ಇನ್ನುಮುಂದೆ ಅಧಿವೇಶನದ ಬಳಿಕ “ಸಂಸದರೊಂದಿಗೆ ಸಂಸತ್ತಿನ ಸಂವಾದ” ಕಾರ್ಯಕ್ರಮ: ಸಂಸದ ಕ್ಯಾ. ಚೌಟ
ಮಂಗಳೂರು: ಪ್ರತಿಪಕ್ಷವಾದ ಕಾಂಗ್ರೆಸ್ ಸಂಸತ್ತು ಅಧಿವೇಶನದ ಕಲಾಪಗಳಿಗೆ ಅಡ್ಡಿಪಡಿಸುವುದನ್ನೇ ಒಂದು ಛಾಳಿಯಾಗಿ ಮಾಡಿಕೊಂಡಿದೆ. ಸುಗಮವಾಗಿ ನಡೆಯುವ ಸಂಸತ್ ಅಧಿವೇಶನವನ್ನು ಹೈಜಾಕ್ ಮಾಡುವ ಮೂಲಕ ಸಂವಿಧಾನಕ್ಕೆ ಅಗೌರವ ತೋರಿಸುತ್ತಿದ್ದಾರೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಆರೋಪಿಸಿದ್ದಾರೆ. ಮಂಗಳೂರಿನಲ್ಲಿ ಇಂದು ಮಾಧ್ಯಮದ ಜತೆಗೆ ನಡೆದ “ಸಂಸದರೊಂದಿಗೆ ಸಂಸತ್ತಿನ ಸಂವಾದ”ದಲ್ಲಿ ಮಾತನಾಡಿದ ಅವರು, ಈ ಬಾರಿಯ ಚಳಿಗಾಲದ ಅಧಿವೇಶನದಲ್ಲಿ ಪ್ರಮುಖ ವಿಷಯಗಳ ಕುರಿತಂತೆ ಕಲಾಪದಲ್ಲಿ ಪ್ರಶ್ನೆಗಳನ್ನು ಕೇಳಲಾಗಿತ್ತು. ಜತೆಗೆ, ದಕ್ಷಿಣ...