Sunday, January 19, 2025

ಸಂತಾಪ

ಕೊಡಗುಸಂತಾಪಸುದ್ದಿ

ಪೊಲೀಸ್ ಸೇವೆಯಿಂದ ನಿವೃತ್ತಿ ಪಡೆಯುವ ಒಂದು ತಿಂಗಳ ಮುಂಚೆಯೇ ಕೊನೆಯುಸಿರೆಳೆದ ಮಡಿಕೇರಿಯ ಎಸ್.ಐ.ಚಿನ್ನಪ್ಪ ನಾಯ್ಕ- ಕಹಳೆ ನ್ಯೂಸ್

ಕಡಬ: ಮಡಿಕೇರಿಯಲ್ಲಿ ಎಸ್.ಐ.ಯಾಗಿ ಸೇವೆ ಸಲ್ಲಿಸುತ್ತಿದ್ದ ಸುಳ್ಯ ತಾಲೂಕು ನಡುಗಲ್ಲು ನಿವಾಸಿ ಚಿನ್ನಪ್ಪ ನಾಯ್ಕ (59) ನವೆಂಬರ್ ತಿಂಗಳಿನಲ್ಲಿ ಎಸ್.ಐ.ಆಗಿ ಭಡ್ತಿಗೊಂಡಿದ್ದರು. ಆರೋಗ್ಯವಾಗಿದ್ದ ಇವರು ರಜೆಯ ಹಿನ್ನಲೆಯಲ್ಲಿ ಮನೆಗೆ ಬಂದಿದ್ದರು. ಆದರೆ ಇಂದು ಮುಂಜಾನೆ ಏಕಾಏಕಿ ಅಸ್ವಸ್ಥಗೊಂಡ ಇವರು, ಹೃದಯಾಘಾತದಿಂದ ಅಸುನೀಗಿದ್ದಾರೆ. ಅಸ್ವಸ್ಥಗೊಂಡ ತಕ್ಷಣವೇ ಕಡಬ ಸರಕಾರಿ ಆಸ್ಪತ್ರೆಗೆ ಕರೆತರಲಾಗಿತ್ತಾದರೂ ದಾರಿ ಮಧ್ಯದಲ್ಲಿ ಕೊನೆಯುಸಿರೆಳೆದಿದ್ದರು. ಮುಂದಿನ ತಿಂಗಳು ನಿವೃತ್ತಿ ಹೊಂದಲಿದ್ದ ಇವರು, ನಿವೃತ್ತಿಗೂ ಮುನ್ನವೇ ಬದುಕಿನ ಪಯಣಕ್ಕೆ ಪೂರ್ಣವಿರಾಮವಿಟ್ಟಿದ್ದಾರೆ. ಕಡಬ...
ದಕ್ಷಿಣ ಕನ್ನಡರಾಜ್ಯಸಂತಾಪಸುದ್ದಿ

