ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಮೊಟ್ಟೆತ್ತಡ್ಕದ ಪ್ರತೀಕ್ಷಾಗೆ ಡಿಸ್ಟಿಂಕ್ಷನ್-ಕಹಳೆ ನ್ಯೂಸ್
ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಮೈಸೂರು ಇವರು ನಡೆಸಿದ ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಕು. ಪ್ರತೀಕ್ಷಾ ಕೆ ಗಾಣಿಗ 4೦೦ ಕ್ಕೆ 339 ಅಂಕಗಳೊಂದಿಗೆ ವಿಶೇಷ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಪುತ್ತೂರಿನ ಸಂತ ಫಿಲೋಮಿನಾ ಶಾಲೆಯ 10ನೇ ತರಗತಿಯ ವಿದ್ಯಾರ್ಥಿನಿ ಆಗಿರುವ ಪ್ರತೀಕ್ಷಾ ಪುತ್ತೂರು ಮೊಟ್ಟೆತ್ತಡ್ಕದ ವಿದುಷಿ ಪ್ರಮೀಳ ಎಂ. ಇವರ ಶಿಷ್ಯೆಯಾಗಿದ್ದಾರೆ. ಪ್ರತೀಕ್ಷಾ ಅವರು ಪುತ್ತೂರು ಮೊಟ್ಟೆತ್ತಡ್ಕದ ದಿ.ಕೇಶವ ಸಪಲ್ಯ...