Monday, January 20, 2025

ಕ್ರೀಡೆ

ಕ್ರೀಡೆ

ಟೀಂ ಇಂಡಿಯಾದ ಕೋಚಿಂಗ್‌ ಸಿಬ್ಬಂದಿಯನ್ನು ಹೊಸದಾಗಿ ಆಯ್ಕೆ ಮಾಡಲು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ ನಿರ್ಧರಿ – ಕಹಳೆ ನ್ಯೂಸ್

ನವದೆಹಲಿ: ತಂಡದ ಕೋಚಿಂಗ್‌ ಸಿಬ್ಬಂದಿಯನ್ನು ಹೊಸದಾಗಿ ಆಯ್ಕೆ ಮಾಡಲು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ನಿರ್ಧರಿಸಿದ್ದು, ಮಂಗಳವಾರ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.  ಐಸಿಸಿ ಏಕದಿನ ವಿಶ್ವಕಪ್‌ ಸೆಮಿಫೈನಲ್‌ನಲ್ಲಿ ಸೋತು ತವರಿಗೆ ವಾಪಸಾಗಿರುವ ಭಾರತ ಕ್ರಿಕೆಟ್‌ ತಂಡದಲ್ಲಿ ಕೆಲ ಬದಲಾವಣೆಗಳಾಗುವುದು ಖಚಿತವಾಗಿದೆ. ಭಾರತ ತಂಡದ ಕೋಚ್‌ ಆಗುವವರು ಕನಿಷ್ಠ 2 ವರ್ಷ ಅಂತಾರಾಷ್ಟ್ರೀಯ ತಂಡದ ಕೋಚ್‌ ಆಗಿದ್ದ ಅನುಭವವಿರಬೇಕು ಹಾಗೂ 60 ವರ್ಷಕ್ಕಿಂತ ಕೆಳಪಟ್ಟವರಾಗಿರಬೇಕು  ಎಂದು ಬಿಸಿಸಿಐ ಷರತ್ತು ವಿಧಿಸಿದೆ....
ಕ್ರೀಡೆ

ನಿವೃತ್ತಿ ನಂತರ ಬಿಜೆಪಿ ಪಕ್ಷ ಸೇರ್ತಾರಂತೆ ಟೀಮ್ ಇಂಡಿಯಾದ ಕೂಲ್ ಕ್ಯಾಪ್ಟನ್..?! – ಕಹಳೆ ನ್ಯೂಸ್

ನವದೆಹಲಿ: ಭಾರತ ಕ್ರಿಕೆಟ್ ತಂಡದ ಯಶಸ್ವಿ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಕ್ರೀಡಾಕ್ಷೇತ್ರದಿಂದ ನಿವೃತ್ತರಾಗಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಈ ನಡುವೆಯೇ ನಿವೃತ್ತಿ ನಂತರ ಅವರು ಬಿಜೆಪಿ ಸೇರಿ, ರಾಜಕೀಯ ರಂಗದಲ್ಲಿ ಎರಡನೇ ಇನಿಂಗ್ಸ್ ಆರಂಭಿಸಲಿದ್ದಾರೆಂಬ ಸುದ್ದಿ ಹರಿದಾಡುತ್ತಿದೆ. ಟೀಮ್ ಇಂಡಿಯಾದ ವಿಕೆಟ್ ಕೀಪರ್ ಮತ್ತು ಆಕ್ರಮಣಕಾರಿ ಬ್ಯಾಟ್ಸ್‍ಮೆನ್ ಆಗಿರುವ ಧೋನಿ ನಿವೃತ್ತರಾದ ಬಳಿಕ ಬಿಜೆಪಿ ಸೇರಲಿದ್ದಾರೆಂದು ಕೇಂದ್ರ ಮಾಜಿ ಸಚಿವ ಮತ್ತು ಪಕ್ಷದ ಮುಖಂಡ ಸಂಜಯ್...
ಕ್ರೀಡೆಸುದ್ದಿ

