Friday, November 22, 2024

ಮಂಗಳೂರು

ಕ್ರೈಮ್ದಕ್ಷಿಣ ಕನ್ನಡಮಂಗಳೂರುಸುದ್ದಿ

ಡಿಜಿಟಲ್‌ ಅರೆಸ್ಟ್‌, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ ; ನಿಸಾರ್‌, ಸಾಹಿಲ್‌ ಸಹಿತ ಮೂವರ ಬಂಧನ – ಕಹಳೆ ನ್ಯೂಸ್

ಮಂಗಳೂರು: ಸಿಬಿಐ ಅಧಿಕಾರಿಗಳೆಂದು ಕರೆ ಮಾಡಿ 68 ಲ.ರೂ. ಸುಲಿಗೆ ಮಾಡಿದ ಹಾಗೂ ಷೇರು ಮಾರುಕಟ್ಟೆಯಲ್ಲಿ ಹೂಡಿಕೆಯ ಹೆಸರಿನಲ್ಲಿ 90 ಲ.ರೂ. ವರ್ಗಾಯಿಸಿ ವಂಚಿಸಿದ ಎರಡು ಸೈಬರ್‌ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಕಾವೂರು ಇನ್‌ಸ್ಪೆಕ್ಟರ್‌ ರಾಘವೇಂದ್ರ ಬೈಂದೂರು ಅವರ ನೇತೃತ್ವದ ಪೊಲೀಸರು ಯಶಸ್ವಿಯಾಗಿದ್ದಾರೆ.   ಕೇರಳ ಎರ್ನಾಕುಲಂ ಆಲುವಾ ತಾಲೂಕಿನ ನಿಸಾರ್‌, ಕೋಝಿಕೋಡ್‌ ತಿರುವನ್ನೂರಿನ ಸಾಹಿಲ್‌ ಮತ್ತು ಕೋಯಿಲಾಂಡಿಯ ಮುಹಮ್ಮದ್‌ ನಶಾತ್‌ ಬಂಧಿತ ಆರೋಪಿಗಳು. ಬಂಧಿತರ ಪೈಕಿ...
ದಕ್ಷಿಣ ಕನ್ನಡಮಂಗಳೂರುಸುದ್ದಿ

ಪ್ರೊ.ಪಿ.ಎಲ್.ಧರ್ಮ ಅವರಿಗೆ ವಿಭಾಗದಿಂದ ಬೀಳ್ಕೊಡುಗೆ-ಕಹಳೆ ನ್ಯೂಸ್

ಮಂಗಳೂರು ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿ ವಿಭಾಗದಿಂದ ನಿವೃತ್ತಿಯಾಗುತ್ತಿರುವ ಮಂಗಳೂರು ವಿವಿಯ ಕುಲಪತಿಯೂ ಆಗಿರುವ ಪ್ರೊ.ಪಿ.ಎಲ್.ಧರ್ಮ ಅವರನ್ನು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರ ವತಿಯಿಂದ ಮಂಗಳಗAಗೋತ್ರಿಯ ಆಡಳಿತ ಭವನದ ಕುಲಪತಿಗಳ ಕಛೇರಿಯಲ್ಲಿ ಶುಕ್ರವಾರ ಬೀಳ್ಕೊಡಲಾಯಿತು. ಸಿಂಡಿಕೇಟ್‌ನ ಸರ್ವ ಸದಸ್ಯರು, ಕುಲಸಚಿವರು, ಕುಲಸಚಿವ (ಪರೀಕ್ಷಾಂಗ), ಡೀನ್‌ಗಳು, ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ಆಡಳಿತ ಸಿಬ್ಬಂದಿ ಉಪಸ್ಥಿತರಿದ್ದರು....
ದಕ್ಷಿಣ ಕನ್ನಡಮಂಗಳೂರುವಾಣಿಜ್ಯಶಿಕ್ಷಣಸುದ್ದಿ

