ಮುಳುಗಿದ ಸಾಹಿತ್ಯ ಲೋಕದ ರವಿ..! ; ಹಿರಿಯ ಪತ್ರಕರ್ತ, ಬರಹಗಾರ ರವಿ ಬೆಳಗೆರೆ ಇನ್ನಿಲ್ಲ – ಕಹಳೆ ನ್ಯೂಸ್
ಹಿರಿಯ ಪತ್ರಕರ್ತ, ಬರಹಗಾರ ರವಿ ಬೆಳಗೆರೆ ಇನ್ನಿಲ್ಲ. ಓದುಗರು,ವೀಕ್ಷಕರು ಈ ಸುದ್ದಿ ಅರಗಿಸಿಕೊಳ್ಳಲೇಬೇಕಾಗಿದೆ. ಹೃದಯಾಘಾತದಿಂದ ಹಿರಿಯ ಪತ್ರಕರ್ತ ರವಿ ಬೆಳಗೆರೆ ನಿಧನರಾಗಿದ್ದಾರೆ. ಗುರುವಾರ ತಡರಾತ್ರಿ ಹಾಯ್ ಬೆಂಗಳೂರ್ ಕಚೇರಿಯಲ್ಲೇ ಅವರಿಗೆ ಹೃದಯಾಘಾತವಾಗಿದೆ. ಕೂಡಲೆ ಅವರನ್ನು ಅಪೋಲೋ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗಿಲ್ಲ. ರಾತ್ರಿ 12.15 ಕ್ಕೆ ಹಾಯ್ ಬೆಂಗಳೂರು ಆಫೀಸ್ ನಲ್ಲಿ ಹೃದಯಾಘಾತವಾಗಿದೆ. ನಂತರ ಅಪೋಲೋ ಆಸ್ಪತ್ರಗೆ ಕರೆದುಕೊಂಡು ಹೋಗಲಾಗಿದೆ. ಮಾರ್ಚ್ 15, 1958ರಲ್ಲಿ ಬಳ್ಳಾರಿಯಲ್ಲಿ ಜನನಿಸಿದ ಬೆಳಗೆರೆ...