27ರ ಹರೆಯದ ತೆಲುಗಿನ ಯುವ ನಟಿ, ಯೂಟ್ಯೂಬರ್ ಹೃದಯಾಘಾತದಿಂದ ನಿಧನ – ಕಹಳೆ ನ್ಯೂಸ್

ಹೈದರಬಾದ್, ನ 08 : ಟಾಲಿವುಡ್‌ನ ಯುವ ನಟಿ, ಯೂಟ್ಯೂಬ್ ವೀಡಿಯೋಗಳಿಂದ ಪ್ರಸಿದ್ದ ಪಡೆದ, ಶ್ರೇಯಾ ಮುರಳಿಧರ್ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಮೂಲತಃ ಹೈದರಾಬಾದ್‌ವರಾದ 27ರ ಹರೆಯ ಶ್ರೇಯಾ ಮುರಳಿಧರ್ ಆಕೆಯ ಯೂಟ್ಯೂಬ್ ಚಾನಲ್‌ನಲ್ಲಿ ಸಾವಿರಾರು ಅಭಿಮಾನಿಗಳನ್ನು ಹೊಂದಿದ್ದಳು. ಯೂಟ್ಯೂಬರ್ ಆಗಿ, ಕಿರುತೆರೆಯಲ್ಲಿ ಹೆಸರು ಮಾಡಿ, ಅಂದು ಕೊಂಡದ್ದನ್ನ ಸಾಧಿಸಿ, ಭರವಸೆ ನಟಿಯಾಗಿ ಬೆಳೆದಿದ್ದ ಶ್ರೇಯಾ 'ಪೆಲ್ಲಿ ಚೂಪುಲು' ರಿಯಾಲಿಟಿ ಶೋ ದಲ್ಲೂ ಶ್ರೇಯಾ ಭಾಗಿಯಾಗಿ ಗಮನ ಸೆಳೆದಿದ್ದರು. ಯುವತಾರೆಯ ಸಾವಿಗೆ ಸಂತಾಪಗಳ...
ದಕ್ಷಿಣ ಕನ್ನಡಪುತ್ತೂರುಸಂತಾಪಸುದ್ದಿ

ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ರಾಮ ಭಟ್ ರವರಿಗೆ ನುಡಿನಮನ ಕಾರ್ಯಕ್ರಮ – ಕಹಳೆ ನ್ಯೂಸ್

ಪುತ್ತೂರು: ವಿವೇಕಾನಂದ ಸಂಸ್ಥೆಗಳ ಸ್ಥಾಪನೆಗೆ ಮತ್ತು ಬೆಳವಣಿಗೆಗೆ ಬೆನ್ನೆಲುಬಾಗಿದ್ದ ಹಿರಿಯ ಮುತ್ಸದ್ದಿ ಬಿಜೆಪಿಯ ಭೀಷ್ಮ ಎಂದೇ ಪ್ರಖ್ಯಾತಿಯಾಗಿದ್ದ ರಾಮಭಟ್ ಅವರ ನಿಧನ ಸಮಾಜಕ್ಕೆ ತುಂಬಲಾರದ ನಷ್ಟ ಎಂದು ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಕೋಶಾಧಿಕಾರಿ ಗೋಪಾಲಕೃಷ್ಣ ಭಟ್ ಎಂ ಹೇಳಿದರು. ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಮಂಗಳವಾರ ನಡೆದ ಉರಿಮಜಲು ರಾಮ ಭಟ್ಟರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ರಾಮ ಭಟ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಮಾಡಿ ಅವರು ಮಾತಾಡಿದರು. ರಾಮ ಭಟ್...
ದಕ್ಷಿಣ ಕನ್ನಡಸಂತಾಪಸುದ್ದಿ

ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳಿಂದ ಬಪ್ಪಳಿಗೆಯಲ್ಲಿ ರಾಮ ಭಟ್ ರಿಗೆ ಶ್ರದ್ದಾಂಜಲಿ ಕಾರ್ಯಕ್ರಮ- ಕಹಳೆ ನ್ಯೂಸ್

ಪುತ್ತೂರು: ವಿಶಾಲವಾಗಿ ಬೆಳೆದ ವೃಕ್ಷ ತನ್ನ ರೆಂಬೆ ಕೊಂಬೆಗಳನ್ನು ಬಾಗಿಸಿ ನಿಲ್ಲುತ್ತದೆ. ಸಜ್ಜನರೂ ಕೂಡ ತಾವು ಬಾಗಿಯೇ ಬೆಳೆಯುತ್ತಾರೆ. ಕೇವಲ ಮೂರ್ಖರು ಹಾಗೂ ದುರ್ಜನರು ಮಾತ್ರ ಒಣಗಿದ ಕಟ್ಟಿಗೆಯಂತೆ ಬಾಗದೆ ಉಳಿಯುತ್ತಾರೆ. ನೇರವಾಗಿ ನಿಂತಿದ್ದೇವೆ ಅನ್ನುವುದೇ ಬದುಕಿನ ಸಾರ್ಥಕ್ಯವಲ್ಲ. ಉರಿಮಜಲು ರಾಮ ಭಟ್ಟರು ಸೌಜನ್ಯಸಹಿತರಾಗಿ, ಜನರ ವಿಶ್ವಾಸದ ಕೇಂದ್ರವಾಗಿ, ಅಸಂಖ್ಯ ಜನರಿಗೆ ನೆರಳಾಗಿ ಬದುಕಿದ ಮಹಾನ್ ವ್ಯಕ್ತಿ ಎಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯ ಡಾ.ಎಚ್.ಮಾಧವ...
ಪುತ್ತೂರುರಾಜ್ಯಸಂತಾಪಸುದ್ದಿ