ಸ್ಪೀಡ್ ಬೌಲಿಂಗ್‍ಗೆ ಬ್ಯಾಟ್ಸ್ ಮ್ಯಾನ್ ದವಡೆಯಿಂದ ಚಿಮ್ಮಿದ ರಕ್ತ; ಕ್ರಿಕೆಟ್ ಮೈದಾನದಲ್ಲಿ ಅವಘಡ – ಕಹಳೆ ನ್ಯೂಸ್

ಲಂಡನ್: ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಆಸ್ಟ್ರೇಲಿಯಾದ ಆಟಗಾರ ಅಲೆಕ್ಸ್ ಕ್ಯಾರಿ ಅವರು ಸ್ಪೀಡ್ ಬೌಲಿಂಗ್ ದಾಳಿಗೆ ಗಾಯಗೊಂಡಿರುವ ಘಟನೆ ನಡೆದಿದೆ. ಬರ್ಮಿಂಗ್  ಹ್ಯಾಮ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಇಂಗ್ಲೆಂಡ್ ನ ವೇಗಿ ಜೋಫ್ರಾ ಆರ್ಚರ್ ಎಸೆದ ಮಾರಕ ಚೆಂಡು ಕ್ಯಾರಿ ಮುಖಕ್ಕೆ ಬಡಿದ ಘಟನೆ ನಡೆಯಿತು. ಈ ವೇಳೆ ಕ್ಯಾರಿ ತಲೆಗೆ ಹಾಕಿದ್ದ ಹೆಲ್ಮೆಟ್ ಕಿತ್ತು ಬಂದಿತ್ತು. ಆರ್ಚರ್ 139 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡಿದ್ದರು. ಚೆಂಡನ್ನು...
ಕ್ರೀಡೆಸುದ್ದಿ

ವಿಶ್ವಕಪ್‍ನಿಂದ ಹೊರಬಿದ್ದ ಟೀಮ್ ಭಾರತ; ಫೈನಲ್ ಗೆ ನ್ಯೂಝಿಲ್ಯಾಂಡ್ ಎಂಟ್ರಿ – ಕಹಳೆ ನ್ಯೂಸ್

ಮ್ಯಾಂಚೆಸ್ಟರ್ : ಎರಡು ಬಾರಿಯ ವಿಶ್ವಕಪ್ ವಿಜೇತ ಭಾರತ ತಂಡವು ನ್ಯೂಝಿಲ್ಯಾಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಸೋಲುವ ಮೂಲಕ ವಿಶ್ವಕಪ್‍ನಿಂದ ಹೊರ ನಡೆದಿದೆ. ಈ ಮೂಲಕ 2019ರ ವಿಶ್ವಕಪ್ ಗೆಲ್ಲುವ ಫೇವರೇಟ್ ತಂಡ ಎನಿಸಿಕೊಂಡಿದ್ದ ಕೊಹ್ಲಿ ಪಡೆಯು ಸೆಮಿಫೈನಲ್ ನಲ್ಲಿ ಸೋಲಿನ ರುಚಿ ಅನುಭವಿಸಿತು. ಜಡೇಜ ಹಾಗೂ ಧೋನಿಯ ಸಾಹಸದಿಂದ ರೋಚಕ ಘಟ್ಟ ತಲುಪಿದ್ದ ಪಂದ್ಯವು ಕೊನೆ ಕ್ಷಣದಲ್ಲಿ ಕೈ ಜಾರಿದ್ದು, ನ್ಯೂಝಿಲ್ಯಾಂಡ್ ಫೈನಲ್ ತಲುಪಿದೆ. ಭಾರತದ ಪರ ಜಡೇಜ(77)...
ಕ್ರೀಡೆಸುದ್ದಿ

ವಿಶ್ವವಿದ್ಯಾಲಯ ಕ್ರೀಡಾಕೂಟದಲ್ಲಿ ಭಾರತದ ಓಟಗಾರ್ತಿ ದ್ಯುತಿ ಚಾಂದ್ ಗೆ 100 ಮೀ ಓಟದಲ್ಲಿ ಚಿನ್ನದ ಪದಕ – ಕಹಳೆ ನ್ಯೂಸ್

