ನಿವೃತ್ತ ಶಿಕ್ಷಕಿ, ನೃತ್ಯ ನಿರ್ದೇಶಕಿ ಗುಣವತಿ ಎಂ ನಿಧನ – ಕಹಳೆ ನ್ಯೂಸ್
ಮೂಡುಬಿದಿರೆ : ಆಚಾರ್ಯ ಕೇರಿ ನಿವಾಸಿ, ನಿವೃತ್ತ ಶಿಕ್ಷಕಿ, ನೃತ್ಯ ನಿರ್ದೇಶಕಿ, ಗಾಯಕಿ ಗುಣವತಿ ಎಂ. (83) ಅವರು ಉಪ್ಪಿನಂಗಡಿಯಲ್ಲಿರುವ ಪುತ್ರಿಯ ಮನೆಯಲ್ಲಿ ಜೂ. 22ರಂದು ನಿಧನ ಹೊಂದಿದರು. ಮೃತರು ಪುತ್ರಿಯನ್ನು ಅಗಲಿದ್ದಾರೆ. 1960ರ ದಶಕದಲ್ಲಿ ಶಿಕ್ಷಕಿ ವೃತ್ತಿ ಆರಂಭಿಸಿದ್ದ ಅವರು ಹೊಸಬೆಟ್ಟು ಗ್ರಾಮದ ಹೆಗ್ಡೆಬೈಲುನಲ್ಲಿ ಹೊಸ ಶಾಲೆ ಸ್ಥಾಪನೆ, ಹೊಸಕಟ್ಟಡ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಬೆಳುವಾಯಿ ಮೈನ್, ಜ್ಯೋತಿನಗರ, ಮೂಡುಬಿದಿರೆ ಥರ್ಡ್ ಶಾಲೆಗಳಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ...