ಮಂಗಳೂರು : ಶಾಸಕ ವೇದವ್ಯಾಸ್ ಕಾಮತ್ ನೇತೃತ್ವದಲ್ಲಿ ಉತ್ತರ ಮಹಾಶಕ್ತಿ ಕೇಂದ್ರದ ಉರ್ವಸ್ಟೋರ್ ರಿಕ್ಷಾ ನಿಲ್ದಾಣದಲ್ಲಿ ಕ್ಯಾ. ಬ್ರಿಜೇಶ್ ಚೌಟರ ಪರ ಮತಯಾಚನೆ – ಕಹಳೆ ನ್ಯೂಸ್
ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರ, ಉತ್ತರ ಮಹಾಶಕ್ತಿ ಕೇಂದ್ರದ ಉರ್ವಸ್ಟೋರ್ ರಿಕ್ಷಾ ನಿಲ್ದಾಣದಲ್ಲಿ ದ.ಕ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟರ ಪರವಾಗಿ ಶಾಸಕ ವೇದವ್ಯಾಸ ಕಾಮತರ ನೇತೃತ್ವದಲ್ಲಿ ಮತಯಾಚನೆ ನಡೆಸಲಾಯಿತು. ಈ ವೇಳೆ ಮಾತನಾಡಿದ ಶಾಸಕರು, ಕಳೆದ ಹತ್ತು ವರ್ಷಗಳಲ್ಲಿ ದೇಶ ಸಾಧಿಸಿರುವ ಪ್ರಗತಿಯನ್ನು ಕಂಡು ಮತದಾರ ಪ್ರಭುಗಳು ಮತ್ತೊಮ್ಮೆ ಮೋದಿ ಸರ್ಕಾರವನ್ನು ಅಧಿಕಾರಕ್ಕೇರಿಸಲು ಈಗಾಗಲೇ ನಿರ್ಧರಿಸಿಯಾಗಿದೆ. ಇನ್ನೇನಿದ್ದರೂ ನಮ್ಮ ಅಭ್ಯರ್ಥಿಯ ಗೆಲುವಿನ ಅಂತರವನ್ನು...