ಕಡಬ:- ವಾಟ್ಸಾಪ್ ನಲ್ಲಿ ಕೋಮು ಭಾವನೆ ಕೆರಳಿಸುವ ಸ್ಟೇಟಸ್ ಹಾಕಿದ ಬೋಲ್ಟ್ ಅಶ್ರಫ್ ವಿರುದ್ಧ ಭಜರಂಗಿಗಳಿಂದ ಕಡಬ ಠಾಣೆಗೆ ದೂರು- ಕಹಳೆ ನ್ಯೂಸ್
ಕಡಬ: ಇಲ್ಲಿನ ಕಳಾರ ನಿವಾಸಿ ಯುವಕನೋರ್ವ ತನ್ನ ಸ್ಟೇಟಸ್ ನಲ್ಲಿ ದನ ಸಾಗಾಟದ ವಿಚಾರದಲ್ಲಿ ಕೋಮುಭಾವನೆ ಕೆರಳಿಸುವ ರೀತಿಯಲ್ಲಿ ಸ್ಟೇಟಸ್ ಹಾಕಿದ್ದು ಇದರಿಂದ ಆಕ್ರೋಶಗೊಂಡಿರುವ ಹಿಂದೂ ಮುಖಂಡರು ಸಮಾಜದಲ್ಲಿ ಶಾಂತಿ ಕದಡುವ ಇಂತಹ ಆರೋಪಿಯ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ದೂರು ನೀಡಿದ್ದಾರೆ. ಈ ಬಗ್ಗೆ ವಿ.ಹಿಂ.ಪ.ವತಿಯಿಂದ ಕಡಬ ಠಾಣೆಗೆ ದೂರು ನೀಡಲಾಗಿದೆ. ಕಡಬ ಕಳಾರ ನಿವಾಸಿ ಇಸ್ಮಾಯಿಲ್ ಎಂಬವರ ಪುತ್ರ ಅಶ್ರಫ್ ಎಂದು ತಿಳಿದು ಬಂದಿದ್ದು...