ನಪೋಲಿ; ಭಾರತದ ಓಟಗಾರ್ತಿ ದ್ಯುತಿ ಚಾಂದ್ ಅವರು ಇಟಲಿಯ ನಪೋಲಿಯಲ್ಲಿ ನಡೆಯುತ್ತಿರುವ ವಿಶ್ವವಿದ್ಯಾಲಯ ಕ್ರೀಡಾಕೂಟದ 100 ಮೀ ಓಟದಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ. ಈ ಮೂಲಕ ಪ್ರಸಕ್ತ ಕ್ರೀಡಾಕೂಟದಲ್ಲಿ ಸ್ವರ್ಣ ಪದಕ ಗೆದ್ದ ಮೊದಲ ಭಾರತೀಯ ಓಟಗಾರ್ತಿ ಎಂಬ ಮೈಲಿಗಲ್ಲು ಸೃಷ್ಟಿಸಿದರು. ಪದಕದ ಸುತ್ತಿನಲ್ಲಿ ದ್ಯುತಿ ಚಾಂದ್ ಅವರು 100ಮೀ ಅಂತರವನ್ನು 11.32 ಸೆಕೆಂಡ್‍ಗಳಲ್ಲಿ ಕ್ರಮಿಸುವ ಮೂಲಕ ಚಿನ್ನದ ಪದಕಕ್ಕೆ ಭಾಜನರಾದರು. ಇದಕ್ಕೂ ಮುನ್ನ ಅವರು 100 ಮೀ ಓಟವನ್ನು...
ಕ್ರೀಡೆ

ಧೋನಿ ವಿಶ್ವಕಪ್ ಟೂರ್ನಿ ಬಳಿಕ ಎಲ್ಲಾ ಮಾದರಿ ಕ್ರಿಕೆಟ್‌ಗೆ ವಿದಾಯ – ಕಹಳೆ ನ್ಯೂಸ್

ಲಂಡನ್: ವಿಶ್ವಕಪ್ ಟೂರ್ನಿ ಕೆಲ ಕ್ರಿಕೆಟಿಗರ ಪಾಲಿಗೆ ಸ್ಮರಣೀಯವಾದರೆ ಕೆಲವರಿಗೆ ನುಂಗಲಾರದ ತುತ್ತಾಗಿದೆ. ನಿಧಾನಗತಿಯ ಬ್ಯಾಟಿಂಗ್‌ನಿಂದ ಸತತ ಟೀಕೆ ಎದುರಿಸುತ್ತಿರುವ ಹಿರಿಯ ಕ್ರಿಕೆಟಿಗ ಎಂ.ಎಸ್.ಧೋನಿಗೆ ಈ ವಿಶ್ವಕಪ್ ಟೂರ್ನಿ ಹೆಚ್ಚಿನ ಸಿಹಿ ನೀಡಿಲ್ಲ. ಧೋನಿ ಬ್ಯಾಟಿಂಗ್ ಕುರಿತು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ವಿರೋಧ ವ್ಯಕ್ತಪಡಿಸಿದ್ದರು. ಇದೀಗ ಧೋನಿ ವಿಶ್ವಕಪ್ ಟೂರ್ನಿ ಬಳಿಕ ಎಲ್ಲಾ ಮಾದರಿ ಕ್ರಿಕೆಟ್‌ಗೆ ವಿದಾಯ ಹೇಳಲು ನಿರ್ಧರಿಸಿದ್ದಾರೆ ಎಂದು ವರದಿಯಾಗುತ್ತಿದೆ. ಆದರೆ ಇದು ಊಹಾಪೋಹ, ಈ ಕುರಿತು ಧೋನಿ...
ಕ್ರೀಡೆಸುದ್ದಿ

