ಓಮಿನಿ ಕಾರಿನ ಮೇಲೆ ದಾಳಿ ನಡೆಸಿದ ಕಾಡಾನೆ : ಪ್ರಾಣಾಪಾಯದಿಂದ ಪಾರಾದ ಕಾರು ಚಾಲಕ – ಕಹಳೆ ನ್ಯೂಸ್
ಸುಳ್ಯ: ಕಾಡಾನೆಯೊಂದು ಪೆರಾಜೆ ಗ್ರಾಮದಲ್ಲಿ ಸುತ್ತಾಡಿ ಪಯಸ್ವಿನಿ ನದಿ ದಾಟಿ ಪೂಮಲೆ ಬೆಟ್ಟಕ್ಕೆ ತೆರಳುವ ಸಂದರ್ಭ ರಸ್ತೆ ಬದಿ ನಿಂತಿದ್ದ ಓಮಿನಿ ಕಾರಿಗೆ ಹಾನಿ ಮಾಡಿ ತೆರಳಿರುವ ಘಟನೆ ಕನ್ನಡ ಪೆರಾಜೆ ಸಮೀಪ ನಡೆದಿದೆ. ಪೆರಾಜೆಯ ಉದ್ಯಮಿ ಉನೈಸ್ ಪೆರಾಜೆಯವರ ಕಾರು ಇದಾಗಿದ್ದು, ಕಾರಿನ ಚಾಲಕ ಗೂನಡ್ಕ ಅವಿನಾಶ್ ಕಾರಿನೊಳಗೆ ಕುಳಿತುಕೊಂಡು ಪೇಪರ್ ಓದುತ್ತಿರುವ ಸಂದರ್ಭ ಆನೆ ಬಂದು ಕಾರಿಗೆ ಡಿಕ್ಕಿ ಹೊಡೆದಿದೆ. ಕಾರು ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆನೆ...