ಯುವ ಯಕ್ಷಗಾನ ಕಲಾವಿದ ಕಡಬ ವಿನಯ ಆಚಾರ್ಯ ಇನ್ನಿಲ್ಲ – ಕಹಳೆ ನ್ಯೂಸ್
ಮಂಗಳೂರು: ತೆಂಕುತಿಟ್ಟು ಯಕ್ಷಗಾನದ ಯುವ ಕಲಾವಿದ ಕಡಬ ವಿನಯ ಆಚಾರ್ಯ ಸೋಮವಾರ ಬೆಳಿಗ್ಗೆ ನಿಧನ ಹೊಂದಿದರು. ಅವರಿಗೆ 33 ವರ್ಷ ವಯಸ್ಸಾಗಿತ್ತು. ಮದ್ದಲೆಗಾರನಾಗಿ ಯಕ್ಷ ರಂಗದಲ್ಲಿ ಪ್ರಸಿದ್ದಿಯಾಗಿದ್ದ ವಿನಯ ಆಚಾರ್ಯ ಅವರು ಅಸೌಖ್ಯದಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ತಂದೆ ಕಡಬ ನಾರಾಯಣ ಆಚಾರ್ಯ ಅವರು ಪ್ರಸಿದ್ಧ ಮದ್ದಲೆಗಾರರಾಗಿದ್ದರು. ಯುವ ಪ್ರತಿಭಾನ್ವಿತ, ಭರವಸೆಯ ಮದ್ದಲೆಗಾರರಾಗಿದ್ದ ಕಡಬ ವಿನಯ ಆಚಾರ್ಯ ಹೊಸನಗರ, ಎಡನೀರು, ಹನುಮಗಿರಿ ಮೇಳದಲ್ಲಿ ತಿರುಗಾಟ ನಡೆಸಿದ್ದರು. ಅಸೌಖ್ಯದಿಂದಾಗಿ ಕಳೆದ...