ರಾಜ್ಯ ಮಟ್ಟದ ಸಹಕಾರ ರತ್ನ ಪುರಸ್ಕಾರ ಪ್ರಶಸ್ತಿಗೆ ಆಯ್ಕೆಯಾದ ಹಿರಿಯ ಸಹಕಾರಿ ವಿನಯಕುಮಾರ್ ಸೂರಿಂಜೆ ಮತ್ತು ಡಾ. ಎಸ್ ಆರ್ ಹರೀಶ್ ಆಚಾರ್ಯ – ಕಹಳೆ ನ್ಯೂಸ್

ಮಂಗಳೂರು : ಸಹಕಾರ ಕ್ಷೇತ್ರದ ಸಾಧನೆಗಾಗಿ ನೀಡಲಾಗುವ ಸಹಕಾರ ರತ್ನ ಪುರಸ್ಕಾರಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಉಪಾಧ್ಯಕ್ಷರಾದ, ಹಿರಿಯ ಸಹಕಾರಿ ವಿನಯಕುಮಾರ್ ಸೂರಿಂಜೆ ಮತ್ತು ವಿಶ್ವಕರ್ಮ ಸಹಕಾರ ಬ್ಯಾಂಕ್ ಹಾಗೂ ಸಹಕಾರ ಅಧ್ಯಯನ ಮತ್ತು ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷರಾದ ಡಾ. ಎಸ್ ಆರ್ ಹರೀಶ್ ಆಚಾರ್ಯ ಇವರು ಆಯ್ಕೆಯಾಗಿದ್ದಾರೆ. ರಾಜ್ಯದ ಸಹಕಾರ ಸಚಿವ ಕೆ.ಎನ್.ರಾಜಣ್ಣ ಸಹಕಾರ ರತ್ನ ಪ್ರಶಸ್ತಿ ವಿಜೇತರ ಪಟ್ಟಿ ಪ್ರಕಟಿಸಿದ್ದು, ರಾಜ್ಯಾದ್ಯಂತ ಒಟ್ಟು...
ದಕ್ಷಿಣ ಕನ್ನಡಮಂಗಳೂರುಸುದ್ದಿ

ಕರ್ನಾಟಕ ವ್ರೆಸ್ಟಿಂಗ್ ಅಸೋಸಿಯೇಷನ್ (KWA) ಮೀಡಿಯ ಅಕ್ರಿಡಿಯೇಷನ್ ಸದಸ್ಯರಾಗಿ ರಾಮದಾಸ್ ಶೆಟ್ಟಿ ಆಯ್ಕೆ-ಕಹಳೆ ನ್ಯೂಸ್

ಕರ್ನಾಟಕ ವ್ರೆಸ್ಟಿಂಗ್ ಅಸೋಸಿಯೇಷನ್ (KWA) ಮೀಡಿಯ ಅಕ್ರಿಡಿಯೇಷನ್ ಸದಸ್ಯರಾಗಿ ರಾಮದಾಸ್ ಶೆಟ್ಟಿ ಯವರು ಆಯ್ಕೆಯಾಗಿದ್ದಾರೆ. ಬೆಂಗಳೂರಿನಲ್ಲಿ ನಡೆದ ವಿಶೇಷ ಸಭೆಯಲ್ಲಿ ರಾಜ್ಯ ಕುಸ್ತಿ ಸಂಘದ ಅಧ್ಯಕ್ಷರಾದ ಬಿ. ಗುಣರಂಜನ್ ಶೆಟ್ಟಿಯವರು ಅಧಿಕೃತವಾಗಿ ರಾಮದಾಸ್ ಶೆಟ್ಟಿ ಯವರನ್ನು ಆಯ್ಕೆ ಮಾಡಿದ್ದಾರೆ. ಕರ್ನಾಟಕದಲ್ಲಿ ಮೊದಲ ಬಾರಿಗೆ ಕುಸ್ತಿ ಸೀನಿಯರ್ ಚಾಂಪಿಯನ್ ಶಿಪ್ ಡಿಸೆಂಬರ್ ನಲ್ಲಿ ಬೆಂಗಳೂರಿನ ಕೋರಮಂಗಲ ಇಂಡೋರ್ ಸ್ಟೇಡಿಯಮ್ ನಲ್ಲಿ ನಡೆಯಲಿದೆ....
ದಕ್ಷಿಣ ಕನ್ನಡಮಂಗಳೂರುಸುದ್ದಿ

