ಕಾಪು ತಾಲ್ಲೂಕಿನಲ್ಲಿ ಅಚಾನಕ್ ಸುರಿದ ಮಳೆ ; ತೆಂಗಿನಮರಕ್ಕೆ ಸಿಡಿಲು ಬಡಿದು ಮನೆಯ ಮೇಲೆ ಬಿದ್ದು ಮನೆ ಭಾಗಶಃ ಜಖಂ -ಕಹಳೆ ನ್ಯೂಸ್
ಕಾಪು :ನಿನ್ನೆ ಕಾಪು ತಾಲ್ಲೂಕಿನಲ್ಲಿ ಅಚಾನಕ್ ಸುರಿದ ಮಳೆಗೆ ಪಡು ಗ್ರಾಮದ ಸುಕುಮಾರ್ ಕರ್ಕೇರ ರವರ ಮನೆಯ ಪಕ್ಕದಲ್ಲಿದ್ದ ತೆಂಗಿನಮರಕ್ಕೆ ಸಿಡಿಲು ಬಡಿದು ಸುಕುಮಾರ್ ಕರ್ಕೇರರವರ ಮನೆಯ ಮೇಲೆ ಬಿದ್ದು ಮನೆ ಭಾಗಶಃ ಜಖಂಗೊಂಡಿದೆ. ರಾತ್ರಿ ಏಳೂವರೆಯ ಸಮಯದಲ್ಲಿ ಜೋರು ಮಳೆ ಸುರಿದ ಕಾರಣ ಅದೇ ಸಮಯದಲ್ಲಿ ತೆಂಗಿನ ಮರಕ್ಕೆ ಸಿಡಿಲು ಬಡಿದಿದೆ. ಮನೆಯೊಳಗಿದ್ದವರು ಗಾಬರಿಯಾಗಿ ಹೊರಗೆ ಬಂದಿದ್ದಾರೆ, ಮನೆಯ ಹೆಂಚುಗಳು ಪುಡಿಯಾಗಿವೆ. ಯಾರಿಗೂ ಗಾಯವಾಗಿಲ್ಲ ಎಂದು ತಿಳಿದುಬಂದಿದೆ. ಸ್ಥಳಕ್ಕೆ...