Sunday, January 19, 2025

ಮಂಗಳೂರು

ದಕ್ಷಿಣ ಕನ್ನಡಮಂಗಳೂರುರಾಜ್ಯಶಿಕ್ಷಣಸುದ್ದಿ

ಎಸ್‌ಡಿಎಂ ಲಾ ಕಾಲೇಜಿನ ಸುವರ್ಣ ಪಥ ಕಾನೂನು ಶಿಕ್ಷಣದ ವಿಕಸನಕ್ಕೆ ಹಿಡಿದ ಕೈಗನ್ನಡಿ : ಅಟಾರ್ನಿ ಜನರಲ್ ಡಾ. ವೆಂಕಟ್ರಮಣಿ – ಕಹಳೆ ನ್ಯೂಸ್

ಮಂಗಳೂರು: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜಿನ (SDM Law College) ಸುವರ್ಣ ಮಹೋತ್ಸವ ಸಂಭ್ರಮದ ಅಂಗವಾಗಿ ದಿ. 15 ರಂದು ನಗರದ ಟಿ.ಎಂ.ಎ. ಪೈ ಸಭಾಂಗಣದಲ್ಲಿ ಪೂರ್ವ ವಿದ್ಯಾರ್ಥಿ ಪುನರ್ ಮಿಲನ ಕಾರ್ಯಕ್ರಮ ನಡೆಯಿತು. ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಡಿ. ವೀರೇಂದ್ರ ಹೆಗ್ಗಡೆಯವರ (Veerendra Heggade) ಘನ ಉಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾರತ ಸರಕಾರದ ಅಟಾರ್ನಿ ಜನರಲ್ ಡಾ. ಆರ್ ವೆಂಕಟ್ರಮಣಿ (R. Venkataramani) ಪ್ರದಾನ ಭಾಷಣ ಮಾಡಿದರು....
ದಕ್ಷಿಣ ಕನ್ನಡಮಂಗಳೂರುಸುದ್ದಿ

ಶ್ರೀ ರಾಜರಾಜೇಶ್ವರಿ ಸದ್ಗುರು ಶ್ರೀ ನಿತ್ಯಾನಂದ ಕ್ಷೇತ್ರದ ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ-ಕಹಳೆ ನ್ಯೂಸ್

ಮಂಗಳೂರು : ಶ್ರೀ ರಾಜರಾಜೇಶ್ವರಿ ಸದ್ಗುರು ಶ್ರೀ ನಿತ್ಯಾನಂದ ಕ್ಷೇತ್ರ ನೆಲ್ಲಿ ಅತ್ತೂರು ನಿಟ್ಟೆಯಲ್ಲಿ 2025 ಜನವರಿ 28 ರಿಂದ ಫೆಬ್ರವರಿ 05 ರ ವರೆಗೆ ನಡೆಯುವ ಬ್ರಹ್ಮಕಲಶೋತ್ಸವ ಕರ‍್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಡಿಸೆಂಬರ್ 13 ಶುಕ್ರವಾರ ಸಂಜೆ 7 ಗಂಟೆಗೆ ಕ್ಷೇತ್ರದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ದತ್ತಜಯಂತಿ ಅಂಗವಾಗಿ ದತ್ತ ಪೂಜೆ ಹಾಗೂ ದತ್ತ ಹೋಮ ನಡೆಯಿತು. ಸುಮಾರು 90 ಜನ ಬಜರಂಗದಳ ಕರ‍್ಯರ‍್ತರು ದತ್ತ...
ದಕ್ಷಿಣ ಕನ್ನಡಮಂಗಳೂರುಯಕ್ಷಗಾನ / ಕಲೆಸಂತಾಪಸುದ್ದಿ

