Saturday, January 18, 2025

ಸುಳ್ಯ

ದಕ್ಷಿಣ ಕನ್ನಡಸುದ್ದಿಸುಳ್ಯ

ನೆಹರು ಮೆಮೋರಿಯಲ್ ಕಾಲೇಜು ಸುಳ್ಯ ಪ್ರತಿಭಾ ದಿನಾಚರಣೆ ಎನ್.ಎಮ್.ಸಿ ಕಲೋತ್ಸವ 2024-ಕಹಳೆ ನ್ಯೂಸ್

ಸುಳ್ಯ:ನೆಹರು ಮೆಮೋರಿಯಲ್ ಕಾಲೇಜು ಪ್ರತಿಭಾ ದಿನಾಚರಣೆಯ ಸಾಂಸ್ಕೃತಿಕ ಸ್ಪರ್ಧೆ ಅದ್ದೂರಿಯಾಗಿ ಮತ್ತು ಸಾಂಪ್ರದಾಯಿಕವಾಗಿ ಕೆ.ವಿ.ಜಿ ಷಷ್ಟ್ಯಬ್ದ ರಂಗಮAದಿರದಲ್ಲಿ ನವೆಂಬರ್ 14ನೇ ಗುರುವಾರದಂದು ನೆರವೇರಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಕಾಲೇಜಿನ ಆಡಳಿತಾಧಿಕಾರಿ ಚಂದ್ರಶೇಖರ ಪೇರಾಲು ತಾಸೆ ಬಡಿಯುವುದರ ಮೂಲಕ ಸಾಂಪ್ರದಾಯಿಕವಾಗಿ ಉದ್ಘಾಟಿಸಿದರು. ಈ ಸಂದರ್ಭ ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಡಾ ರುದ್ರಕುಮಾರ್ ಎಂ.ಎA, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ರತ್ನಾವತಿ ಡಿ, ಐ.ಕ್ಯೂ.ಎ.ಸಿ ಸಂಯೋಜಕರಾದ ಡಾ. ಮಮತಾ ಕೆ, ಸಾ0ಸ್ಕೃತಿಕ ಸಂಘದ ಸಂಚಾಲಕ ವಿಷ್ಣುಪ್ರಶಾಂತ್ ಮತ್ತು...
ದಕ್ಷಿಣ ಕನ್ನಡಸುದ್ದಿಸುಳ್ಯ

ಅರಂತೋಡಿನ ಯವಕನೊಬ್ಬ ನೇಣಿಗೆ ಶರಣು-ಕಹಳೆ ನ್ಯೂಸ್

ಅರಂತೋಡು: ಯವಕನೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ರಾತ್ರಿ ನಡೆದಿರುವ ಬಗ್ಗೆ ವರದಿಯಾಗಿದೆ ಅರಂತೋಡು ಗ್ರಾಮದ ಬಿಳಿಯಾರು ನಿವಾಸಿ ಸೀತಾರಾಮ ಎಂಬವರ ಪುತ್ರ ಪುನೀತ್ (ಗಣೇಶ್) (25) ಆತ್ಮಹತ್ಯೆ ಮಾಡಿಕೊಂಡ ಯುವಕ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಮೃತದೇಹವನ್ನು ಸುಳ್ಯ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಮೃತರು ತಂದೆ, ತಾಯಿ ಹಾಗೂ ಸಹೋದರ ದಿನೇಶ ರನ್ನು ಅಗಲಿದ್ದಾರೆ. ಸುಳ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ....
ದಕ್ಷಿಣ ಕನ್ನಡಸುದ್ದಿಸುಳ್ಯ

