್ರಮಣ್ಯದ ಕುಲ್ಕುಂದ - ಬಿಸಿಲೆ ಘಾಟ್ ರಸ್ತೆಯ ಮಧ್ಯೆ ಬದಿಯ ಚರಂಡಿಗೆ ಕಲ್ಲಿದ್ದಲು ಹೇರಿಕೊಂಡು ಹೋಗುತಿದ್ದ ಲಾರಿ ಇಳಿದು ಬಾಕಿಯಾಗಿ ಬಿಸಿಲೆ ಘಾಟ್ ರಸ್ತೆಯಲ್ಲಿ ಸಂಚಾರಿಸುವ ವಾಹನಗಳಿಗೆ ಸಮಸ್ಯೆ ಉಂಟಾಗಿರುವ ಘಟನೆ ಸಂಭವಿಸಿದೆ. ಶಿರಾಡಿ ಘಾಟ್ ರಾಷ್ಟೀಯ ಹೆದ್ದಾರಿ ಬಂದ್ ಆಗಿರುವುದರಿಂದ ಕರಾವಳಿ ಭಾಗಕ್ಕೆ, ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಬರುವ ವಾಹನಗಳು ಬಿಸಿಲೆ ಘಾಟ್ ರಸ್ತೆ ಮೂಲಕ ಬರುತ್ತಿದ್ದು. ಬಿಸಿಲೆ ಘಾಟ್ ರಸ್ತೆಯಲ್ಲಿ ವಾಹನಗಳ...
ಸುದ್ದಿಸುಬ್ರಹ್ಮಣ್ಯ

ಪೊಲೀಸ್ ಠಾಣೆಗೆ ಟರ್ಪಾಲು ಹೊದಿಕೆ : ಇದು ಕುಕ್ಕೆ ಸುಬ್ರಹ್ಮಣ್ಯದ ಪೊಲೀಸ್ ಠಾಣೆಯ ಸ್ಧಿತಿ– ಕಹಳೆ ನ್ಯೂಸ್

ಸುಬ್ರಮಣ್ಯ: ಜನರ ಆಗುಹೋಗುಗಳಿಗೆ ಪೊಲೀಸರು ಬೇಕು. ಜೋರು ಮಳೆ ಬಂದರೂ ಇವರು ಬೇಕು, ಜನರ ಬೇಕು ಬೇಡಗಳಲ್ಲಿ ಇವರು ಬೇಕು. ಆದರೆ ದೇಶದ ಪ್ರಾಮುಖ್ಯ ಧಾರ್ಮಿಕ ಸ್ಥಳವಾದ ಕುಕ್ಕೆ ಸುಬ್ರಹ್ಮಣ್ಯದ ಪೊಲೀಸ್‌ ಠಾಣೆಯ ಮಾಡಿಗೆ ಮಾತ್ರ ಟರ್ಪಾಲೇ ಬೇಕು. ಯಾಕೆಂದರೆ ಠಾಣೆಯ ಮಾಡಿನ ರಿಪೇರಿಗೆ ಹಣವಿಲ್ಲದೆ ನೀರು ಸೋರುವಿಕೆ ತಡೆಯಲು ಟರ್ಪಾಲು ಹೊದಿಸಲಾಗಿದೆ. ಸುಬ್ರಹ್ಮಣ್ಯ ಠಾಣೆಯ ಮಾಡು ಬಹಳವಾಗಿ ಶಿಥಿಲವಾಗಿ ಮಾಡು 3 - 4 ವರ್ಷ ಆಯ್ತು. ಒಳ...
ಕ್ರೈಮ್ದಕ್ಷಿಣ ಕನ್ನಡರಾಜ್ಯಸುದ್ದಿಸುಬ್ರಹ್ಮಣ್ಯ

ಕಡಬ ಕಲ್ಲಾಜೆಯಲ್ಲಿ ತರಗತಿ ಮುಗಿಸಿ ಮನೆಗೆ ತೆರಳುತ್ತಿದ್ದ ಹಿಂದೂ ಯುವತಿಗೆ ಲೈಂಗಿಕ ಕಿರುಕುಳ ; ಆರೋಪಿ ಶಕೀರ್ ಪೊಲೀಸ್ ವಶಕ್ಕೆ – ಕಹಳೆ ನ್ಯೂಸ್

ಕಡಬ, ಮಾ 29 : ಐತ್ತೂರು ಗ್ರಾಮದ ಕಲ್ಲಾಜೆಯಲ್ಲಿ ಯುವತಿಯೋರ್ವಳಿಗೆ ಅನ್ಯ ಮತೀಯ ಯುವಕ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಶಕೀರ್ ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಶಕೀರ್ ಕಳೆದ ಎರಡು ದಿನಗಳಿಂದ ತರಗತಿ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ಸ್ಕೂಟಿಯಲ್ಲಿ ಬಂದು ಅಡ್ಡ ನಿಂತು ಲೈಂಗಿಕ ಕಿರುಕುಳ ನೀಡಿದ್ದಾನೆ. ಈ ವಿಷಯವನ್ನು ಮನೆಯವರಿಗೂ ತಿಳಿಸಿದ್ದೇನೆ. ಮಾ.28ರಂದು ಕಲ್ಲಾಜೆ ರಸ್ತೆಯಲ್ಲಿ ಹೋಗುತ್ತಿದ್ದ ವೇಳೆ...
1 6 7 8 9 10 14
Page 8 of 14