ವಿಧಾನಸಭಾ ಚುನಾವಣೆ : ಸುಳ್ಯ ಕ್ಷೇತ್ರದಿಂದ ಕೈ ನಾಯಕ ಕೆ. ಶರಚ್ಚಂದ್ರವರಿಗೆ ಟಿಕೆಟ್ ಪಕ್ಕಾ..? ಬಿಜೆಪಿಯ ಭದ್ರಕೋಟೆ ಸುಳ್ಯದಲ್ಲಿ ಕೈ ನಾಯಕರಿಗೆ ಸಿಗುತ್ತಾ ಗೆಲುವು..? – ಕಹಳೆ ನ್ಯೂಸ್
ವಿಧಾನಸಭಾ ಚುನಾವಣೆಗೆ ಆಯಾ ಕ್ಷೇತ್ರಗಳಲ್ಲಿ ಸದ್ದಿಲ್ಲದೆ ಸಿದ್ದತೆ ನಡೆಯುತ್ತಿದೆ. ಪೈಪೋಟಿಯಲ್ಲಿ ಮತದಾರರು ಮಾತ್ರ ಮೌನವಾಗಿ ಎಲ್ಲವನ್ನೂ ಅವಲೋಕಿಸುತ್ತಿದ್ದಾರೆ. ಅದರಲ್ಲೂ ವಿಶೇಷವಾಗಿ ಕೇಸರಿ ಕೋಟೆ ಎಂದೇ ಖ್ಯಾತಿ ಗಳಿಸಿರುವ ದಕ್ಷಿಣ ಕನ್ನಡದತ್ತ ಜನ ನಾಯಕರು ಹಾಗೂ ಇಡೀ ರಾಜ್ಯದ ಚಿತ್ತ ಹೊರಳಿದೆ.ಚುನಾವಣೆ ಸಮೀಪಿಸುವ ಸಂದರ್ಭದಲ್ಲಿ ಜನರ ಈ ಕುತೂಹಲಕ್ಕೆ ಕಾರಣವಾಗಿದ್ದು ಇಲ್ಲಿ ನಡೆಯುವ ರಾಜಕೀಯ ಬೆಳವಣಿಗೆಗಳು ಹಾಗೂ ಗಲಭೆಗಳೇ ಎಂದರೆ ತಪ್ಪಾಗದು. ಹೀಗಿರುವಾಗ ಒಟ್ಟು ಎಂಟು ವಿಧಾನಸಭಾ ಸ್ಥಾನಗಳಿರುವ ಈ ಜಿಲ್ಲೆಯ...