Saturday, November 23, 2024

ಸುಳ್ಯ

ಉಡುಪಿರಾಜಕೀಯಸುದ್ದಿಸುಬ್ರಹ್ಮಣ್ಯಸುಳ್ಯ

ಕಡಬ ಪೇಟೆ ಹಾಗೂ ಗ್ರಾಮ ಗ್ರಾಮಗಳಿಗೆ ತೆರಳಿ ಸುಳ್ಯ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ ಮತಯಾಚನೆ –ಕಹಳೆ ನ್ಯೂಸ್

ಸುಳ್ಯ: ಸುಳ್ಯ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ ಅವರು ಇಂದು ಗ್ರಾಮದ ಮನೆಮನೆಗೆ ತೆರಳಿ ಮತಪ್ರಚಾರ ನಡೆಸಿದ್ದಾರೆ. ಕಡಬ ಪೇಟೆ ಮತ್ತು ಬೆದ್ರಾಜೆ, ಅಂಗಡಿಮನೆ, ಮರ್ದಾಳ, ದಂಡುಕುರಿ, ಹಸಂತಡ್ಕ, ಕಲ್ಪುರೆ, ಮಡ್ಯಡ್ಕ, ಕೊಡಂಕಿರಿ, ಕೊಡಿಂಬಾಳ, ದೊಡ್ಡಕೊಪ್ಪ, ಮೂರಾಜೆ, ಪರಪ್ಪುಕೊರಿಯರ್, ವಿವಿಧ ಭಾಗಗಳಲ್ಲಿ ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ ಮತ್ತು ಮುಖಂಡರು ವಿವಿಧ ಕಡೆಗಳಲ್ಲಿ ಸಭೆ ನಡೆಸಿ ಚುನಾವಣಾ ಪ್ರಚಾರ ಕೈಗೊಂಡಿದ್ದಾರೆ. ಸ0ದರ್ಭದಲ್ಲಿ ಮಂಡಲ ಪ್ರಮುಖರಾದ ಹರೀಶ್ ಕಂಜಿಪಿಲಿ,...
ಆರೋಗ್ಯದಕ್ಷಿಣ ಕನ್ನಡಸುದ್ದಿಸುಳ್ಯ

ಅನಾರೋಗ್ಯದ ಹಿನ್ನೆಲೆಯಲ್ಲಿ ಸಚಿವ ಎಸ್‌.ಅಂಗಾರ ಆಸ್ಪತ್ರೆಗೆ ದಾಖಲು ; ಶಸ್ತ್ರಚಿಕಿತ್ಸೆ ಯಶಸ್ವಿ – ಕಹಳೆ ನ್ಯೂಸ್

ಸುಳ್ಯ: ಅನಾರೋಗ್ಯದ ಹಿನ್ನೆಲೆಯಲ್ಲಿ ಸುಳ್ಯ ಶಾಸಕ ಹಾಗೂ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್‌.ಅಂಗಾರ ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಜಠರದ ಅಲ್ಸರ್‌ ಕಾಯಿಲೆಯಿಂದ ಬಳಲುತ್ತಿದ್ದ ಅವರನ್ನು ಮಂಗಳವಾರ ಆಸ್ಪತ್ರೆಗೆ ದಾಖಲಿಸಿದ್ದು, ಬುಧವಾರ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಅವರು ಆರೋಗ್ಯದಿಂದಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ....
ದಕ್ಷಿಣ ಕನ್ನಡಶಿಕ್ಷಣಸುದ್ದಿಸುಳ್ಯ

ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡ ವಂಶಸ್ಥೆ ಮಂಜುಶ್ರೀ ಕೆದಂಬಾಡಿ ಪಿಯು ಫಲಿತಾಂಶದಲ್ಲಿ ಜಿಲ್ಲೆಗೆ ಪ್ರಥಮ – ಕಹಳೆ ನ್ಯೂಸ್

ಸುಳ್ಯ, ಏ 21: 2022–23ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಕಲಾ ವಿಭಾಗದಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡ ಅವರ ವಂಶಸ್ಥರಾದ ಮಂಜುಶ್ರೀ ಕೆದಂಬಾಡಿ ಅವರು ಪಿಯು ಪರೀಕ್ಷೆಯಲ್ಲಿ 591 ಅಂಕಗಳನ್ನು ಪಡೆದು ಜಿಲ್ಲೆಗೆ ಪ್ರಥಮ ಸ್ಥಾನಿಯಾಗಿದ್ದಾರೆ.ಮಂಜುಶ್ರೀ ಕೆದಂಬಾಡಿ ಸುಳ್ಯದ ಉಬೇರಡ್ಕದ ತೀರ್ಥರಾಮ ಕೆದಂಬಾಡಿ ಮತ್ತು ಸಂಧ್ಯಾ ಕೆದಂಬಾಡಿ ದಂಪತಿಯ ಪುತ್ರಿ. ಕೆದಂಬಾಡಿ ರಾಮಯ್ಯಗೌಡರ ಐದನೇ ತಲೆಮಾರಿನ ಮಂಜುಶ್ರೀ ಆಗಿದ್ದು, ರಾಮಯ್ಯಗೌಡರು ಬ್ರಿಟಿಷರ ವಿರುದ್ಧ ನಾನಾ...
ಸುಳ್ಯ

