ಕೇಂದ್ರ ಸಚಿವರ ಅಧ್ಯಕ್ಷತೆಯಲ್ಲಿ ಮಹತ್ವದ ಸಭೆ : ಎಸ್‌ಇಝೆಡ್‌ನ ಬಹು ಕಾಲದ ಸಮಸ್ಯೆಗೆ ಪರಿಹಾರ ಸಿಗುವ ನಿರೀಕ್ಷೆ..!- ಕಹಳೆ ನ್ಯೂಸ್
ಮಂಗಳೂರು ಆರ್ಥಿಕ ವಲಯ ( SEZ) ನಲ್ಲಿ ಜೆಬಿಎಫ್ ಪೆಟ್ರೊಕೆಮಿಕಲ್ಸ್ ಮತ್ತು ಗೇಲ್‌ನ ವಿಲೀನದಿಂದ ಎಸ್‌ಇಝೆಡ್ ನ ಜಾಗ ಕಳೆದುಕೊಂಡ ಕುಟುಂಬಗಳು ಅನುಭವಿಸುತ್ತಿರುವ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಈ ವಿಷಯದ ಕುರಿತು ನಿರಂತರ ಬೆನ್ನಟ್ಟುತ್ತಿರುವ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಇಂದು ದೆಹಲಿಯಲ್ಲಿ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆಯ ಸಚಿವರಾದ ಹರ್ದೀಪ್ ಸಿಂಗ್ ಪುರಿ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಸುವಲ್ಲಿ ಯಶಸ್ವಿಯಾಗಿದ್ದಾರೆ. JBF...