ಸುಳ್ಯ: ಎನ್ನೆಂಸಿ, ವಿಜ್ಞಾನ ಸಂಘದ ವತಿಯಿಂದ ವಿಜ್ಞಾನ ಮಾದರಿ ರಚನೆ ಸ್ಪರ್ಧೆ-ಕಹಳೆ ನ್ಯೂಸ್

ಸುಳ್ಯ: ನೆಹರೂ ಮೆಮೋರಿಯಲ್ ಕಾಲೇಜಿನ ವಿಜ್ಞಾನ ಸಂಘದ ವತಿಯಿಂದ ನವೆಂಬರ್ 09 ಶನಿವಾರದಂದು ವಿಜ್ಞಾನ ಮಾದರಿ ರಚನೆ ಸ್ಪರ್ಧೆ ಆಯೋಜಿಸಲಾಗಿತ್ತು. ಕಾಲೇಜಿನ ವಿಜ್ಞಾನ ವಿಭಾಗ ಸಂಯೋಜಕರು ಮತ್ತು ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ರಾದ ಸತ್ಯಪ್ರಕಾಶ್ ಡಿ ಹಾಗೂ ವಿಜ್ಞಾನ ಸಂಘದ ಸಂಚಾಲಕಿ ಅಶ್ವಿನಿ ಕೆ ಸಿ ಮುಂದಾಳತ್ವದಲ್ಲಿ ಈ ಸ್ಪರ್ಧೆಯನ್ನು ಆಯೋಜಿಸಲಾಯಿತು. ಕಾಲೇಜಿನ ವಿಜ್ಞಾನ ವಿಭಾಗಗಳ ವಿವಿಧ ಪ್ರಯೋಗಾಲಯಗಳಲ್ಲಿ ಹಮ್ಮಿಕೊಂಡ ಈ ಸ್ಪರ್ಧಾ ಕಾರ್ಯಕ್ರಮದ ತೀರ್ಪುಗಾರರಾಗಿ ನೆಹರೂ ಮೆಮೋರಿಯಲ್ ಪದವಿಪೂರ್ವ...
ದಕ್ಷಿಣ ಕನ್ನಡಸುದ್ದಿಸುಳ್ಯ

ಅರಂತೋಡು: ಕಾಡಾನೆಗಳಿಂದ ಕೃಷಿ ಹಾನಿ-ಕಹಳೆ ನ್ಯೂಸ್

ಅರಂತೋಡು: ತೊಡಿಕಾನ ಸಮೀಪದ ಬಂಗಾರ ಕೋಡಿಯಲ್ಲಿ ಗುರುವಾರ ರಾತ್ರಿ ತೋಟವೊಂದಕ್ಕೆ ಕಾಡಾನೆಗಳು ದಾಳಿ ನಡೆಸಿ, ಬೆಳೆಗಳನ್ನು ನಾಶಪಡಿಸಿದ ಘಟನೆ ವರದಿಯಾಗಿದೆ. ವಿದ್ಯಾ ಅವರ ತೋಟಕ್ಕೆ ದಾಳಿ ನಡೆಸಿದ ಕಾಡಾನೆಗಳು 10 ಅಡಿಕೆ ಮರ, ಎರಡು ಬಾಳೆ, ಒಂದು ದೀವಿಹಲಸು ಮರವನ್ನು ಮುರಿದು ಹಾಕಿವೆ. ಅಲ್ಲದೆ ಒಂದು ತೆಂಗಿನ ಮರಕ್ಕೆ ಹಾನಿ ಮಾಡಿವೆ ಎಂದು ತಿಳಿದು ಬಂದಿದೆ. ಅರಣ್ಯ ಇಲಾಖೆಯವರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಪರಿಸರದಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು, ರೈತರು...
ದಕ್ಷಿಣ ಕನ್ನಡಸುದ್ದಿಸುಳ್ಯ