ಪಂಜ ಸಮೀಪ ಟಿಂಬರ್ ಲಾರಿ ಹಾಗೂ ಆಕ್ಟಿವ್ ನಡುವೆ ಭೀಕರ ರಸ್ತೆ ಅಪಘಾತ – ಕಹಳೆ ನ್ಯೂಸ್

ಸುಳ್ಯ ತಾಲೂಕಿನ ಪಂಜ ಸಮೀಪದ ಕೃಷ್ಣನಗರ ಎಂಬಲ್ಲಿ ಟಿಂಬರ್ ಲಾರಿ ಹಾಗೂ ಆಕ್ಟಿವ್ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದ ಘಟನೆ ನಡೆದಿದೆ.ತಕ್ಷಣವೇ ಆಕ್ಟೀವಾ ಸವಾರನನ್ನ್ನು ಆಂಬುಲೆನ್ಸ್ ಮೂಲಕ ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಸವಾರನು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು ಹೆಚ್ಚಿನ ಮಾಹಿತಿ ತಿಳಿಯಬೇಕಾಗಿದೆ....
ದಕ್ಷಿಣ ಕನ್ನಡಪುತ್ತೂರುರಾಜಕೀಯರಾಜ್ಯಸುದ್ದಿಸುಳ್ಯ

ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಹಾಲಿ ಶಾಸಕರುಗಳಿಗೆ ಕೈ ತಪ್ಪಲಿದೆ ಬಿಜೆಪಿ ಟಿಕೆಟ್..! ಪುತ್ತೂರು, ಸುಳ್ಯದಲ್ಲಿ ಹೊಸಮುಖಕ್ಕೆ ಅವಕಾಶ ನೀಡಲು ಬಿಜೆಪಿ ಮಾಸ್ಟರ್ ಪ್ಲಾನ್ ; ವಿಭಾಗ, ಪ್ರಾಂತದ ಆರ್.ಎಸ್.ಎಸ್. ಪ್ರಮುಖರ ಹೈ ವೋಲ್ಟೇಜ್ ಬೈಠಕ್ – ಕಹಳೆ ನ್ಯೂಸ್

ದಕ್ಷಿಣ ಕನ್ನಡ : ರಾಜ್ಯದಲ್ಲಿ ಚುನಾವಣಾ ಕಣ ರಂಗೇರುತ್ತಿದ್ದು, ಗುಜರಾತ್ ಮಾದರಿಯಲ್ಲೇ ಬುಹುತೇಕ ಹಾಲಿ ಶಾಸಕರುಗಳಿಗೆ ಬಿಜೆಪಿ ಟಿಕೆಟ್ ಕೈ ತಪ್ಪಲಿದೆ ಎಂಬ ಮಾಹಿತಿ ಬಿಜೆಪಿ ಆಂತರಿಕ ಮೂಲಗಳಿಂದ ಹೊರಬಿದಿದೆ. ಅದರಲ್ಲೂ ಕೆಸರಿ ಪಡೆಗಳ ಭದ್ರಕೋಟೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಳ್ಯ ಮತ್ತು ಪುತ್ತೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಬದಲಾವಣೆ ಕುರಿತು ವಿಶೇಷ ಸಭೆಯೇ ನಡೆದಿದೆ. ಮಂಗಳೂರು ವಿಭಾಗ ಹಾಗೂ ದಕ್ಷಿಣ ಪ್ರಾಂತದ ಆರ್.ಎಸ್.ಎಸ್. ಪ್ರಮುಖರ ಉಪಸ್ಥಿತಿಯಲ್ಲಿ ಬೈಠಕ್ ನಡೆದಿದ್ದು,...
ಕೃಷಿದಕ್ಷಿಣ ಕನ್ನಡರಾಜಕೀಯರಾಜ್ಯಸುದ್ದಿಸುಳ್ಯ

ಮೀನು ಕೃಷಿಕರಿಂದ ಉತ್ಪಾದನೆಯಾಗುವ ಎಲ್ಲ ರೀತಿಯ ಮೀನುಗಳನ್ನು ನಿಗಮದಿಂದಲೇ ಖರೀದಿಗೆ ಯೋಜನೆ : ಸಚಿವ ಎಸ್‌. ಅಂಗಾರ – ಕಹಳೆ ನ್ಯೂಸ್

