ಉಡುಪಿಯಲ್ಲಿ ಇಂದು “ಕಾಶ್ಮೀರ ವಿಜಯ’ ತಾಳಮದ್ದಳೆ ; ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಭಾಗವತಿಕೆ – ಕಹಳೆ ನ್ಯೂಸ್
ಉಡುಪಿ: ಸುಶಾಸನ ಸಮಿತಿ ರಾಷ್ಟ್ರಕಲಾ ತಂಡದ ಪ್ರಾಯೋಜ ಕತ್ವದಲ್ಲಿ, ಉಡುಪಿಯ ಸುಧಾಕರ ಆಚಾರ್ಯರ ಸಂಕಲ್ಪ- ಸಂಯೋಜನೆಯಲ್ಲಿ ಪ್ರೊ| ಪವನ್ ಕಿರಣಕೆರೆ ವಿರಚಿತ ಶಾರದಾ ದೇಶದ ಪುಣ್ಯ ಚರಿತಾಮೃತ “ಕಾಶ್ಮೀರ ವಿಜಯ’ ತಾಳಮದ್ದಳೆ ಜ. 14ರ ಮಧ್ಯಾಹ್ನ 2.30ರಿಂದ ಅಂಬಾಗಿಲಿನ ಅಮೃತ್ ಗಾರ್ಡನ್‌ನಲ್ಲಿ ನಡೆಯಲಿದೆ. ಉದ್ಘಾಟನೆ ಕಾರ್ಯಕ್ರಮದಲ್ಲಿ ಸುಶಾಸನ ಸಮಿತಿ ಗೌರವಾಧ್ಯಕ್ಷರು, ಪೇಜಾವರ ಮಠಾಧೀಶ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದರು ಅಧ್ಯಕ್ಷತೆ ವಹಿಸಿ ಆಶೀರ್ವಚನ ನೀಡಲಿದ್ದಾರೆ. ಕಟೀಲಿನ ಲಕ್ಷ್ಮೀನಾರಾಯಣ ಅಸ್ರಣ್ಣ...