ಉಡುಪಿ: ಮಥುರಾ ಹೋಟೆಲ್‌ನ ಜಯಕೃಷ್ಣ ಸಭಾಂಗಣದಲ್ಲಿ ನಡೆದ ಬೆಂಕಿ ರಹಿತ ಅಡುಗೆ ಸ್ಪರ್ಧೆ ಮತ್ತು ಚಿತ್ರಕಲಾ ಸ್ಪರ್ಧೆ– ಕಹಳೆ ನ್ಯೂಸ್
ಉಡುಪಿ: ಮಥುರಾ ಹೋಟೆಲ್‌ನ ಜಯಕೃಷ್ಣ ಸಭಾಂಗಣದಲ್ಲಿ ಬೆಂಕಿ ರಹಿತ ಅಡುಗೆ ಸ್ಪರ್ಧೆ ಮತ್ತು ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆಯನ್ನು ಉದ್ಯಮಿ ವಿಶ್ವನಾಥ್ ಶೆಣೈ ಉದ್ಘಾಟಿಸಿದರು. ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಬಡಗಬೆಟ್ಟು ಕ್ರೆಡಿಟ್ ಕೋ.ಅ. ಸೊಸೈಟಿಯ ಅಧ್ಯಕ್ಷರಾದ ಜಯಕರ್ ಶೆಟ್ಟಿ ಇಂದ್ರಾಳಿ ಮಾತನಾಡಿ ಇಂದಿನ ಕಾಲದಲ್ಲಿ ಆರೋಗ್ಯವೇ ಬಹುದೊಡ್ಡ ಸಂಪತ್ತು. ನಾವು ಹಿತಮಿತ ಆಹಾರ ಸೇವಿಸಿದರೆ ಆರೋಗ್ಯಕ್ಕೆ ಉತ್ತಮ. ಅಡುಗೆ ಕೊಣೆಯಲ್ಲಿ ಬೆಂಕಿ ಇಲ್ಲದೆ ಆಹಾರ ತಯಾರಿಸಿ ಉತ್ತಮ ಆರೋಗ್ಯವಂತರಾಗಿ ಇರುವಂತೆ...