ಮೊದಲ ‘ಮಹಿಳಾ ಭಾಗವತ’ ರೆಂಬ ಖ್ಯಾತಿಯ ಲೀಲಾವತಿ ಬೈಪಾಡಿತ್ತಾಯ ಇ*ನ್ನಿಲ್ಲ – ಕಹಳೆ ನ್ಯೂಸ್

ಮಂಗಳೂರು: ತೆಂಕು ತಿಟ್ಟು ಯಕ್ಷಗಾನ ರಂಗದ ಪ್ರಥಮ ವೃತ್ತಿಪರ ಯಕ್ಷಗಾನ ಭಾಗವತರಾದ ಲೀಲಾವತಿ ಬೈಪಡಿತ್ತಾಯ(78) ಶನಿವಾರ(ಡಿ14) ವಯೋಸಹಜ ಅ*ನಾರೋಗ್ಯದಿಂದ ಬಜಪೆ ತಲಕಳದ ಸ್ವಗೃಹದಲ್ಲಿ ನಿ*ಧನ ಹೊಂದಿದರು. ಕೇರಳದ ಕಾಸರಗೋಡಿನ ಮಧೂರಿನಲ್ಲಿ 1947 ನೇ ಮೇ 23 ರಂದು ಲೀಲಾವತಿ ಬೈಪಡಿತ್ತಾಯ ಜನಿಸಿದರು. ಸುಮಾರು ನಾಲ್ಕು ದಶಕಗಳ ಕಾಲ ತಮ್ಮ ಕಂಠಸಿರಿಯಿಂದ ಜನಮನ ಗೆದ್ದಿದ್ದರು. ಪತಿಹಿರಿಯ ಹಿಮ್ಮೇಳವಾದಕ ಹರಿನಾರಾಯಣ ಬೈಪಡಿತ್ತಾಯರ ಅವರೊಂದಿಗೆ ಸುಬ್ರಹ್ಮಣ್ಯ, ಪುತ್ತೂರು, ಕದ್ರಿ, ಕುಂಬಳೆ, ಬಪ್ಪನಾಡು ಮೇಳ, ತಲಕಳ ಮುಂತಾದ...
ದಕ್ಷಿಣ ಕನ್ನಡಮಂಗಳೂರುಸುದ್ದಿ

78 ಲಕ್ಷ ವೆಚ್ಚದ ಸುರತ್ಕಲ್ ರೈಲ್ವೆ ಬ್ರಿಡ್ಜ್ ಕಾಂಕ್ರೀಟ್ ಕಾಮಗಾರಿಗೆ ಶಾಸಕ ಡಾ. ವೈ ಭರತ್ ಶೆಟ್ಟಿಯವರಿಂದ ಗುದ್ದಲಿ ಪೂಜೆ-ಕಹಳೆ ನ್ಯೂಸ್

ಸುರತ್ಕಲ್: ಕಾಟಿಪಳ್ಳ ಕೃಷ್ಣಾ ಪುರ, ಕಾನ, ಬಾಳ, ಜನತಾ ಕಾಲನಿ, ಗಣೇಶಪುರ, ನಾಗರಿಕರ ಬಹು ಬೇಡಿಕೆಯ ಸುರತ್ಕಲ್ ರೈಲ್ವೆ ಬ್ರಿಡ್ಜ್ ರಸ್ತೆಯನ್ನು ಸುಮಾರು 78ಲಕ್ಷ ವೆಚ್ಚದ ಕಾಂಕ್ರೀಟಿಕರಣ ಕಾಮಗಾರಿಗೆ ಶಾಸಕರು ಡಾ. ವೈ ಭರತ್ ಶೆಟ್ಟಿಯವರು ಗುದ್ದಲಿ ಪೂಜೆ ನೆರವೇರಿಸಿದರು. ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಮನೋಜ್ ಕುಮಾರ್ ಕೋಡಿಕಲ್ ಮಂಗಳೂರು ಮಹಾನಗರ ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶ್ರೀಮತಿ ಸರಿತಾ ಶಶಿಧರ್, ಸುಮಿತ್ರ ಕೆ ಮನಪಾ ಸದಸ್ಯರು ವರುಣ್...
ದಕ್ಷಿಣ ಕನ್ನಡಮಂಗಳೂರುಸುದ್ದಿ