ಸುಳ್ಯ: ರಬ್ಬರ್ ಬೆಲೆ ಕುಸಿತ-ಕಹಳೆ ನ್ಯೂಸ್

ಸುಳ್ಯ: ಮಳೆಗಾಲ ಆರಂಭದಲ್ಲಿ ಏರಿಕೆಯಾಗಿದ್ದ ರಬ್ಬರ್ ಧಾರಣೆ ಈಗ ಕುಸಿತದ ಹಾದಿಯಲ್ಲಿ ಸಾಗುತ್ತಿದ್ದು, ಬೆಳೆಗಾರರು ಆತಂಕದಲ್ಲಿದ್ದಾರೆ. ಹಲವು ವರ್ಷಗಳ ಹಿಂದೆ ರಬ್ಬರ್‌ಗೆ ಉತ್ತಮ ಧಾರಣೆ ಸಿಕ್ಕಿದ್ದ ಹಿನ್ನೆಲೆಯಲ್ಲಿ ಕರಾವಳಿ ಭಾಗದಲ್ಲಿ ರಬ್ಬರ್ ಬೆಳೆ ಗಣನೀಯವಾಗಿ ಹೆಚ್ಚಳಗೊಂಡಿತ್ತು. ಈ ವರ್ಷದ ಜುಲೈ ತಿಂಗಳ ಮೊದಲು ಕೆಜಿ ರಬ್ಬರ್‌ಗೆ(ಗ್ರೇಡ್) 200ಕ್ಕಿಂತ ಕಡಿಮೆ ಧಾರಣೆ ಇತ್ತು. ಬಳಿಕದಲ್ಲಿ ನಿಧಾನ ಗತಿಯಲ್ಲಿ ಹೆಚ್ಚಳ ಕಂಡು ಆಗಸ್ಟ್ ವೇಳೆಗೆ ಗ್ರೇಡ್ ರಬ್ಬರ್ ಕೆಜಿಗೆ 244-255 ರೂ. ವರೆಗೂ...
ಕ್ರೈಮ್ದಕ್ಷಿಣ ಕನ್ನಡಪುತ್ತೂರುಸುದ್ದಿಸುಳ್ಯ

ಉಪವಲಯ ಅರಣ್ಯಾಧಿಕಾರಿ ಸಂಜೀವ ಪೂಜಾರಿ ಕಾಣಿಯೂರು ಆಡಿಯೋ ವೈರಲ್..!! ಹಿಂದೂ ಸಂಘಟನೆಗಳು ರೆಬೆಲ್..!! ಮಧ್ಯಾಹ್ನ ಅಂದರ್..!! ಸಂಜೆ ಬಾಹರ್..!! – ಕಹಳೆ ನ್ಯೂಸ್

ಪುತ್ತೂರು: ಬಿಲ್ಲವ ಹೆಣ್ಣು ಮಕ್ಕಳನ್ನು ಹಾಗೂ ಭಜನೆ ಸಂಕೀರ್ತನೆ ಮಾಡುವವರನ್ನು ನಿಂದಿಸಿರುವ ಆರೋಪದಡಿ ಇಂದು ಮಧ್ಯಾಹ್ನ ಬಂದಿತರಾಗಿದ್ದ ಪುತ್ತೂರು ಉಪ ವಲಯ ಅರಣ್ಯಾಧಿಕಾರಿ ಸಂಜೀವ ಪೂಜಾರಿಯವರಿಗೆ ಇಂದು ಸಂಜೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿರುವುದಾಗಿ ತಿಳಿದು ಬಂದಿದೆ. ಮೂರು ದಿನಗಳ ಹಿಂದೆ ಸಂಜೀವ ಪೂಜಾರಿಯವರು ಕೇರಳ ರಾಜ್ಯದ ಮಂಜೇಶ್ವರದ ವ್ಯಕ್ತಿಯೊಬ್ಬರ ಜತೆ ಆಡಿದರೆನ್ನಲಾದ ಫೋನ್ ಸಂಭಾಷಣೆಯ ಆಡಿಯೋ ವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು ಈ ಆಡಿಯೋದಲ್ಲಿ ಸಂಜೀವ ಪೂಜಾರಿಯವರು...
ಸುದ್ದಿಸುಳ್ಯ

ಬಿ.ಸಿ.ಎ ವಿಭಾಗದ ಫಾರಂ “ಟೆಕ್ ಕೆಡೆಟ್” ನ ವಾರ್ಷಿಕ ಕಾರ್ಯ ಚಟುವಟಿಕೆಗಳಿಗೆ ಚಾಲನೆ -ಕಹಳೆ ನ್ಯೂಸ್

