ಬಣ್ಣದ ಕುಂಚದಲ್ಲಿ ಶಬರಿ ಗಾಣಿಗ ಸಾಧನೆ ಚಿತ್ರ ; ಕ್ಯಾನ್ವಾಸ್ ಮೇಲೆ ನಿಮಿಷದಲ್ಲಿ ಶಬರಿ ಪೈಂಟಿಂಗ್ ಕಮಾಲ್..!! – ಕಹಳೆ ನ್ಯೂಸ್
ಆಕೆ ಕಣ್ಣು ಮುಚ್ಚಿ ಕಣ್ಣು ಬಿಡೋದ್ರೊಳಗಡೆ ಅದ್ಭುತ ಕಲಾಕೃತಿಯನ್ನ ಬಿಡಿಸೋ ಜಾಣೆ, ಹಾಡೋಕೆ ಶುರು ಮಾಡಿದರೆ ಕೋಗಿಲೆ ಸ್ವರದ ಇಂಪಾದ ಸಂಗೀತ. ಕ್ಯಾನ್ವಾಸ್ ಹಿಡಿದು ಕುಳಿತ್ರೆ ಕುತೂಹಲ ಕೆರಳಿಸುವ ಅದ್ಭುತವಾದ ಚಿತ್ರ. ಕರ್ನಾಟಕದ ಅತಿವೇಗದ ಚಿತ್ರಗಾರ್ತಿ ಎಂದೇ ಪ್ರಸಿದ್ಧಿ ಪಡೆದ ಈಕೆಯ ಹೆಸರು ಶಬರಿ ಗಾಣಿಗ. ಹೌದು..ಮೂರೇ ನಿಮಿಷದಲ್ಲಿ ಸುಂದರ ಚಿತ್ರ ಅರಳಿಸುವ ಚಾಕಚಕ್ಯತೆ ಇರುವ ಈಕೆ ಮೂಲತಃ ಮಂಗಳೂರಿನವರು. ಇಂಜಿನಿಯರ್ ಯೋಗೀಶ್ ಕುಮಾರ್ ಹಾಗೂ ಶಶಿಕಲಾ ದಂಪತಿ ಪುತ್ರಿ....