ಶ್ರೀ ಶ್ರೀನಿವಾಸ ದೇವಸ್ಥಾನ, ವೈಕುಂಠ, ವಳಚಿಲ್, ಮಂಗಳೂರು – ಶ್ರೀನಿವಾಸ ಲಕ್ಷತುಳಸಿ ಅರ್ಚನೆ-ಕಹಳೆ ನ್ಯೂಸ್

ಮಂಗಳೂರು: ಶ್ರೀ ಶ್ರೀನಿವಾಸ ದೇವಸ್ಥಾನ, ವೈಕುಂಠ, ವಳಚಿಲ್ ಮಂಗಳೂರಿನಲ್ಲಿ 13 ನವೆಂಬರ್ 2024 ರಂದು ನಡೆದ ಶ್ರೀನಿವಾಸ ಲಕ್ಷತುಳಸಿ ಅರ್ಚನೆ ಕಾರ್ಯಕ್ರಮವು ಭಕ್ತಿಪೂರ್ವಕವಾಗಿ ಸಂಪನ್ನಗೊಂಡಿದೆ. ಬೆಳಗ್ಗೆ ತುಳಸಿ ಪೂಜೆ, ಗೋ ಪೂಜೆ, ಲಕ್ಷತುಳಸಿ ಅರ್ಚನೆಗಳನ್ನು ವೈದಿಕ ಆಚರಣೆಗಳೊಂದಿಗೆ ನಡೆಸಲಾಯಿತು. ಮಧ್ಯಾಹ್ನ ಮಹಾಪೂಜೆಯನ್ನು ಅರ್ಚಕರು ವೈಭವವಾಗಿ ನಡೆಸಿದರು. ನಂತರ ಭಕ್ತರಿಗೆ ಪ್ರಸಾದವನ್ನು ವಿತರಿಸಲಾಯಿತು. ಸಂಜೆ ಮೈಸೂರು ನಗಾರಿ, ಹುಲಿ ಕುಣಿತ, ಭಜನೆ ಮತ್ತು ಕುಣಿತ ಭಜನೆಯು ಭಕ್ತರನ್ನು ಮಂತ್ರಮುಗ್ಧರನ್ನಾಗಿಸಿತು. ತದನಂತರ ದೀಪೋತ್ಸವ...
ದಕ್ಷಿಣ ಕನ್ನಡಮಂಗಳೂರುಸುದ್ದಿ

ಪಿ.ಎ ಕಾಲೇಜಿನಲ್ಲಿ ರಾಷ್ಟ್ರ ಮಟ್ಟದ ಪಿ ಯು ಕ್ಯಾಂಪಸ್ ಕ್ರೋಮ ಮತ್ತು ಡಯೆಟೆಕ್ 6.0 -ಕಹಳೆ ನ್ಯೂಸ್

ಮಂಗಳೂರು: ಪಿ.ಎ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರ ಮಟ್ಟದ ಏಕದಿನ ಅಂತರ್ ಪಿ ಯು ಕಾಲೇಜು ಸ್ಪರ್ಧೆ ಕ್ಯಾಂಪಸ್ ಕ್ರೋಮ  ಪಿ ಎ ಕ್ಯಾಂಪಸ್ ನಲ್ಲಿ ನೆರವೇರಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಕೆಸಿಸಿಐ ಅಧ್ಯಕ್ಷರಾದ ಆನಂದ್ ಜಿ ಪೈ ‘ಇಂದಿನ ಈ ಸ್ಪರ್ಧೆ ಗೆಲುವಿಗಿಂತಲೂ ಅನುಭವಕ್ಕೆ ಹೆಚ್ಚು ಒತ್ತನ್ನು ನೀಡಲಿ. ಸೋಲು ಗೆಲುವು ಇದ್ದದ್ದೆ ಆದರೆ ಅನುಭವ ಅದಕ್ಕಿಂತಲೂ ಮಿಗಿಲು’ ಎಂದರು. ಪಿ ಎ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ...
ದಕ್ಷಿಣ ಕನ್ನಡಮಂಗಳೂರುಸುದ್ದಿ