ಸುಳ್ಯ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಬಿ.ಸಿ.ಎ ಮುನ್ನಡೆಸುತ್ತಿರುವ 'ಟೆಕ್ ಕೆಡೆಟ್' ಘಟಕದ ವಾರ್ಷಿಕ ಕಾರ್ಯ ಚಟುವಟಿಕೆಗಳಿಗೆ ಅಕ್ಟೋಬರ್ 3ರ ಗುರುವಾರದಂದು ಕಾಲೇಜು ಸಭಾಂಗಣದಲ್ಲಿ ಚಾಲನೆ ನೀಡಲಾಯಿತು. ಮುಖ್ಯ ಅತಿಥಿಗಳಾಗಿದ್ದ ಕಾಲೇಜು ಆಡಳಿತಾಧಿಕಾರಿ ಚಂದ್ರಶೇಖರ್ ಪೇರಾಲು ವಿಭಿನ್ನವಾಗಿ ವಿಡಿಯೋ ಕ್ಲಿಕ್ ಮಾಡೋ ಮೂಲಕ 'ಟೆಕ್ ಕೆಡೆಟ್' ಘಟಕದ ಲೋಗೋ ಲಾಂಚ್ ಮಾಡುವುದರ ಮೂಲಕ ಕೋರ್ಸಿನ ವಾರ್ಷಿಕ ಕಾರ್ಯಚಟುವಿಕೆಗಳಿಗೆ ಚಾಲನೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ IQAC ಸಂಯೋಜಕಿ ಆದ ಡಾ. ಮಮತ...
ದಕ್ಷಿಣ ಕನ್ನಡಸುದ್ದಿಸುಳ್ಯ

ನೆಹರೂ ಮೆಮೋರಿಯಲ್ ಕಾಲೇಜಿನ ನೂತನ ಎನ್.ಎಸ್.ಎಸ್ ಅಧಿಕಾರಿಯಾಗಿ ಹರಿಪ್ರಸಾದ್ ಅತ್ಯಾಡಿ ಅಧಿಕಾರಿ ಸ್ವೀಕಾರ-ಕಹಳೆ ನ್ಯೂಸ್

ನೆಹರೂ ಮೆಮೋರಿಯಲ್ ಕಾಲೇಜಿನ 2024-2ನೇ ಶೈಕ್ಷಣಿಕ ವರ್ಷದಿಂದ ಎನ್.ಎಸ್.ಎಸ್.ನ ನೂತನ ಕಾರ್ಯಕ್ರಮ ಅಧಿಕಾರಿಯಾಗಿ ಹರಿಪ್ರಸಾದ್ ಅತ್ಯಾಡಿ ಅಧಿಕಾರ ಸ್ವೀಕರಿಸಿದರು. ಕಾಲೇಜಿನ ವ್ಯವಹಾರ ನಿರ್ವಹಣಾ ವಿಭಾಗದ ಉಪನ್ಯಾಸಕರಾದ ಇವರು ಈ ಅಕ್ಟೋಬರ್ ನಿಂದ ಕಾಲೇಜು ಎನ್.ಎಸ್.ಎಸ್ ಘಟಕವನ್ನು ಮುನ್ನಡೆಸಲಿದ್ದಾರೆ. ಕಳೆದ 27 ವರ್ಷ ಕಾರ್ಯಕ್ರಮ ಅಧಿಕಾರಿಯಾಗಿದ್ದ ಸಂಜೀವ ಕುತ್ಪಾಜೆ ನೂತನ ಅಧಿಕಾರಿಗಳಿಗೆ ಶುಭಹಾರೈಸಿದರು. ಈ ಸಂದರ್ಭ ಕಾಲೇಜಿನ ಪ್ರಾಂಶುಪಾಲರಾದ ಡಾ. ರುದ್ರಕುಮಾರ್ ಎಂ.ಎಂ, ಅಡಳಿತ ಅಧಿಕಾರಿ ಚಂದ್ರಶೇಖರ ಪೇರಾಲು, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ...
1 2 3 4 22
Page 2 of 22