ಹಲವೆಡೆ ಲಘು ಭೂಕಂಪನ: ಭಯಭೀತರಾದ ಸುಳ್ಯದ ಜನತೆ – ಕಹಳೆ ನ್ಯೂಸ್
ಸುಳ್ಯ : ಸುಳ್ಯ ತಾಲೂಕಿನ ಹಲವೆಡೆ ಇಂದು ಬೆಳಗ್ಗಿನ ವೇಳೆ ಲಘು ಭೂಕಂಪನದ ಅನುಭವವಾಗಿದ್ದು, ಸುಮಾರು 45 ಸೆಕೆಂಡ್‍ಗಳ ಕಾಲ ಭೂಮಿ ಕಂಪಿಸಿದ ಅನುಭವವಾಗಿದೆ. ಸುಳ್ಯ, ಮರ್ಕಂಜ, ಕಲ್ಲುಗುಂಡಿ, ಸಂಪಾಜೆ, ಪೆರಾಜೆ, ಅರಂತೋಡು, ಐವರ್ನಾಡು, ತೊಡಿಕಾನ, ಗೂನಡ್ಕ ಸೇರಿದಂತೆ ತಾಲೂಕಿನ ವಿವಿಧೆಡೆ ಬೆಳಗ್ಗೆ ಸುಮಾರು 9.10ರ ಸಮಯದಲ್ಲಿ ಭೂಮಿ ಕಂಪಿಸಿದ ಅನುಭವವಾಗಿದ್ದು, ಜನ ಆತಂಕದಿಂದ ಮನೆಯಿಂದ ಹೊರಗೋಡಿ ಬಂದಿದ್ದಾರೆ. ಮನೆಯಲ್ಲಿದ್ದ ಪಾತ್ರೆ, ಚಯರ್ ಮುಂತಾದವುಗಳು ಅಲುಗಾಡಿದ್ದು, , ಕಪಾಟಿನಲ್ಲಿಟ್ಟಿದ್ದ ಪಾತ್ರೆ...