ಕರಾವಳಿ ಉತ್ಸವವನ್ನು ಜನಾಕರ್ಷಣೆಯ ಕಾರ್ಯಕ್ರಮವನ್ನಾಗಿಸಲು ಸ್ಪೀಕರ್, ಉಸ್ತುವಾರಿ ಸಚಿವರ ಸೂಚನೆ – ಕಹಳೆ ನ್ಯೂಸ್

ಮಂಗಳೂರು, ಡಿ.13 : ಈ ವರ್ಷ ನಡೆಯಲಿರುವ ಕರಾವಳಿ ಉತ್ಸವವನ್ನು ಜನಾಕರ್ಷಣೆಯ ಕಾರ್ಯಕ್ರಮವನ್ನಾಗಿ ಮಾಡಲು ಹೆಚ್ಚು ಒತ್ತು ನೀಡುವಂತೆ ಸ್ಪೀಕರ್ ಯು.ಟಿ ಖಾದರ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸೂಚಿಸಿದ್ದಾರೆ. ಅವರು ಸೋಮವಾರ ಕರಾವಳಿ ಉತ್ಸವ ಸಿದ್ಧತೆಗಳ ಪ್ರಯುಕ್ತ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಬೆಳಗಾವಿ ಸುವರ್ಣ ವಿಧಾನಸೌಧದಿಂದ ವಿಡಿಯೋ ಕಾನ್ಪೆರನ್ಸ್ ಮೂಲಕ ಭಾಗವಹಿಸಿ ಮಾತನಾಡಿದರು. ಕರಾವಳಿ ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸ್ಥಳೀಯ ಸಾಂಸ್ಕೃತಿಕ ಕಲಾಪ್ರಕಾರಗಳು ಸೇರಿದಂತೆ ಸಾರ್ವಜನಿಕರನ್ನು...
ದಕ್ಷಿಣ ಕನ್ನಡಮಂಗಳೂರುಸುದ್ದಿ

ಇನ್ನೋವಾ ಕಾರೊಂದು ಲಾರಿಗೆ ಡಿಕ್ಕಿ ; ಇಬ್ಬರಿಗೆ ಗಾಯ-ಕಹಳೆ ನ್ಯೂಸ್

ಮುಲ್ಕಿ ಡಿಸೆಂಬರ್ 13: ಇನ್ನೋವಾ ಕಾರೊಂದು ಲಾರಿಗೆ ಡಿಕ್ಕಿ ಹೊಡೆದ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಮುಲ್ಕಿ ಕ್ಷೀರಸಾಗರ ಪೆಟ್ರೋಲ್ ಬಂಕ್ ಬಳಿ ನಡೆದಿದೆ. ಅಪಘಾತದಲ್ಲಿ ಕಾರಿನಲ್ಲಿದ್ದ ಇಬ್ಬರಿಗೆ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮಂಗಳೂರು ಕಡೆಯಿಂದ ಹೊಸಪೇಟೆ ಕಡೆಗೆ ಕಲ್ಲಿದ್ದಲು ಸಾಗಾಟ ಮಾಡುತ್ತಿದ್ದ ಲಾರಿಗೆ, ಅದೇ ದಿಕ್ಕಿನಲ್ಲಿ ಚಲಿಸುತ್ತಿದ್ದ ಇನ್ನೋವಾ ಕಾರು ಹಿಂಬದಿಯಿAದ ಡಿಕ್ಕಿ ಹೊಡೆದಿದೆ. ಕಾರಿನಲ್ಲಿದ್ದ ಚಾಲಕ ಕೊಕ್ಕರಕಲ್ ನಿವಾಸಿ ರೋಹನ್ ಹಾಗೂ ಪ್ರಯಾಣಿಕ ಅಂಗರಗುಡ್ಡೆ ನಿವಾಸಿ...
ದಕ್ಷಿಣ ಕನ್ನಡಮಂಗಳೂರು