ಮಾಜಿ ಶಾಸಕ ಉರಿಮಜಲು ರಾಮ್ ಭಟ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ ಪ್ರಧಾನಿ ನರೇಂದ್ರ ಮೋದಿ- ಕಹಳೆ ನ್ಯೂಸ್

ಕರಾವಳಿಯ ವಾಜಪೇಯ ಎಂದು ಹೆಸರುವಾಸಿಯಾಗಿದ್ದ ಭಾರತೀಯ ಜನತಾ ಪಕ್ಷದ ಹಿರಿಯ ನೇತಾರ, ಮಾಜಿ ಶಾಸಕ ಉರಿಮಜಲು ರಾಮ್ ಭಟ್ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಸಂತಾಪ ಸೂಚಿಸಿದ್ದಾರೆ. Video : " ಬಿಜೆಪಿಯ ಭೀಷ್ಮ " ಮಾಜಿ ಶಾಸಕ ಉರಿಮಜಲು ಕೆ. ರಾಮ ಭಟ್ ನಿಧನ ; ಗಣ್ಯರಿಂದ ಸಂತಾಪ ‘ಜನಸಂಘ ಮತ್ತು ಬಿಜೆಪಿಯ ಇತಿಹಾಸದಲ್ಲಿ ಉರಿಮಜಲು ಕೆ. ರಾಮ ಭಟ್ ಜಿ ಅವರಂತಹ ದಿಗ್ಗಜರಿಗೆ ಒಂದು ವಿಶೇಷ...
ದಕ್ಷಿಣ ಕನ್ನಡಪುತ್ತೂರುಸಂತಾಪಸುದ್ದಿ

ಬಿಜೆಪಿ ಧುರೀಣ ರಾಮ್ ಭಟ್ ನಿಧನ ; ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಚಿವ ಅಂಗಾರ, ಶಾಸಕರಿಂದ ಅಂತಿಮ ದರ್ಶನ – ನಾಳೆ ಬೆಳಗ್ಗೆ ಪುತ್ತೂರು ವರ್ತಕರ ಸಂಘದಿಂದ ಗೌರವಾರ್ಥ ಸ್ವಯಂ ಪ್ರೇರಿತ ಬಂದ್ – ಕಹಳೆ ನ್ಯೂಸ್

ಪುತ್ತೂರು: ತಾಲೂಕಿನ ಮಾಜಿ ಶಾಸಕ, ಬಿಜೆಪಿ ಭೀಷ್ಮ ರಾಮ್ ಭಟ್ ಅವರು ಇಂದು ಇಹಲೋಕ ತ್ಯಜಿಸಿದ್ದು ಸುದ್ದಿ ತಿಳಿದ ತಕ್ಷಣ ದಕ್ಷಿಣ ಕನ್ನಡ ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲ್, ಸಚಿವ ಎಸ್.ಅಂಗಾರ, ಪುತ್ತೂರು ಶಾಸಕ ಸಂಜೀವ ಮಠಂದೂರು ಭೇಟಿ ನೀಡಿದ ಅಂತಿಮ ದರ್ಶನ ಪಡೆದರು. ಈ ವೇಳೆ ಮಾಧ್ಯಮದ ಜೊತೆ ಮಾತನಾಡಿದ ಜನಪ್ರತಿನಿದಿಗಳು ನಾಳೆ ವರ್ತಕರ ಸಂಘದಿಂದ ಕೆಲಗಂಟೆಗಳ ಕಾಲ ಸ್ವಯಂಪ್ರೇರಿತ ಬಂದ್ ಗೆ ನಿರ್ಧರಿಸಿದ್ದು ಪಾರ್ಥೀವ ಶರೀರವನ್ನು...
ಬೆಂಗಳೂರುರಾಜ್ಯಸಂತಾಪಸಿನಿಮಾಸುದ್ದಿ