ಸುಳ್ಯ: ಮೀನು ಕೃಷಿಕರಿಂದ ಉತ್ಪಾದನೆಯಾಗುವ ಎಲ್ಲ ರೀತಿಯ ಮೀನುಗಳನ್ನು ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ವತಿಯಿಂದಲೇ ಖರೀದಿಸಲು ಯೋಜನೆ ರೂಪಿಸಲಾಗುವುದು. ಈ ಬಗ್ಗೆ ಮುಖ್ಯಮಂತ್ರಿಗಳು ಸಮ್ಮತಿ ಸೂಚಿಸಿದ್ದಾರೆ ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್‌. ಅಂಗಾರ ಹೇಳಿದರು. ಅವರು ರವಿವಾರ ಸುಳ್ಯದ ಯುವಜನ ಸಂಯುಕ್ತ ಮಂಡಳಿ ಮೈದಾನದಲ್ಲಿ ನಡೆದ ಕೇಂದ್ರ ಸರಕಾರದ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಸ್ವಾವಲಂಬಿ ಬದುಕಿಗಾಗಿ ಸ್ವೋ ಉದ್ಯೋಗ – ಮನೆ...
ದಕ್ಷಿಣ ಕನ್ನಡರಾಜಕೀಯರಾಜ್ಯಸುದ್ದಿಸುಳ್ಯ

Special Report | ಸತತ 6 ಬಾರಿ ವಿಧಾನಸಭೆ ಪ್ರವೇಶಿಸಿದ ದಕ್ಷಿಣ ಕನ್ನಡ ಜಿಲ್ಲೆಯ ಏಕೈಕ ಬಿಜೆಪಿ ಶಾಸಕ ಸುಳ್ಯದ ಎಸ್ ಅಂಗಾರ – ಕಹಳೆ ನ್ಯೂಸ್

ಮಂಗಳೂರು: ಸೋಲಿಲ್ಲದ ಸರದಾರ, ಸುಳ್ಯದ ಬಂಗಾರ ಎಂದೇ ಪ್ರಸಿದ್ಧಿ ಪಡೆದಿರುವವರು ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಸುಳ್ಯ (Sulya) ವಿಧಾನಸಭಾ ಕ್ಷೇತ್ರದ ಶಾಸಕ ಎಸ್ ಅಂಗಾರ. ಸತತ 6 ಬಾರಿ ವಿಧಾನಸಭೆ ಪ್ರವೇಶಿಸಿದ ದ.ಕ. ಜಿಲ್ಲೆಯ ಏಕೈಕ ಬಿಜೆಪಿ ಶಾಸಕ (BJP MLA) ಎಂಬ ಹೆಗ್ಗಳಿಕೆ ಪಡೆದುಕೊಂಡಿರುವವರು ಕೂಡ ಇವರೇ. ಈ ಸಲ ಹಿರಿತನದ ನೆಲೆಯಲ್ಲಿ, ಪಕ್ಷ ನಿಷ್ಠ ಮತ್ತು ಆರ್‌ಎಸ್‌ಎಸ್ ಹಿನ್ನೆಲೆ ಇರುವ ನಿಟ್ಟಿನಲ್ಲಿ ಸಚಿವ ಸ್ಥಾನ ನೀಡಲಾಗಿದೆ....
ಕಾಸರಗೋಡುಸುದ್ದಿಸುಳ್ಯ

ಫೆ.13ರಿಂದ ಫೆ.17ರದವರೆಗೆ ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಧಾನ ಶ್ರೀ ಎಡನೀರು ಮಠ ಶ್ರೀ ವಿಷ್ಣುಮಂಗಲ ದೇವಾಲಯದ ವಾರ್ಷಿಕೋತ್ಸವ – ಕಹಳೆ ನ್ಯೂಸ್

ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಧಾನ ಶ್ರೀ ಎಡನೀರು ಮಠದಲ್ಲಿ ಶ್ರೀ ವಿಷ್ಣುಮಂಗಲ ದೇವಾಲಯದ ವಾರ್ಷಿಕೋತ್ಸವ 13-2-2023ನೇ ಸೋಮವಾರದಿಂದ 17-2-2023ನೇ ಶುಕ್ರವಾರದವರೆಗೆ ನಡೆಯಲಿದೆ.ಶ್ರೀಮದೆಡನೀರು ಮಠಾದೀಶರಾದ ಶ್ರೀ ಶ್ರೀ ಸಚ್ಚಿದಾನಂದ ಶ್ರೀಪಾದಂಗಳವರ ನೇತೃತ್ವ ಮತ್ತು ಅನುಗ್ರಹದೊಂದಿಗೆ ಹಾಗೂ ಶ್ರೀ ಕ್ಷೇತ್ರದ ತಂತ್ರಿವರ್ಯರಾದ ಬ್ರಹ್ಮಶ್ರೀ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಯವರ ತಾಂತ್ರಿಕತ್ವ ಮತ್ತು ಮಾರ್ಗದರ್ಶನದಲ್ಲಿ 5 ದಿನಗಳ ಕಾಲ ಶ್ರೀಕ್ಷೇತ್ರದಲ್ಲಿ ವಾರ್ಷಿಕೋತ್ಸವ ನಡೆಯಲಿದೆ. ಫೆಬ್ರವರಿ 13ರಂದು ಬೆಳಗ್ಗೆ ಧ್ವಜಾರೋಹಣ, ಶ್ರೀಭೂತಬಲಿ, ಹಸಿರುವಾಣಿ ಮೆರವಣಿಗೆ, ಉಗ್ರಾಣ ಮೂಹೂರ್ತ,...
1 8 9 10 11 12 21
Page 10 of 21