ಮೇ 10ರೊಳಗೆ ದೇಶ ಬಿಟ್ಟು ಹೋಗಿ : ಭಾರತೀಯ ಮಿಲಿಟರಿಗೆ ಮಾಲ್ಡೀವ್ಸ್ ಅಧ್ಯಕ್ಷರಿಂದ ಡೆಡ್ಲೈನ್ – ಕಹಳೆ ನ್ಯೂಸ್
ನವದೆಹಲಿ : ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜು ಅವರ ಭಾರತ ವಿರೋಧಿ ಮಾತು ಎಗ್ಗಿಲ್ಲದೇ ಮುಂದುವರಿಯುತ್ತಿದೆ. ಮೇ 10ರೊಳಗೆ ಎಲ್ಲಾ ಭಾರತೀಯ ತುಕಡಿಗಳು ಮಾಲ್ಡೀವ್ಸ್ ನೆಲದಿಂದ ಕಾಲ್ತೆಗೆಯಬೇಕು ಎಂದು ಅವರು ಮತ್ತೆ ತಾಕೀತು ಮಾಡಿದ್ದಾರೆ. ಬಾ ಅತೋಲ್ ಎಂಬಲ್ಲಿ ಸಾರ್ವಜನಿಕ ಸಮಾವೇಶದ ವೇಳೆ ಮುಯಿಜು ಅವರ ಭಾರತ ವಿರೋಧಿ ಮಾತುಗಳು ಕೇಳಿಬಂದವು. ಮೇ 10ರ ನಂತರ ಯಾವ ಭಾರತೀಯ ಮಿಲಿಟರಿ ಸಿಬ್ಬಂದಿಯೂ ಮಾಲ್ಡೀವ್ಸ್ನಲ್ಲಿ ಇರುವುದಿಲ್ಲ. ನಾಗರಿಕ ಪೋಷಾಕಿನಲ್ಲಿರುವವರೂ ಇಲ್ಲಿಂದ ಜಾಗ ಖಾಲಿ...