Sunday, January 19, 2025

ಅಂತಾರಾಷ್ಟ್ರೀಯ

ಅಂತಾರಾಷ್ಟ್ರೀಯವಾಣಿಜ್ಯಸುದ್ದಿ

ಆಹಾರ ಉತ್ಪನ್ನಗಳ ಪೂರೈಕೆಗೆ ಭಾರತದ ಮುಂದೆ ಮಂಡಿಯೂರಿದ ಬಾಂಗ್ಲಾ.! – ಕಹಳೆ ನ್ಯೂಸ್

ಬಾಂಗ್ಲಾದೇಶದಲ್ಲಿ ಬಿಕ್ಕಟ್ಟು ಹೆಚ್ಚಾಗುತ್ತಿದ್ದು, ಚೀನಾ, ಪಾಕಿಸ್ತಾನದಂತಹ ದೇಶಗಳು ಹತ್ತಿರವಾಗುತ್ತಿದೆ, ಅಲ್ಲದೇ ಭಾರತದೊಂದಿಗೆ ಸಂಬಂಧ ಕೂಡ ಬಿರುಕು ಬಿಡುತ್ತದೆ, ಈ ಎಲ್ಲಾ ಬೆಳವಣಿಗೆಗಳ ನಡುವೆಯೇ ಬಾಂಗ್ಲಾ ಭಾರತದ ಎದುರು ಮಂಡಿಯುರಿದ್ದು, ಸಹಾಯ ಮಾಡುವಂತೆ ಅಂಗಲಾಚುತ್ತಿದ್ದಾರೆ. ಸರ್ಕಾರ ಪತನಗೊಂಡ ಬಳಿಕ ಬಾಂಗ್ಲಾ ಸಂಪೂರ್ಣ ಅಸ್ತವ್ಯಸ್ತವಾಗಿದ್ದು, ಆಹಾರ ಉತ್ಪನ್ನಗಳ ಪೂರೈಕೆ, ಹಣದುಬ್ಬರ ಕಾರಣದಿಂದ ಒಂದು ಹೊತ್ತು ಊಟಕ್ಕೂ ಪರದಾಡುವಂತಾಗಿದೆ. ಈ ಹಿನ್ನಲೆ ನಮಗೆ ಸಹಾಯ ಮಾಡಿ ಎಂದು ಭಾರತದ ಮುಂದೆ ಬಾಂಗ್ಲಾದೇಶ ಅಂಗಲಾಚಿ ನಿಂತಿದೆ....
ಅಂತಾರಾಷ್ಟ್ರೀಯಸಂತಾಪಸುದ್ದಿ

ಬ್ರೆಜಿಲ್‌:ಚಾಲಕನ ನಿಯಂತ್ರಣ ತಪ್ಪಿ ಟ್ರಕ್ ಗೆ ಡಿಕ್ಕಿ ಹೊಡೆದ ಬಸ್ : ಸ್ಥಳದಲ್ಲೇ 38 ಪ್ರಯಾಣಿಕರು ಸಾವು- ಕಹಳೆ ನ್ಯೂಸ್

ಟೈರ್ ಸ್ಫೋಟಗೊಂಡ ಹಿನ್ನೆಲೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಬಸ್, ಟ್ರಕ್​ವೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ 38 ಪ್ರಯಾಣಿಕರು ಮೃತಪಟ್ಟಿರುವ ಘಟನೆ ಆಗ್ನೇಯ ಬ್ರೆಜಿಲ್‌ನಲ್ಲಿ ನಡೆದಿದೆ. ಸುಮಾರು 50ಕ್ಕೂ ಹೆಚ್ಚು ಪ್ರಯಾಣಿಕರಿದ್ದ ಬಸ್ ಬೆಳಗಿನ ಜಾವ 4:00ರ ಸುಮಾರಿಗೆ ಸಾವೊ ಪಾಲೊ ಪ್ರದೇಶದಿಂದ ವಿಟೋರಿಯಾ ಡ ಕಾನ್‌ಕ್ವಿಸ್ಟಾಗೆ ತೆರಳುತ್ತಿತ್ತು. ವೇಗವಾಗಿ ತೆರಳುತ್ತಿರುವಾಗ ಬಸ್​ನ ಟೈರ್ ಸ್ಫೋಟಗೊಂಡಿದೆ. ಈ ವೇಳೆ ಬಸ್​ ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದ ಟ್ರಕ್​ಗೆ ಭಯಾನಕವಾಗಿ ಡಿಕ್ಕಿ ಹೊಡೆದಿದೆ....
ಅಂತಾರಾಷ್ಟ್ರೀಯಸುದ್ದಿ