ಮಂಗಳೂರು ಶ್ರೀನಿವಾಸ ದೇವಸ್ಥಾನ, ವೈಕುಂಠ, ವಳಚ್ಚಿಲ್ ಶ್ರೀ ದೇವರಿಗೆ ಲಕ್ಷ ತುಳಸಿ ಅರ್ಚನೆ ನಡೆಯಲಿದೆ-ಕಹಳೆ ನ್ಯೂಸ್

ಮಂಗಳೂರು: ದಿನಾಂಕ 13 ನವೆಂಬರ್ 2024, ಬುಧವಾರದಂದು ಶ್ರೀನಿವಾಸ ದೇವಸ್ಥಾನ, ವೈಕುಂಠ, ವಳಚ್ಚಿಲ್ ಮಂಗಳೂರು ಶ್ರೀ ದೇವರಿಗೆ ಲಕ್ಷ ತುಳಸಿ ಅರ್ಚನೆ ನಡೆಯಲಿದೆ. ಆ ಪ್ರಯುಕ್ತ ಬೆಳಿಗ್ಗೆ 9 ಕ್ಕೆ ತುಳಸಿ ಪೂಜೆ, ಗೋ ಪೂಜೆ ತದನಂತರ ಶ್ರೀನಿವಾಸ ಲಕ್ಷ ತುಳಸಿ ಅರ್ಚನೆ ನಡೆಯಲಿದೆ. ಮಧ್ಯಾನ್ಹ 12 ರಿಂದ ಮಹಾಪೂಜೆ ಹಾಗು ಪ್ರಸಾದ ವಿತರಣೆ ಜರುಗಲಿದೆ. ಸಂಜೆ 3 ಗಂಟೆಯಿAದ ವಿಶೇಷವಾಗಿ ಹುಲಿ ಕುಣಿತ , ಭಜನೆ, ಕುಣಿತ ಭಜನೆ...
ದಕ್ಷಿಣ ಕನ್ನಡಮಂಗಳೂರುಸುದ್ದಿ

ಸುರತ್ಕಲ್: ಕಾಣೆಯಾದ ಮಹಿಳೆ ಪತ್ತೆ-ಕಹಳೆ ನ್ಯೂಸ್

ಸುರತ್ಕಲ್ : ನಾಪತ್ತೆಯಾಗಿದ್ದ ಮಹಿಳೆ ಪತ್ತೆಯಾಗಿದ್ದಾರೆ. ತನ್ನ ತಾಯಿಯ ಪತ್ತೆಗಾಗಿ ಮಗಳು ಮನವಿ ಮಾಡಿದ್ದರು. ಬಾಳ ಗ್ರಾಮ ನಿವಾಸಿ 70 ವರ್ಷ ಪ್ರಾಯದ ಮಹಿಳೆ ಪುಷ್ಪ ಎಂಬವರು ಕಳೆದ ಸೋಮವಾರ 04/11/2024 ರಿಂದ ಕಾಣೆಯಾಗಿದ್ದರು. ಈ ಬಗ್ಗೆ ಪುಷ್ಪ ಅವರ ಮಗಳು ಜಯಶ್ರಿ ಎಂಬವರು ಸುರತ್ಕಲ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಸದ್ಯ ನಾಪತ್ತೆಯಾಗಿದ್ದರು ಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ....
1 2 3 4 41
Page 2 of 41