ಬಿಪಿಎಲ್ ಪಡಿತರ ರದ್ದತಿಯ ಮಾನದಂಡ ಸರಿಯಿಲ್ಲ; ಡಾ.ಭರತ್ ಶೆಟ್ಟಿ ವೈ-ಕಹಳೆ ನ್ಯೂಸ್

ಬೆಳಗಾವಿ: ಬಿಪಿಎಲ್ ಪಡಿತರ ರದ್ದು ಮಾನದಂಡ ವಿಚಾರದಲ್ಲಿ ಶಾಸಕರಾದ ಡಾ.ಭರತ್ ಶೆಟ್ಟಿ ವೈ ಅವರು ಸರಕಾರವನ್ನು ಬೆಳಗಾವಿ ಅಧಿವೇಶನದಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ. ಬಿಪಿಎಲ್ ಪಡಿತರ ಫಲಾನುಭವಿಗಳು ಯಾವುದೋ ಕಾರಣಕ್ಕೆ ಒಂದೆರಡು ಮೂರು ತಿಂಗಳು ಪಡಿತರ ಪಡೆದುಕೊಳ್ಳದಿದ್ದಲ್ಲಿ ಕಾರ್ಡ್ ರದ್ದಾಗುತ್ತಿದೆ.ಕೆಲವೊಂದು ಸಾಲ ಸೌಲಭ್ಯಕ್ಕಾಗಿ ಕೇವಲ ಆದಾಯ ರಿಟರ್ನ್ ಮಾಡಿದವರ ಕಾರ್ಡ್ ರದ್ದಾಗುತ್ತಿದೆ. ಆಯುಷ್ಮಾನ್ ಜತೆ ಬಿಪಿಎಲ್ ಪಡಿತರ ಲಿಂಕ್ ಇರುವುದರಿಂದ ಮತ್ತೆ ಕಾರ್ಡ್ ಪಡೆಯಲು ಫಲಾನುಭವಿಯ ಫೈಲ್ ಜಿಲ್ಲಾ ಮಟ್ಟದಲ್ಲಿ ವಿಲೇವಾರಿ‌...
ದಕ್ಷಿಣ ಕನ್ನಡಪುತ್ತೂರುಬಂಟ್ವಾಳಮಂಗಳೂರುಸಿನಿಮಾ

ತುಳುನಾಡಿನಾದ್ಯಂತ ಡಿ.13ರಂದು (ನಾಳೆ) ಬಹುನೀರಿಕ್ಷಿತ ದಸ್ಕತ್ ತುಳು ಚಲನಚಿತ್ರ ಬಿಡುಗಡೆ – ಕಹಳೆ ನ್ಯೂಸ್

ಮಂಗಳೂರು : ತುಳುನಾಡಿನಾದ್ಯಂತ ಡಿ.13ರಂದು (ನಾಳೆ) ಕಾಮಿಡಿ ಕಿಲಾಡಿ ಖ್ಯಾತಿಯ ಅನೀಶ್ ಪೂಜಾರಿ ವೇಣೂರು ನಿರ್ದೇಶನದ ಕರಾವಳಿ ಸೊಡಗಿನ ಬಹುನೀರಿಕ್ಷಿತ “ದಸ್ಕತ್” ತುಳು ಚಲನಚಿತ್ರವು ಬಿಡುಗಡೆಯಾಗಲಿದೆ. ತುಳುನಾಡಿನ ಎಲ್ಲಾ ಮಲ್ಟಿಫ್ಲೆಕ್ಸ್ ಚಿತ್ರಮಂದಿರದಲ್ಲಿ ನಾಳೆ “ದಸ್ಕತ್” ತುಳು ಚಲನಚಿತ್ರ ಬಿಡುಗಡೆಯಾಗಲಿದ್ದು, ಚಿತ್ರದ ಮೊದಲ ಒಂದು ದಿನದ ಶೋ ನ ಟಿಕೆಟ್ ದರ ಕೇವಲ 99/- ಮಾತ್ರ ಈ ಮೂಲಕ ಪ್ರೇಕ್ಷಕರಿಗೆ ಬಂಪರ್ ಆಫರ್ ನೀಡಿದ್ದಾರೆ. ಇನ್ನು ಚಿತ್ರವನ್ನು ಕೃಷ್ಣ ಜೆ ಪಾಲೆಮಾರ್...
1 6 7 8 9 10 51
Page 8 of 51