ಕುವೈತ್‌ನಲ್ಲಿರುವ ಭಾರತೀಯ ಕಾರ್ಮಿಕರನ್ನು ಭೇಟಿಯಾಗಿ ಕಷ್ಟಸುಖ ವಿಚಾರಿಸಿದ ಪ್ರಧಾನಿ ಮೋದಿ- ಕಹಳೆ ನ್ಯೂಸ್

ಪ್ರಧಾನಿ ಮೋದಿ ಕುವೈತ್‌ನ ಗಲ್ಫ್ ಲೇಬರ್ ಕ್ಯಾಂಪ್‌ನಲ್ಲಿ ಭಾರತೀಯ ವಲಸೆ ಕಾರ್ಮಿಕರನ್ನು ಭೇಟಿಯಾಗಿ ಅವರ ಕಷ್ಟಸುಖ ವಿಚಾರಿಸಿದರು. ಕಾರ್ಮಿಕರ ಕೆಲಸ ಮತ್ತು ಸಮಸ್ಯೆಗಳ ಬಗ್ಗೆಯೂ ಮಾತನಾಡಿದರು, ಇದರಿಂದ ಅಲ್ಲಿನ ಭಾರತೀಯರು ಭಾವುಕರಾದರು. ಪಿಎಂ ಮೋದಿ ತಮ್ಮ ಎರಡು ದಿನಗಳ ಕುವೈತ್ ಪ್ರವಾಸದಲ್ಲಿ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದರು. ಪ್ರಧಾನಿ ಮೊದಲ ದಿನ ಗಲ್ಫ್ ಸ್ಪಿಕ್ ಲೇಬರ್ ಕ್ಯಾಂಪ್‌ಗೆ ಭೇಟಿ ನೀಡಿದರು. ಈ ಕ್ಯಾಂಪ್‌ನಲ್ಲಿರುವ ಶೇ.90ರಷ್ಟು ಜನ ಭಾರತೀಯರಾಗಿದ್ದಾರೆ. ಕುವೈತ್‌ನಂತಹ ಗಲ್ಫ್...
ಅಂತಾರಾಷ್ಟ್ರೀಯಸುದ್ದಿ

ಕ್ಯಾಲಿಪೋರ್ನಿಯಾ : ತುರ್ತು ಲ್ಯಾಂಡಿಂಗ್ ಸಮಯದಲ್ಲಿ ಅಪಘಾತಕ್ಕೀಡಾದ ಮಿಲಿಟರಿ ಹೆಲಿಕಾಪ್ಟರ್ -ಕಹಳೆ ನ್ಯೂಸ್

ಕ್ಯಾಲಿಫೋರ್ನಿಯಾ: ಕ್ಯಾಲಿಫೋರ್ನಿಯಾದ ಕ್ಯಾಂಪ್ ಪೆಂಡೆಲ್ಟನ್ ನಲ್ಲಿ ತುರ್ತು ಲ್ಯಾಂಡಿಂಗ್ ಸಮಯದಲ್ಲಿ ಮಿಲಿಟರಿ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿದೆ. ಮಾಹಿತಿ ಪಡೆದ ನಂತರ, ಅನೇಕ ತುರ್ತು ಸಿಬ್ಬಂದಿ ಓಶಿಯನ್ ಸೈಡ್ ನಲ್ಲಿ ಘಟನಾ ಸ್ಥಳದಲ್ಲಿದ್ದಾರೆ. ಸ್ಥಳೀಯ ಪೊಲೀಸರು ಈ ಪ್ರದೇಶವನ್ನು ಹಾಗೂ ಪರಿಸ್ಥಿತಿಯನ್ನು ನಿರ್ಣಯಿಸುತ್ತಾರೆ.ಅಧಿಕಾರಿಗಳು ಸಾರ್ವಜನಿಕ ಸಲಹೆಯನ್ನು ನೀಡಿದ್ದು, ಸಿಬ್ಬಂದಿ ಹಸ್ತಕ್ಷೇಪವಿಲ್ಲದೆ ತಮ್ಮ ಕರ್ತವ್ಯಗಳನ್ನು ನಿರ್ವಹಿಸಲು ಅನುವು ಮಾಡಿಕೊಡಲು ಅಪಘಾತದ ಸ್ಥಳವನ್ನು ತಪ್ಪಿಸಲು ಜನರನ್ನು ಒತ್ತಾಯಿಸಿದ್ದಾರೆ. ಈ ಸಮಯದಲ್ಲಿ, ಅಪಘಾತದಿಂದ ಯಾವುದೇ ಮಿಲಿಟರಿ ಸಿಬ್ಬಂದಿ...
ಅಂತಾರಾಷ್ಟ್ರೀಯಸುದ್ದಿ