ಕನ್ನಡದ ಹಿರಿಯ ನಟ ಶಿವರಾಂ ಇನ್ನಿಲ್ಲ – ಕಹಳೆ ನ್ಯೂಸ್

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ ಸ್ಯಾಂಡಲ್‍ವುಡ್‍ನ ‘ಶಿವರಾಮಣ್ಣ’ ಎಂದೇ ಖ್ಯಾತರಾಗಿದ್ದ ಶಿವರಾಂ ಇಂದು ನಿಧನ ಹೊಂದಿದ್ದಾರೆ. ಕೆಲವು ದಿನಗಳ ಹಿಂದೆ ಕಾರು ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಮನೆಗೆ ತೆರಳಿದ್ದರು. ನಂತರ ಮನೆಯಲ್ಲಿ ಅಯ್ಯಪ್ಪ ಪೂಜೆ ಮಾಡುತ್ತಿದ್ದ ವೇಳೆ  ಕಾಲು ಜಾರಿ ಬಿದ್ದು ತಲೆಗೆ ಗಂಭೀರ ಗಾಯವಾಗಿ ವಿದ್ಯಾಪೀಠ ಸರ್ಕಲ್ ಬಳಿ ಇರುವ ಪ್ರಶಾಂತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಬ್ರೇನ್ ಡ್ಯಾಮೇಜ್ ನಿಂದ ಕೋಮಾದಲ್ಲಿದ್ದರು.  ಆದರೆ ಇದೀಗ...
ಸಂತಾಪ

ಗದಗ : ಹಾಲಕೇರಿ ಮಠದ ಪೀಠಾಧಿಪತಿ ಡಾ ಅಭಿನವ ಅನ್ನದಾನೇಶ್ವರ ಮಹಾಸ್ವಾಮಿಜಿ ಲಿಂಗೈಕ್ಯ – ಕಹಳೆ ನ್ಯೂಸ್

ಗದಗ : ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಹಾಲಕೇರಿ ಮಠದ ಪೀಠಾಧಿಪತಿ, ಶ್ರೀ ಡಾ.ಸಂಗನಬಸವ (ಅಭಿನವ ಅನ್ನದಾನೇಶ್ವರ) ಮಹಾ ಸ್ವಾಮಿಜಿ ಲಿಂಗೈಕ್ಯರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಸ್ವಾಮಿಜಿಯನ್ನು ಬೆಂಗಳೂರು ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗದಗ ಜಿಲ್ಲೆಯ ಹಾಲಕೇರಿ ಶ್ರೀ ಅನ್ನದಾನೇಶ್ವರ ಮಠದ ಅಭಿನವ ಅನ್ನದಾನೇಶ್ವರ ಪರಮಪೂಜ್ಯ ಶ್ರೀ ಡಾ.ಸಂಗನಬಸವ ಸ್ವಾಮೀಜಿಗಳು 128 ಶಾಖಾ ಮಠ, 60ಕ್ಕೂ ಅಧಿಕ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಅವರು ಸಮಾಜಕ್ಕೆ ಅವಿರತ ಸೇವೆ ಸಲ್ಲಿಸಿದ್ದರು. ಇಂದು ಮುಖ್ಯಮಂತ್ರಿಗಳಾದ...
1 17 18 19 20 21 23
Page 19 of 23