ಮೂಡುಬಿದಿರೆ: ಬೈಲ ಕುರಲ್ ಖ್ಯಾತಿಯ “ಭಾಷಾ” ಇನ್ನಿಲ್ಲ – ಕಹಳೆ ನ್ಯೂಸ್
ಮೂಡುಬಿದಿರೆ: ಕಳೆದ ಮೂರು ದಶಕಗಳಿಂದ ನಾಟಕ ರಂಗದಲ್ಲಿ ವಿವಿಧ ಪಾತ್ರಗಳ ಮೂಲಕ ಗಮನ ಸೆಳೆದಿದ್ದ ತುಳು ನಾಟಕ ಕಲಾವಿದ ಬೈರ ಕುರಲ್ ಖ್ಯಾತಿಯ "ಭಾಷಾ" ವಸಂತ್ ಶೆಟ್ಟಿ ತೋಡಾರು ಅವರು ಅನಾರೋಗ್ಯದಿಂದ ಭಾನುವಾರ ನಿಧನರಾಗಿದ್ದಾರೆ. ತೋಡಾರು ಗಗನ್ ನಿವಾಸದ ಸುಂದರ ಶೆಟ್ಟಿ ಅವರ ಪುತ್ರ ವಸಂತ ಶೆಟ್ಟಿ(೫೨) ಕಳೆದ ಮೂರು ವರುಷಗಳಿಂದ ಅನಾರೋಗ್ಯವನ್ನು ಹೊಂದಿದ್ದರು. ಸುರೇಂದ್ರ ಕುಮಾರ್ ಕಲತ್ರಪಾದೆ ಅವರ ರಚನೆಯ ಅತ್ಯುತ್ತಮ ನಾಟಕ ಬೈರ ಕುರಲ್ ನಲ್ಲಿ "ಭಾಷಾ"...