ಜಾನಪದ ಕಲಾವಿದ, ಪದ್ಮಶ್ರೀ ಪುರಸ್ಕೃತ, ಬಳಗಂ ಚಿತ್ರ ಖ್ಯಾತಿಯ ಮೊಗಿಲಯ್ಯ ವಿದಿವಷ-ಕಹಳೆ ನ್ಯೂಸ್

ಹೈದರಾಬಾದ್ : ಬಳಗಂ ಚಿತ್ರದ ಮೂಲಕ ಜನಮನ್ನಣೆ ಗಳಿಸಿದ್ದ ಪದ್ಮಶ್ರೀ ಪುರಸ್ಕೃತ ಜಾನಪದ ಕಲಾವಿದ ದರ್ಶನಂ ಮೊಗಿಲಯ (67) ಗುರುವಾರ(ಡಿ.18) ಬೆಳಗ್ಗೆ ನಿಧನರಾಗಿದ್ದಾರೆ. ಕಿನ್ನರ ಮೊಗಿಲಯ್ಯ ಎಂದೂ ಕರೆಯಲ್ಪಡುವ ಮೊಗಿಲಯ್ಯ ಅವರು ಮೂತ್ರಪಿಂಡ ಕಾಯಿಲೆಯಿಂದ ವಾರಂಗಲ್‌ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಗುರುವಾರ ಮುಂಜಾನೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬ ಮೂಲಗಳು ಮಾಹಿತಿ ನೀಡಿವೆ. ಮೊಗಿಲಯ್ಯ ಅವರು ಬುಡಕಟ್ಟು ಸಂಗೀತ ಪೊದ್ಯಗಾರರಲ್ಲಿ ಒಬ್ಬರು. ಸಂಗೀತ ಪರಿಕರಗಳಲ್ಲಿಯೇ ಅಪರೂಪವಾದ...
ಅಂತಾರಾಷ್ಟ್ರೀಯಸುದ್ದಿ

ಪಂಪಾ ಗಣಪತಿ ದೇವಸ್ಥಾನದ ಪಾದಚಾರಿ ಮಾರ್ಗದಲ್ಲಿ ಶೂ ಧರಿಸಿದ ಪೊಲೀಸ್ ಅಧಿಕಾರಿಗಳು; ಭಕ್ತರ ಕಣ್ಣಿಗೆ ಮಣ್ಣೆರೆಚಲು ತನಿಖೆಯ ಪ್ರಹಸನ ಮಾಡುವುದರಲ್ಲಿ ಅರ್ಥವಿಲ್ಲ – ಕೆ.ಪಿ.ಶಶಿಕಲಾ-ಕಹಳೆ ನ್ಯೂಸ್

ಅಂತರ ರಾಜ್ಯ-ಶಬರಿಮಲೆ ಪಂಪಾ ಗಣಪತಿ ದೇವಸ್ಥಾನದ ಪಾದಚಾರಿ ಮಾರ್ಗದಲ್ಲಿ ಪೊಲೀಸ್ ಅಧಿಕಾರಿಗಳು ಶೂ ಧರಿಸಿ ಪ್ರವೇಶಿಸಿರುವುದು ವಿವಾದವಾಗಿದೆ. ಶಬರಿಮಲೆ ಕರ್ತವ್ಯಕ್ಕೆ ಬರುವ ಪೊಲೀಸ್ ಅಧಿಕಾರಿಗಳಿಗೆ ಧಾರ್ಮಿಕ ವಿಧಿ ವಿಧಾನಗಳಿಗೆ ಸಂಬಂಧಿಸಿದಂತೆ ಮಾರ್ಗಸೂಚಿ ನೀಡಲಾಗುತ್ತಿಲ್ಲ. ಭಕ್ತರ ಕಣ್ಣಿಗೆ ಮಣ್ಣೆರೆಚಲು ತನಿಖೆಯ ಪ್ರಹಸನ ಮಾಡುವುದರಲ್ಲಿ ಅರ್ಥವಿಲ್ಲ ಎಂದು ಹಿಂದು ಐಕ್ಯವೇದಿ ಪ್ರಧಾನ ಧರ್ಮದರ್ಶಿ ಕೆ.ಪಿ.ಶಶಿಕಲಾ ಟೀಚರ್ ಹೇಳಿದ್ದಾರೆ. ಬರಿಗಾಲಿನಲ್ಲಿ ಗಣಪತಿ ದೇವಸ್ಥಾನವ ಭಕ್ತರು ಅಲ್ಲಿಂದ ಮಲೆ ಏರುತ್ತಾರೆ. ಹೀಗಿರುವಾಗ ಪೊಲೀಸ್ ಅಧಿಕಾರಿಗಳು ಶೂ...
ಅಂತಾರಾಷ್ಟ್ರೀಯದೆಹಲಿರಾಷ್ಟ್ರೀಯಸಂತಾಪಸುದ್ದಿ

ತಬಲಾ ಮಾಂತ್ರಿಕ ಜಾಕಿರ್ ಹುಸೇನ್‌ ನಿಧನ – ಕಹಳೆ ನ್ಯೂಸ್

ವಾಷಿಂಗ್ಟನ್‌: ತೀವ್ರ ಹೃದಯ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿದ್ದ ತಬಲಾ ಮಾಂತ್ರಿಕ ಜಾಕೀರ್ ಹುಸೇನ್ (73) ನಿಧನರಾಗಿದ್ದಾರೆ. ಖ್ಯಾತ ತಬಲ ವಾದಕ ಜಾಕೀರ್‌ ಹುಸೇನ್‌ ಅವರಿಗೆ ರಕ್ತದೊತ್ತಡ ಸಮಸ್ಯೆ ಇತ್ತು. ಕಳೆದ ವಾರದಿಂದ ಹೃದಯ ಸಂಬಂಧಿ ಸಮಸ್ಯೆಯಿಂದ ಅವರನ್ನು ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯ ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದರು. ಜಾಕೀರ್ ಹುಸೇನ್ ಅಸ್ವಸ್ಥರಾಗಿದ್ದು ಅವರ ಸ್ಥಿತಿ ಗಂಭೀರವಾಗಿದೆ ಎಂದು ಅವರ ಸ್ನೇಹಿತ...
ಅಂತಾರಾಷ್ಟ್ರೀಯದೆಹಲಿರಾಜಕೀಯರಾಷ್ಟ್ರೀಯಸುದ್ದಿ

‘ಇಡೀ ಜಗತ್ತು ಮೋದಿಯನ್ನು ಪ್ರೀತಿಸುತ್ತದೆ’; ಗೆಲುವಿನ ಬಳಿಕ ಮೊದಲ ಕರೆಯಲ್ಲೇ ಪ್ರಧಾನಿಯನ್ನು ಹಾಡಿ ಹೊಗಳಿದ ಟ್ರಂಪ್! – ಕಹಳೆ ನ್ಯೂಸ್

ನವದೆಹಲಿ: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ (Presidential Election) ಡೊನಾಲ್ಡ್ ಟ್ರಂಪ್ (Donald Trump) ಗೆದ್ದ ನಂತರ ಪ್ರಧಾನಿ ಮೋದಿ (PM Modi) ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದರು. ಪ್ರಧಾನಿ ಮೋದಿ ಅವರು ತಮ್ಮ ಸ್ನೇಹಿತ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಅದ್ಭುತವಾದ ಸಂಭಾಷಣೆಯನ್ನು ನಡೆಸಿದ್ದೇನೆ ಮತ್ತು ಅವರ ಮಹಾನ್ ಗೆಲುವಿಗೆ ಅಭಿನಂದನೆಗಳು ಎಂದು ಟ್ವಿಟರ್‌ನಲ್ಲಿ ತಿಳಿಸಿದ್ದಾರೆ. ತಂತ್ರಜ್ಞಾನ, ರಕ್ಷಣೆ, ಇಂಧನ, ಬಾಹ್ಯಾಕಾಶ ಮತ್ತು ಇತರ ಹಲವು ಕ್ಷೇತ್ರಗಳಲ್ಲಿ ಭಾರತ-ಯುಎಸ್ ಸಂಬಂಧಗಳನ್ನು ಮತ್ತಷ್ಟು...
1 2 3 4 15
Page 2 of 15