ಮತ್ತೆ ಬಾಕ್ಸಿಂಗ್ ರಿಂಗ್‍ನತ್ತ ವಿಜೇಂದರ್ ಚಿತ್ತ – ಕಹಳೆ ನ್ಯೂಸ್

ಭಾರತದ ಖ್ಯಾತ ಬಾಕ್ಸರ್ ವಿಜೇಂದರ್ ಸಿಂಗ್ ಅಮೆರಿಕದಲ್ಲಿ ಜುಲೈ 13ರಂದು ನಡೆಯಲಿರುವ ವೃತ್ತಿಪರ ಬಾಕ್ಸಿಂಗ್ ಕೂಟದಲ್ಲಿ ಆಡಲಿದ್ದಾರೆ. ಗಾಯದ ಕಾರಣದಿಂದ ಕಳೆದ ಒಂದು ವರ್ಷದಿಂದ ಯಾವುದೇ ಬಾಕ್ಸಿಂಗ್ ಕೂಟದಲ್ಲಿ ಕಾಣಿಸಿಕೊಳ್ಳದ ವಿಜೇಂದರ್, ಇದೀಗ ಅಮೆರಿಕದ ವೃತ್ತಿಪರ ಬಾಕ್ಸಿಂಗ್ ಕೂಟದ ಮೂಲಕ ಸ್ಪರ್ಧಾಕಣಕ್ಕೆ ಇಳಿಯುತ್ತಿದ್ದಾರೆ. 33 ವರ್ಷದ ವಿಜೇಂದರ್ ಮೊದಲ ಪಂದ್ಯದಲ್ಲಿ ಅಮೆರಿಕದ ಮೈಕ್ ಸ್ನಿಡರ್ ಅವರನ್ನು ಎದುರಿಸಲಿದ್ದಾರೆ. ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಸ್ಪರ್ಧಿಸಿದ ವಿಜೇಂದರ್ ಸೋಲು...
ಕ್ರೀಡೆ

ಐಸಿಸಿ ಏಕದಿನ ಕ್ರಿಕೆಟ್ ರ‌್ಯಾಂಕಿಂಗ್ ನಲ್ಲಿ ಅಗ್ರಸ್ಥಾನಕ್ಕೇರಿದ ಭಾರತ ತಂಡ – ಕಹಳೆ ನ್ಯೂಸ್

ಮ್ಯಾಂಚೆಸ್ಟರ್: ಐಸಿಸಿ ಏಕದಿನ ಕ್ರಿಕೆಟ್ ರ‌್ಯಾಂಕಿಂಗ್ ನಲ್ಲಿ ಭಾರತ ತಂಡ ಅಗ್ರಸ್ಥಾನಕ್ಕೇರಿದೆ. ಗುರುವಾರ ನೂತನವಾಗಿ ಬಿಡುಗಡೆಯಾದ ಏಕದಿನ ರ‌್ಯಾಂಕಿಂಗ್ ನಲ್ಲಿ ಭಾರತ ಮೊದಲ ಸ್ಥಾನಕ್ಕೇರಿದೆ. ವಿಶ್ವಕಪ್‌ನಲ್ಲಿ ಅಜೇಯವಾಗಿ ಉಳಿದಿರುವ ಭಾರತ ತಂಡ, ಇಂಗ್ಲೆಂಡನ್ನು  ಹಿಂದಿಕ್ಕಿ ಮೊದಲ ಸ್ಥಾನ ಪಡೆದಿದೆ. ಕಳೆದ 2 ಪಂದ್ಯಗಳಲ್ಲಿ ಸೋತಿರುವ ಆತಿಥೇಯ ಇಂಗ್ಲೆಂಡ್ ಹಿನ್ನಡೆ ಅನುಭವಿಸಿದ್ದು, 122 ಅಂಕಗಳೊಂದಿಗೆ 2ನೇ ಸ್ಥಾನಕ್ಕೆ ಕುಸಿದಿದೆ. ಇನ್ನೂ ಬುಧವಾರ ಪಾಕಿಸ್ತಾನ ವಿರುದ್ಧ ಸೋತ ನ್ಯೂಜಿಲೆಂಡ್ 114 ಅಂಕಗಳಿಂದ 3ನೇ...
1 19 20 21 22 23 30
Page 21 of 30