ಭಾರತೀಯರಿಗೆ ಥೈಲ್ಯಾಂಡ್ ಪ್ರವಾಸ ಮುಕ್ತ ಮುಕ್ತ: ಇನ್ಮುಂದೆ ಬೇಡ ವೀಸಾ! – ಕಹಳೆ ನ್ಯೂಸ್
ಡಿಜಿಟಲ್ ಡೆಸ್ಕ್: ವಿದೇಶಕ್ಕೆ ಪ್ರವಾಸ ಹೋಗಬೇಕು ಎಂದು ಕನಸು ಕಾಣುವವರಿಗೆ ಶುಭ ಸುದ್ದಿ. ಥೈಲ್ಯಾಂಡ್ ಪ್ರವಾಸ ಈಗ ಭಾರತೀಯರಿಗೆ ವೀಸಾ ಮುಕ್ತವಾಗಿದೆ. ಹೌದು, ಥೈಲ್ಯಾಂಡ್ ಪ್ರವೇಶವನ್ನು ಭಾರತೀಯ ಪ್ರಯಾಣಿಕರಿಗೆ ವೀಸಾ ಮುಕ್ತವಾಗಿ ಅನಿರ್ದಿಷ್ಟವಧಿ ವರೆಗೆ ವಿಸ್ತರಿಸಲಾಗಿದೆ. ಥೈಲ್ಯಾಂಡ್ ಪ್ರವಾಸೋದ್ಯಮ ಆಕರ್ಷಣೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದ್ದು, ಈ ಯೋಜನೆಯ ಭಾಗವಾಗಿ ಭಾರತೀಯರಿಗೆ ವೀಸಾ ಮುಕ್ತ ಪ್ರವೇಶವನ್ನು ಕಲ್ಪಿಸಲಾಗಿದೆ. ಭಾರತೀಯರಿಗೆ ಥೈಲ್ಯಾಂಡ್ ವೀಸಾ ಮುಕ್ತ ಪ್ರವೇಶ ನೀತಿಯ ಅನಿರ್ದಿಷ್ಟ ಅವಧಿಗೆ ವಿಸ್ತರಿಸಲಾಗಿದ್ದು, ಇದು...