ಕಡಬದ ಕೋಡಿಂಬಾಳದ ಆದಿಮೊಗೇರ್ಕಳ ದೈವಸ್ಥಾನದಲ್ಲಿ ಮತ್ತೊಮ್ಮೆ ಕಳ್ಳತನ; ಸಿಸಿಟಿವಿಯಲ್ಲಿ ಕಳ್ಳನ ಚಲನವಲನ ಸೆರೆ –ಕಹಳೆ ನ್ಯೂಸ್
ಕಡಬದ ಕೋಡಿಂಬಾಳದ ಆದಿಮೊಗೇರ್ಕಳ ದೈವಸ್ಥಾನದಲ್ಲಿ ಮತ್ತೊಮ್ಮೆ ಕಳ್ಳತನವಾಗಿದ್ದು, ಕಳ್ಳನ ಚಲನವಲನ ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ ಕಂಡು ಬಂದಿದೆ. ಕೋಡಿಂಬಾಳದ ಆದಿಮೊಗೇರ್ಕಳ ದೈವಸ್ಥಾನದಲ್ಲಿ ಈ ಹಿಂದೆ ನಿರಂತರ ಕಳ್ಳತನ ನಡೆಯುತ್ತಿದ್ದ ಹಿನ್ನಲೆ ದೈವಸ್ಥಾನದಲ್ಲಿ ಸಿಸಿ ಕ್ಯಾಮಾರಾವನ್ನು ಆಡಳಿತ ಮಂಡಳಿ ಆಳವಡಿಸಿತ್ತು. ಇದೀಗ ಮತ್ತೆ ಕಳ್ಳತನ ನಡೆದಿದ್ದು, ಈ ಬಾರಿ ಕಳ್ಳತನ ಸಿಸಿಟಿವಿಯಲ್ಲಿ ಸೆರೆ ಆಗಿದೆ. ಈ ಬಗ್ಗೆ ಕಡಬ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ....