Sunday, January 19, 2025

ಸಂತಾಪ

ದಕ್ಷಿಣ ಕನ್ನಡಪುತ್ತೂರುಸಂತಾಪಸುದ್ದಿ

RSS ಹಿರಿಯ ಚೇತನ, ವಿವೇಕಾನಂದ ವಿದ್ಯಾವರ್ಧಕ ಸಂಘದ ಮಾಜಿ ಅಧ್ಯಕ್ಷ , ಸಂಘಟನಾ ಚತುರ ರಾಧಾಕೃಷ್ಣ ಭಕ್ತ ನಿಧನ ; ನಾಳೆ (ಮೇ.5) ಬೆಳಿಗ್ಗೆ ಅಂತ್ಯಸಂಸ್ಕಾರ – ಕಹಳೆ ನ್ಯೂಸ್

ಪುತ್ತೂರು : ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಚೇತನ, ವಿವೇಕಾನಂದ ವಿದ್ಯಾವರ್ಧಕ ಸಂಘದ ಮಾಜಿ ಅಧ್ಯಕ್ಷ , ಸಂಘಟನಾ ಚತುರ ರಾಧಾಕೃಷ್ಣ ಭಕ್ತ (71) ಮೇ.4 ರಂದು ನಿಧನರಾದರು. ಜನಸಂಘದ ಕಾಲದಲ್ಲಿ ಸಕ್ರೀಯರಾಗಿದ್ದು, ತಮ್ಮ ಮನೆಯನ್ನೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಾಲಯ ಮಾಡಿಕೊಂಡಿದ್ದ ದಿ. ದೇವದಾಸ್ ಭಕ್ತ ಅವರ ಪುತ್ರ ರಾಧಾಕೃಷ್ಣ ಭಕ್ತ ತನ್ನ ತಂದೆಯ ಮಾರ್ಗದರ್ಶದನಲ್ಲೇ ಮುಂದುವರಿದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಕಾರ್ಯಕರ್ತರಾಗಿದ್ದರು. ಪುತ್ತೂರಿನಲ್ಲಿ...
ಸಂತಾಪಸುದ್ದಿ

‘ದ್ವಿತೀಯ PUC’ ಪರೀಕ್ಷೆಯಲ್ಲಿ ಅನುತ್ತೀರ್ಣ : ಚಾಮರಾಜನಗರದಲ್ಲಿ ನೇಣು ಬಿಗಿದುಕೊಂಡು ವಿದ್ಯಾರ್ಥಿನಿ ಆತ್ಮಹತ್ಯೆ -ಕಹಳೆ ನ್ಯೂಸ್

ಚಾಮರಾಜನಗರ : 2022-23 ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ಪರೀಕ್ಷೆಯಲ್ಲಿ ಫೇಲಾಗಿದ್ದಕ್ಕೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಜೆಎಸ್ ಎಸ್ ಮಹಿಳಾ ಕಾಲೇಜಿನ ಹಾಸ್ಟೆಲ್ ನಲ್ಲಿ ನಡೆದಿದೆ. ಗುಂಡ್ಲುಪೇಟೆ ತಾಲೂಕಿನ ಮೂಡಗೂರು ಗ್ರಾಮದ ವಿಜಯಲಕ್ಷ್ಮಿ ಎಂಬ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿನಿಯಾಗಿದ್ದ ಈಕೆ ಇಂದು ಫಲಿತಾಂಶ ನೋಡಿ ಫೇಲ್ ಆಗಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದು, ಜೆಎಸ್ ಎಸ್ ಮಹಿಳಾ ಕಾಲೇಜಿನ ಹಾಸ್ಟೆಲ್...
ದಕ್ಷಿಣ ಕನ್ನಡಪುತ್ತೂರುಸಂತಾಪಸುದ್ದಿ

ಕಾಣಿಯೂರು ಇಡ್ಯಡ್ಕದಲ್ಲಿ ದೈವ ನರ್ತನದ ವೇಳೆ ಕುಸಿದು ಬಿದ್ದು ಇಹಲೋಕ ತ್ಯಜಿಸಿದ ದೈವ ನರ್ತಕ – ಕಹಳೆ ನ್ಯೂಸ್

ಕಾಣಿಯೂರು: ದೈವ ನರ್ತನ ಮಾಡುತ್ತಿದ್ದಾಗಲೇ ಕುಸಿದು ಬಿದ್ದು ದೈವ ನರ್ತಕರೊಬ್ಬರು ಇಹಲೋಕ ತ್ಯಜಿಸಿದ ಘಟನೆ ಮಾ.30 ರಂದು ಕಡಬ ತಾಲೂಕಿನ ಕಾಣಿಯೂರು ಸಮೀಪ ದೋಳ್ಪಾಡಿ ಗ್ರಾಮದ ಇಡ್ಯಡ್ಕದಿಂದ ವರದಿಯಾಗಿದೆ. ಖ್ಯಾತ ದೈವ ನರ್ತಕ ಎಡಮಂಗಲ ಗ್ರಾಮದ ಕಾಂತು ಅಜಿಲ ಮೂಲಂಗೀರಿ (ಬಾಬು) (55) ಮೃತರು ಎಂದು ತಿಳಿದು ಬಂದಿದೆ. ಹಲವಾರು ವರ್ಷಗಳಿಂದ ಎಡಮಂಗಲ ಗ್ರಾಮದ ಕೂಡುಕಟ್ಟಿಗೆ ಸಂಬಂಧಿಸಿದಂತೆ ದೈವಾರಾದಕರಾಗಿ ಗ್ರಾಮದೈವಗಳ ಪರಿಚಾರಕರಾಗಿ ಸೇವೆ ಸಲ್ಲಿಸುತ್ತಿದ್ದರು. ಮಾ.30 ರಂದು ದೋಳ್ಪಾಡಿ ಗ್ರಾಮದ...
ದಕ್ಷಿಣ ಕನ್ನಡಪುತ್ತೂರುಸಂತಾಪಸುದ್ದಿ

ಖ್ಯಾತ ನೃತ್ಯ ಗುರು ದಿ. ಕುದ್ಕಾಡಿ ವಿಶ್ವನಾಥ ರೈ ಹಾಗೂ ವಿದುಷಿ ನಯನಾ ವಿ ರೈ ಅವರ ಸುಪುತ್ರಿ ನೃತ್ಯ ವಿದುಷಿ ಆಸ್ತಿಕಾ ಸುನಿಲ್ ಶೆಟ್ಟಿ ನಿಧನ ; ಕಂಬನಿ ಮಿಡಿದ ಕಲಾರಂಗ – ಕಹಳೆ ನ್ಯೂಸ್

ಪುತ್ತೂರು : ಖ್ಯಾತ ನೃತ್ಯ ಗುರು ವಿದ್ವಾನ್ ದಿ. ಕುದ್ಕಾಡಿ ವಿಶ್ವನಾಥ ರೈ ಅವರ ಕಿರಿಯ ಪುತ್ರಿ ಪಡುವನ್ನೂರು ಗ್ರಾಮದ ಕುದ್ಕಾಡಿ ನಿವಾಸಿ, ಬಹರೈನ್ ನಲ್ಲಿ ನೆಲೆಸಿದ್ದ ನೃತ್ಯ ವಿದುಷಿ ಆಸ್ತಿಕಾ ಸುನಿಲ್ ಶೆಟ್ಟಿ (46) ಮಾ.7 ರಂದು ಅಸೌಖ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಮೃತರು ಪತಿ, ಪುತ್ರನನ್ನು ಅಗಲಿದ್ದಾರೆ. ಕಲಾವಿದರ ಕುಟುಂಬದಲ್ಲಿ ಜನಿಸಿದ ಆಸ್ತಿಕಾ ರೈ ಪದಡ್ಕ ವಿಶ್ವಕಲಾನಿಕೇತನದಲ್ಲಿ ಕಲಿತು ನೃತ್ಯ, ಯಕ್ಷಗಾನದಲ್ಲಿ ಪಳಗಿದ್ದರು. ಭರತನಾಟ್ಯ ಕಲಾವಿದೆಯಾಗಿ, ಯಕ್ಷಗಾನ...
ಸಂತಾಪಸುದ್ದಿ

ಮಂಗಳೂರಿನ ಖ್ಯಾತ ವೈದ್ಯ ಕೆ. ಜಯರಾಮ್‌ ಶೆಟ್ಟಿ ಹೃದಯಾಘಾತದಿಂದ ನಿಧನ – ಕಹಳೆ ನ್ಯೂಸ್

ಮಂಗಳೂರು: (Doctor K. jayaram shetty) ಮಂಗಳೂರು ದೇರಳಕಟ್ಟೆಯ ಜಸ್ಟೀಸ್‌ ಕೆ.ಎಸ್.ಹೆಗ್ಡೆ ಚಾರಿಟೇಬಲ್‌ ಆಸ್ಪತ್ರೆಯ ಖ್ಯಾತ ವೈದ್ಯ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಇವರು ಆಸ್ಪತ್ರೆಯ ರೇಡಿಯೇಷನ್‌ ಆಂಕಾಲಜಿ ಕ್ಯಾನ್ಸರ್‌ ವಿಭಾಗದ ತಜ್ಞ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದರು. ಗುರುಪುರ ಪರಾರಿ ದೋಟ ಕೊಳಕ್ಕೆಬೈಲು ನಿವಾಸಿ ಡಾ. ಜಯರಾಮ್‌ ಶೆಟ್ಟಿ ( 53 ವರ್ಷ) ನಿಧನರಾಗಿದ್ದಾರೆ. ಡಾ. ಜಯರಾಮ್‌ ಶೆಟ್ಟಿ ಮಂಗಳೂರಿನ ಕೆ.ಎಂ.ಸಿ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯಕೀಯ ಸ್ನಾತಕ್ಕೋತ್ತರ ಉನ್ನತ ಶಿಕ್ಷಣ ಪಡೆದ...
ದಕ್ಷಿಣ ಕನ್ನಡರಾಜ್ಯಸಂತಾಪಸುದ್ದಿ

ಕನ್ನಡದ ಹಿರಿಯ ಸಾಹಿತಿ ಸಾರಾ ಅಬೂಬಕ್ಕರ್ ನಿಧನ ; ಮಂಗಳೂರಿನ ಲೇಡಿಹಿಲ್​ನ ಮನೆಯಲ್ಲಿ ಸಾರಾ ಅಬೂಬಕ್ಕರ್​ ಅವರ ಅಂತಿಮ ದರ್ಶನ – ಇಂದೇ ಅಂತ್ಯಕ್ರಿಯೆ – ಕಹಳೆ ನ್ಯೂಸ್

ಮಂಗಳೂರು: ಕನ್ನಡದ ಹಿರಿಯ ಸಾಹಿತಿ ಸಾರಾ ಅಬೂಬಕ್ಕರ್(86) ಅವರು ಮಂಗಳವಾರ ಮಧ್ಯಾಹ್ನ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಮಂಗಳೂರಿನ ಲೇಡಿಹಿಲ್​ನ ಮನೆಯಲ್ಲಿ ಸಾರಾ ಅಬೂಬಕ್ಕರ್​ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಇಂದು ರಾತ್ರಿ 8 ಗಂಟೆಗೆ ಅಂತ್ಯಕ್ರಿಯೆ ನೆರವೇರಲಿದೆ. 1936ರ ಜೂನ್ 30ರಂದು ಕಾಸರಗೋಡಿನ ಚಂದ್ರಗಿರಿ ತೀರದ ಗ್ರಾಮವೊಂದರಲ್ಲಿ ಪಿ. ಅಹಮದ್ ಮತ್ತು ಚೈನಾಬಿ ದಂಪತಿಯ ಪುತ್ರಿಯಾಗಿ ಸಾರಾ ಜನಿಸಿದರು. ಹುಟ್ಟೂರಿನಲ್ಲೇ ಪ್ರಾಥಮಿಕ ಶಿಕ್ಷಣ ಮುಗಿಸಿದ ಅವರು ಕಾಸರಗೋಡಿನಲ್ಲಿ ಪ್ರೌಢಶಿಕ್ಷಣ...
ದಕ್ಷಿಣ ಕನ್ನಡಸಂತಾಪಸುದ್ದಿ

ಶ್ರೀಮಾತೆ ಶಾರದಾದೇವಿಯವರ ಜನ್ಮ ಜಯಂತಿಯಂದೇ ಇಹಲೋಕ ತ್ಯಜಿಸಿದ ಮಂಗಳೂರು ರಾಮಕೃಷ್ಣ ಮಠದ ನಿಕಟಪೂರ್ವ ಅಧ್ಯಕ್ಷರು ಪೂಜ್ಯ ಸ್ವಾಮಿ ಪೂರ್ಣಕಾಮಾನಂದಜಿ ಮಹಾರಾಜ್ – ಕಹಳೆ ನ್ಯೂಸ್

ಮಂಗಳೂರು: ಇಲ್ಲಿನ ರಾಮಕೃಷ್ಣ ಮಠದ ನಿಕಟಪೂರ್ವ ಅಧ್ಯಕ್ಷ ಪೂಜ್ಯ ಸ್ವಾಮಿ ಪೂರ್ಣಕಾಮಾನಂದಜಿ ಮಹಾರಾಜ್ (81) ಗುರುವಾರ(ಡಿ.15) ಬೆಳಗ್ಗೆ ಮಹಾಸಮಾಧಿ ಹೊಂದಿದರು. 81 ವರ್ಷ ವಯಸ್ಸಾಗಿದ್ದ ಸ್ವಾಮೀಜಿಯ ಹುಟ್ಟೂರು ಬಾಗಲಕೋಟೆ. ಶ್ರೀಮಾತೆ ಶಾರದಾದೇವಿಯವರ ಜನ್ಮ ಜಯಂತಿಯಂದೇ ಇಂದು ಬೆಳಗ್ಗೆ 6.15 ಕ್ಕೆ ಹೃದಯಾಘಾತದಿಂದಾಗಿ ಇಹಲೋಕ ತ್ಯಜಿಸಿದರು. ಶ್ರೀ ರಾಮಕೃಷ್ಣ- ವಿವೇಕಾನಂದರ ತತ್ವಾದರ್ಶಗಳಿಂದ ಪ್ರಭಾವಿತರಾದ ಸ್ವಾಮಿಜಿ 1969 ರಲ್ಲಿ ಭಾರತೀಯ ನೌಕಾ ಸೇನೆಯಿಂದ ನಿವೃತ್ತಿ ಪಡೆದು ಮುಂಬೈ ರಾಮಕೃಷ್ಣ ಮಠಕ್ಕೆ ಬ್ರಹ್ಮಚಾರಿಯಾಗಿ ಸೇರಿದರು. ರಾಮಕೃಷ್ಣ...
ಉಡುಪಿಸಂತಾಪ

‘ಕಲಾಕ್ಷೇತ್ರದ ಅಮೂಲ್ಯ ಕೊಂಡಿ ಕಳಚಿದೆ’ : ಶ್ರೀ ಕುಂಬ್ಳೆ ಸುಂದರ ರಾಯರ ನಿಧನಕ್ಕೆ ಪೇಜಾವರ ಶ್ರೀ ಸಂತಾಪ – ಕಹಳೆ ನ್ಯೂಸ್

ಶ್ರೀ ಕುಂಬ್ಳೆ ಸುಂದರ ರಾಯರ ನಿಧನಕ್ಕೆ ಪೇಜಾವರ ಶ್ರೀ ಸಂತಾಪ ಸೂಚಿಸಿದ್ದಾರೆ. ಅದ್ಭುತ ವಾಗ್ಮಿಗಳೂ, ಯಕ್ಷಗಾನ ಅರ್ಥಧಾರಿ, ಪಾತ್ರಧಾರಿಗಳಾಗಿ ಅಪಾರ ಜನಮನ್ನಣೆಗೆ ಪಾತ್ರರಾಗಿದ್ದ ಕುಂಬ್ಳೆ ಸುಂದರ ರಾಯರ ನಿಧನದ ವಾರ್ತೆ ತಿಳಿದು ತೀರಾ ವಿಷಾದವಾಗಿದೆ. ರಾಮಾಯಣ ಮಹಾಭಾರತ ಪುರಾಣಗಳ ಬಗ್ಗೆ ಅಧ್ಯಯನಾತ್ಮಕ ವಿದ್ವತ್ತನ್ನು ಸಂಪಾದಿಸಿದ್ದ ಅವರು ಅದನ್ನು ಕಲೆಯ ಮೂಲಕ ಜನರಿಗೆ ತಲುಪಿಸಿದ್ದರು. ಇಂದು ಕಲಾಕ್ಷೇತ್ರದ ಅಮೂಲ್ಯ ಕೊಂಡಿಯೊಂದು ಕಳಚಿದಂತಾಗಿದೆ. ಶ್ರೀಮಠದೊಂದಿಗೆ ವಿಶೇಷ ಬಾಂಧವ್ಯ ಒಡನಾಟ ಹೊಂದಿದ್ದರು. ಶ್ರೀ ಕೃಷ್ಣಮಠದ...
1 13 14 15 16 17 23
Page 15 of 23