ಅಭಿನವ ವಾಲ್ಮೀಕಿ, ಶ್ರೇಷ್ಠ ಯಕ್ಷಗಾನ ಕಲಾವಿದ, ಖ್ಯಾತ ಭಾಗವತ, ಸಾಹಿತಿ ಬೊಟ್ಟಿಕೆರೆ ಪುರುಷೋತ್ತಮ ಪೂಂಜ ಇನ್ನಿಲ್ಲ – ಕಹಳೆ ನ್ಯೂಸ್
ಮಂಗಳೂರು : ಅಲ್ಪಕಾಲಿಕ ಅನಾರೋಗ್ಯದಿಂದ ಬಳಲುತ್ತಿದ್ದ ಯಕ್ಷಗಾನ ರಂಗದ ಶ್ರೇಷ್ಠ ಕಲಾವಿದ, ಖ್ಯಾತ ಭಾಗವತ, ಸಾಹಿತಿ ಅಭಿನವ ವಾಲ್ಮೀಕಿ ಬೊಟ್ಟಿಕೆರೆ ಪುರುಷೋತ್ತಮ ಪೂಂಜರು ಇಹಲೋಕ ತ್ಯಜಿಸಿದ್ದಾರೆ. ಯಕ್ಷಗಾನ ರಂಗ ಹಾಗೂ ಸಾರಸ್ವತ ಲೋಕಕ್ಕೆ ಪೂಂಜರ ಅಗಲುವಿಕೆ ತುಂಬಲಾರದ ನಷ್ಟವನ್ನುಂಟು ಮಾಡಿದೆ. ಕಟೀಲು ಮೇಳದಲ್ಲಿ ಸುಧೀರ್ಘ ತಿರುಗಾಟ ನಡೆಸಿದ ಪೂಂಜರು ತಮ್ಮ ಅನಾರೋಗ್ಯದ ಮಧ್ಯದಲ್ಲೂ ಯಕ್ಷಗಾನಕ್ಕೆ ಸಂಬಂಧಿಸಿದ ಸಾಹಿತ್ಯಗಳನ್ನು ಬರೆದುಕೊಡುತ್ತಿದ್ದರು. ಹಾಗೂ ಕಳೆದ ಒಂದು ತಿಂಗಳ ಹಿಂದೆಯಷ್ಟೇ ಕಹಳೆ ನ್ಯೂಸ್ ವಾಹಿನಿಯಲ್ಲಿ...